ಹುಚ್ಚು ಮನಸ್ಸಿನ ಹತ್ತು ಮುಖಗಳು (ಇಬುಕ್)

ಹುಚ್ಚು ಮನಸ್ಸಿನ ಹತ್ತು ಮುಖಗಳು (ಇಬುಕ್)

Regular price
$15.99
Sale price
$15.99
Regular price
Sold out
Unit price
per 
Shipping does not apply

GET FREE SAMPLE

ನನ್ನ ಸಾರ್ವಜನಿಕ ಜೀವನದ ಎರಡೂವರೆ ದಶಕಗಳ ಅವಧಿ ಮುಗಿದ ಹೊತ್ತಿಗೆ, ಯಾವುದೋ ಒಂದು ಮನೋಲಹರಿಯಿಂದಾಗಿ ನನ್ನ ಆತ್ಮಕಥೆಯನ್ನು ಬರೆಯುವ ಪ್ರಯತ್ನ ಮಾಡಿದೆ. ನನ್ನ ಜೀವನ ವೃತ್ತ ನನ್ನ ಒಬ್ಬಿಬ್ಬರು ಮಿತ್ರರಿಗೆ ಕುತೂಹಲಕಾರಿಯಾಗಿ ಕಂಡುದರಿಂದ, ಅವರು ತಾವು ಅದನ್ನು ಬರೆಯುತ್ತೇವೆಂದು ಉತ್ಸುಕತೆ ತೋರಿಸಿದಾಗ ನಾನು ಅವರಿಗೆ ಪರಿಹಾಸ ಮಾಡುತ್ತ “ನೀವು ನನ್ನನ್ನು ಕೊಲ್ಲಬೇಕಿಲ್ಲ! ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆ'' ಎಂದುದುಂಟು. ಆನಂತರ ಅಂಥ ಒಂದು ಆತ್ಮಕಥಾನಕವನ್ನು ಬರೆಯತೊಡಗಿದೆ. ಅದರಲ್ಲಿ ನನ್ನ ಬಾಲ್ಯದಿಂದ ತೊಡಗಿ ಸುಮಾರು 1950ರ ತನಕ ದೊರೆತ ನನ್ನ ಅನುಭವಗಳನ್ನು ನನ್ನ ಬದುಕಿಗ ಸಂಬಂಧಪಟ್ಟ ವಿದ್ಯಮಾನಗಳನ್ನು ಬರೆದು ಮುಗಿಸಿದೆ. ಈ ಬರಹ ಸಾಕಷ್ಟು ಜನಪ್ರಿಯವಾಯಿತು ಎಂಬುದನ್ನು ಮನಗಂಡೆ. ಅದು ನನಗೆ ಸಾಕಷ್ಟು ಪ್ರಸಿದ್ಧಿಯನ್ನೂ ತಂದಿತು. ಮುಂದೆ ಒಂದು ದಶಕದ ಬಳಿಕ, ಆ ಅವಧಿಯಲ್ಲಿ ದೊರೆತ ಹಚ್ಚಿನ ಅನುಭವಗಳನ್ನು ಸೇರಿಸಿ, ಅದೇ ಬರಹದ ಎರಡನೇ ಆವೃತ್ತಿಯನ್ನು 1962ರ ಸುಮಾರಿಗೆ ಪ್ರಕಟಿಸಿದೆ. ಇದಾದ ಒಂದು ಒಂದೂವರೆ ದಶಕದ ಬಳಿಕ, ನನ್ನ ಹಳೆಯ ಆತ್ಮಕಥನದ ಕಡೆಗೆ ನನ್ನ ಮಿತ್ರರು ನನ್ನ ಗಮನ ಹರಿಸಿದರು. ಆ ಹೊತ್ತಿಗೆ ಆ ಆತ್ಮಕಥನದ ಎರಡನೇ ಆವೃತ್ತಿಯ ಪ್ರತಿಗಳು ಮುಗಿದು ಸಾಕಷ್ಟು ವರ್ಷಗಳು ಸಂದಿದ್ದುವು. ಅವನ್ನು ತಿರುಗಿ ಪ್ರಕಟಿಸಬಹುದಲ್ಲವೇ ಎಂದು ಯೋಚಿಸಿದಾಗ ಯಾಕೋ ನನ್ನ ಮನಸ್ಸಿಗೆ, ಹಾಗೆ ನಾನು ಬದುಕಿನ ಕಾಲಾನುಗತ ಘಟನಾವಳಿಗಳನ್ನು ಮುಂದುವರಿಸಿಕೊಂಡು ಹೋಗುವುದರಿಂದ, ನಾನು ಯಾವೆಲ್ಲ ಕ್ಷೇತ್ರಗಳಲ್ಲಿ ಆಸಕ್ತಿ ತಾಳಿ ಕೆಲಸ ನಡಸಿದ್ದೇನೋ ಅವುಗಳ ಪ್ರಯೋಜನ, ಅಂತಹದೇ ಆಸಕ್ತಿಯುಳ್ಳ ಜನರಿಗೆ ದೊರೆಯಬೇಡವೇ ಎಂಬ ಯೋಚನೆ ಮೂಡಿತು. ಅದರಿಂದಾಗಿ ನನ್ನ ಆಸಕ್ತಿಯ ವಿಷಯಗಳು ಮುಖ್ಯ ಎನಿಸಿದವು. ಆ ದೃಷ್ಟಿಯಿಂದ "ನಾನು ಮತ್ತು ಸಾಹಿತ್ಯ'', “ನಾನು ಮತ್ತು ಶಿಕ್ಷಣ'', ''ನಾನು ಮತ್ತು ನಾಟಕ''- ಹೀಗೆ ಬೇರೆ ಬೇರೆ ವಿಷಯಗಳಿಗೂ ನನಗೂ ಬೆಳೆದ ನಂಟುತನವನ್ನು ಕುರಿತು ಬರೆಯುವ ಯೋಚನೆ ಮಾಡಿದೆ. ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನದವರು ಆ ಸಂಬಂಧವಾದ ನನ್ನ ಬರವಣಿಗೆಯನ್ನು “ಸ್ಮೃತಿಪಟಲದಿಂದ'' ಎಂಬ ಹೆಸರಿನಲ್ಲಿ, ಮೂರು ಸಂಪುಟಗಳಲ್ಲಿ ಪ್ರಕಸಿದರು. ಅವುಗಳಲ್ಲಿ ಮೊದಲನೆಯ ಸಂಪುಟವು ದ್ವಿತೀಯ ಮುದ್ರಣವನ್ನು ಕಂಡಿತು.

 

ಪುಟಗಳು: 628

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !