ಹೃದಯ ಸಂವಾದ (ಇಬುಕ್)

ಹೃದಯ ಸಂವಾದ (ಇಬುಕ್)

Regular price
$3.99
Sale price
$3.99
Regular price
Sold out
Unit price
per 
Shipping does not apply

GET FREE SAMPLE

 

ಕವಿ-ಕಾವ್ಯ ವಿಮರ್ಶೆ, ಐದು ಲೇಖನಗಳು.

ಹದಿನಾಲ್ಕು ವರ್ಷಗಳ ಹಿಂದೆ ಶ್ರೀ ಕುವೆಂಪು ಅವರು ಮೊದಲನೆಯ ಆನರ್ಸ್ ತರಗತಿಯಲ್ಲಿ ಪಂಪಭಾರತವನ್ನು ಪಾಠ ಹೇಳುವಾಗ ನನ್ನ ಮನಸ್ಸಿಗೆ ಕಾವ್ಯಾ ಸ್ವಾದನಪಥವೊಂದು ತೋರಿಬಂತು. ಮುಂದಿನ ತರಗತಿಗಳಲ್ಲಿ ಅವರು ಕಾವ್ಯ ಮೀಮಾಂಸೆಯನ್ನು ಬೋಧಿಸುವಂದು ನನಗಾದಾರಿ ಸುಸ್ಪಷ್ಟವಾಗುತ್ತ ಬಂತು. ಈ ಮುಂದಿನ ಪ್ರಬಂಧಗಳಲ್ಲಿ ಪಡಿಮೆಗೊಂಡಿರುವ ಭಾವ ವಿಚಾರಗಳೇನಿದ್ದರೂ ಅವರು ಅಂದು ನನ್ನ ಮನಸ್ಸಿನಲ್ಲಿ ಊರಿದ್ದ ಬಿತ್ತನೆಯ ಫಲವೆ, ಅವರ ದೋಹ ದದ ಫಲವೆ ಆಗಿವೆ. ಈ ವಿಚಾರವಾಗಿಯೂ ನಾನವರಿಗೆ ಎಷ್ಟು ಋಣಿಯಾಗಿದ್ದೇ ನೆಯೋ ನನಗೆ ತಿಳಿಯದು. ಗುರು ತೋರಿದ ಈ ಕಾವ್ಯಾನುಭವಮಾರ್ಗದಲ್ಲೆ ಮುಂದೆ ನನ್ನ ಮೆಚ್ಚಿನ ಭಕ್ತಿಯ ಪ್ರಾಚೀನ ಅರ್ವಾಚೀನ ಕಾವ್ಯಗಳನ್ನೆಲ್ಲ ನಡೆಸಿ ತರಬೇಕೆಂದು ಪ್ರಬಲವಾದ ಬಯಕೆಯಿದೆ. ಅದರ ಸಾಫಲ್ಯ ಇಂದಿನ ಈ ಪ್ರಯತ್ನದ ಸಾರ್ಥಕ್ಯದಲ್ಲಿದೆಯಷ್ಟೆ.

ಈ ಪುಸ್ತಕವನ್ನು ನನ್ನ ಮತ್ತಿಬ್ಬರು ಪೂಜ್ಯ ಆಚಾರ್ಯರಿಗೆ ಅರ್ಪಿಸುವ ಬಯಕೆ ಬಹಳ ದಿನಗಳಿಂದಿತ್ತು. ಅವರಿಬ್ಬರು, ಒಬ್ಬೊಬ್ಬರೂ ಒಂದು ವಿಧವಾಗಿ ತಮ್ಮ ವಿದ್ವತ್ತಿನಿಂದ, ತಮ್ಮ ಪ್ರಾಮಾಣಿಕ ವ್ಯಾಸಂಗದ ನಿಷ್ಠೆಯಿಂದ ಮೇಲಾಗಿ ತಮ್ಮ ನಿರಾಡಂಬರವಾದ ಆರ್ಭಟವಿಲ್ಲದ ಶಿಷ್ಯವಾತ್ಸಲ್ಯದಿಂದ ನನಗೆ ಪೂಜ್ಯರಾಗಿದ್ದಾರೆ, ಪ್ರಿಯರಾಗಿದ್ದಾರೆ. ನನ್ನಂಥ ಅಶಿಸ್ತಿನ ಶಿಷ್ಯನ ಮೇಲೂ ಅವರು ತೋರಿರುವ ವೈಯಕ್ತಿಕ ಆಸಕ್ತಿ ವಾತ್ಸಲ್ಯಗಳು ನಮ್ರ ಕೃತಜ್ಞತೆಯಿಂದ ಮಾತ್ರವೆ ನೆನೆದು ಕೊಳ್ಳಬೇಕಾದಂಥವು. ಅವರ ವಿದ್ವತ್ತು, ಖಚಿತಜ್ಞಾನ, ಸಂಶೋಧನ ನಿಷ್ಠೆ ಗಳೆಲ್ಲ ನನಗೆ ಎಟುಕದ ಆದರ್ಶಗಳೇ ಆದರೂ ಅವರ ನಿರಾಡಂಬರ ಶ್ರದ್ಧೆ ಶಿಷ್ಯ ಪ್ರೀತಿಗಳಂತೂ ನನ್ನನ್ನು ಸದಾ ಚೈಮುಂಡಾಡುತ್ತಲೆ ಇರುತ್ತವೆ. ಇವರಿಬ್ಬರೂ ನನಗೆ ಪರಸ್ಪರಪೂರಕವಾದ ಒಬ್ಬರೆ ಆಗಿದ್ದಾರೆ. 1948 ರ ವೇಳೆಯಲ್ಲಿ ಮೊದಲ ಬಾರಿಗೆ ನಾನು ಈ ಇಬ್ಬರನ್ನೂ ಕಂಡದ್ದು ಸೆಂಟ್ರಲ್ ಕಾಲೇಜಿನ ಯೂನಿ ಯನ್ ಹಾಲಿನಲ್ಲಿ-ಶ್ರೀ ಅವರ ಸ್ಮರಣಾರ್ಥವಾಗಿ ಏರ್ಪಡಿಸಿದ ಸಭೆಯಲ್ಲಿ. ಅಂದು ಬಹು ಹಿಂದೆ, ನಾಲ್ಕಾಣೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತುಕೊಂಡು ನಾನವರನ್ನು ಕೇಳಿದೆ ನೋಡಿದೆ. ಆಗ ಅವರು ಹೇಗೆ ಕಂಡರೊ ಈಗಲೂ ಹಾಗೆಯೆ ಕಾಣುತ್ತಿದ್ದಾರೆ. ಆಗ ನಾನಂದುಕೊಂಡಿದ್ದೆ ಇವರಿಬ್ಬರು ಅಣ್ಣ ತಮ್ಮಂದಿರಿದ್ದಿರಬೇಕೆಂದು. ಸಹೋದರರಲ್ಲದಿದ್ದರೂ ಗುರುಸಹೋದರರಾದ ಅವರು ಅಂದು ಕಂಡಿದ್ದಂತೆಯೆ ಇದ್ದಾರೆ. ವ್ಯತ್ಯಾಸವಿಷ್ಟೆ, ಆಗವರಿಗೆ ಪೇಟ ಟೈಗಳಿದ್ದುವು-ಈಗಿಲ್ಲ. ಈ ನನ್ನ ಪ್ರಿಯಗುರುಗಳಿಗೆ ನನ್ನ ದೇಸಿ ಭಕ್ತಿಯ ಪ್ರತೀಕವಾಗಿ ಈ ಗ್ರಂಥವನ್ನರ್ಪಿಸುತ್ತೇನೆ. ಇದವರ ಪ್ರೀತಿಗೆ ಪಾತ್ರವಾದರೆ ನಾನಷ್ಟೆ ಧನ್ಯ.

ಈ ಹಿಂದೆಯೆ ಪ್ರಕಟವಾಗಿದ್ದ ಈ ಪ್ರಬಂಧಗಳು ಪುಸ್ತಕ ರೂಪದಲ್ಲಿ ಮೈ ಗೂಡಿಬರಲು ಕಾರಣರಾದವರು ನನ್ನ ಹಿತೈಷಿಗಳಾದ ಪ್ರಿಯಗುರುಗಳಿಬ್ಬರು. ಅವರು, ಇದಕ್ಕೆ ಪ್ರೇರಕರಾದ ಶ್ರೀ ದೇಜಗೌ ಅವರು ಹಾಗೂ ಪ್ರಕಾಶಕರಾಗಿ ಇದಕ್ಕೆ ಸಾಧಕರಾದ ಶ್ರೀ ಎಸ್. ವಿ. ಪರಮೇಶ್ವರ ಭಟ್ಟರು. ಈ ಇಬ್ಬರೂ ವಿದ್ಯಾಗುರುಗಳು ನನ್ನ ಶ್ರೇಯಸ್ಸಿನಲ್ಲಿ ತೋರಿರುವ ಆಸಕ್ತಿಗಾಗಿ ನಾನು ಕೃತಜ್ಞತಾಪೂರ್ವಕ ವಂದನೆಗಳನ್ನು ಸಲ್ಲಿಸುವೆ.

ಇಲ್ಲಿನ ಪ್ರಬಂಧಗಳಲ್ಲಿ ಕಡೆಯದೊಂದನ್ನುಳಿದೆಲ್ಲವೂ ಈ ಹಿಂದೆಯೆ ಪ್ರಬುದ್ಧ ಕರ್ಣಾಟಕದಲ್ಲಿ ಬೆಳಕುಕಂಡಿದ್ದವು. ಮಹಾರಾಜಾ ಕಾಲೇಜು ಹಾಸ್ಟೆಲ್ ವಾರ್ಷಿಕಸಂಚಿಕೆಯಲ್ಲಿ 'ಬಸವಣ್ಣನವರ ವಚನಗಳಲ್ಲಿ ಪ್ರಾಣಿರೂಪಕ' ಎಂಬ ಲೇಖನ ಮೊದಲಬಾರಿಗೆ ಪ್ರಕಟವಾಯಿತು (1957). ಆಮೇಲೆ ಅದೇ ಲೇಖನ ಮತ್ತಷ್ಟು ಮೈಗೂಡಿಕೊಂಡು 'ದರ್ಶನ ವಿಮರ್ಶೆ' ಎಂಬ ಗ್ರಂಥದಲ್ಲಿ (ಸಂಪಾ ದಕರು : ಡಾ. ಜಿ. ಎಸ್. ಶಿವರುದ್ರಪ್ಪನವರು ಮತ್ತು ಡಾ. ಪ್ರಭುಶಂಕರ್ ಅವರು) ಪ್ರಕಟವಾಯಿತು. ಆಗಲೆ ಅದು ಪ್ರಬುದ್ಧಕರ್ಣಾಟಕದಲ್ಲೂ ಪ್ರಕಟ ಗೊಂಡಿತು. ಹಿಂದೆ ಬೆಳಕು ಕಂಡ ಬರಹಗಳು ಹೆಚ್ಚು ಪುಟಗೊಂಡು ಇಲ್ಲಿ ಪುಸ್ತಕವಾಗಿ ಮೈಪಡೆದು ಬಂದಿವೆ. ಹಿಂದೆ ಆ ಲೇಖನಗಳು ಪ್ರಕಾಶವಾಗಲು ಸಹಾಯರಾದ ಸಂಪಾದಕ ಮಿತ್ರರಿಗೆಲ್ಲ ನನ್ನ ಧನ್ಯವಾದಗಳು.

ಈ ಗ್ರಂಥ ಇಷ್ಟು ಬೇಗ ಇಷ್ಟು ಮುದ್ದಾಗಿ ಅಚ್ಚಾಗಿ ಬರಲು ನೆರವಾದ ಮಿತ್ರ ಶ್ರೀ ಜಿ. ಎಚ್. ಕೃಷ್ಣಮೂರ್ತಿ ಅವರಿಗೆ ಹಾಗೂ ಅವರ ಅಚ್ಚುಕೂಟದ ಸೇವಾವರ್ಗದವರಿಗೆ ನನ್ನ ಕೃತಜ್ಞತೆಗಳು.


ಪುಟಗಳು: 202
 
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !