ಹುಲಿಪತ್ರಿಕೆ 1

ಹುಲಿಪತ್ರಿಕೆ 1

Regular price
$5.99
Sale price
$5.99
Regular price
Sold out
Unit price
per 
Shipping does not apply

GET FREE SAMPLE

ಮಾಣಿ ದಡದತ್ತ ದಿಟ್ಟಿಸಿ ನೋಡಿ, ತನ್ನ ಜೇಬಿನಿಂದ ಬೆಂಕಿ ಪೆಟ್ಟಿಗೆಯ ಹೊರತೆಗೆದು ಕಡ್ಡಿಗೀರಿ, ತನ್ನ ಪಕ್ಕದಲ್ಲೇ ಇದ್ದ ಬುಡ್ಡಿದೀಪ ಹಚ್ಚಿ, ಮೊಳೆಗೆ ಸಿಕ್ಕಿಸಿದ್ದ ಅದನ್ನು ಕೈಯ್ಯಲ್ಲಿ ಹಿಡಿದು ದೋಣಿಯಿಂದಾಚೆ ದಡದತ್ತ ಚಾಚಿದ. ದೋಣಿ ಇಂಚಿಂಚೇ ದಡಕ್ಕೆ ಹತ್ತಿರಾಗುತ್ತಿತ್ತು. ಮಾಣಿಯನ್ನು ನೋಡಿ ದೋಣಿಯಲ್ಲಿದ್ದವರೆಲ್ಲ ದಡದತ್ತಲೇ ದಿಟ್ಟಿಸತೊಡಗಿದರು. ಅವರೆಲ್ಲರ ಸೋಜಿಗಕ್ಕೆ ದೀಪದ ಬೆಳಕಿಗೆ ದಡದಲ್ಲಿ ಕಣ್ಣುಗಳೆರಡು ಮಿನುಗತೊಡಗಿದವು. ದೋಣಿಯಲ್ಲಿ ಜನರ ಗುಸು-ಗುಸು ಮಾತು ಜೋರಾಗತೊಡಗಿತು. ದೋಣಿಯು ದಡಕ್ಕೆ ಮತ್ತೂ ಹತ್ತಿರಾಗುತ್ತಲೆ ಮಿನುಗುತ್ತಿದ್ದ ಕಣ್ಣ ಸುತ್ತಲ ಗೌಗಪ್ಪು, ಅದರ ಸುತ್ತಲು ಕಪ್ಪು ಪಟ್ಟೆಗಳ ಹಳದಿ ಚರ್ಮ ಗೋಚರಿಸಿ ಜನರ ಮಾತೆಲ್ಲ ಒಮ್ಮೆಲೆ ನಿಂತು ದೋಣಿಯಲ್ಲೆಲ್ಲ ಮಿಂಚು ಸಂಚಾರವಾದಂತಾಗಿ ಗುಮ್ಮನೆ ಮೌನ ಆವರಿಸಿತು.

ಸಾರಂಗ ಒಮ್ಮೆ ಮಾಣಿಯನ್ನು ನೋಡಿದ. ಅವನು ಅಲ್ಲಾಡದೆ, ಹಿಂದೆಯೂ ಸರಿಯದೆ ದೀಪವನ್ನು ಹಾಗೇ ಹಿಡಿದು ನಿಂತಿದ್ದ. ಮಿಕ್ಕವರ ಬಾಯಿಂದ ಉಸಿರೂ ಜೋರಾಗಿ ಹೊರಬರುತ್ತಿರಲಿಲ್ಲ. ಆಗಲೇ ಆಕಾಶದಲ್ಲಿ ಮಿಂಚೊಂದು ಹೊಳೆದು, ಹುಲಿಯ ಇಡಿರೂಪ ಗೋಚರಿಸಿ ಎಲ್ಲರಿಗೂ ಕಿವಿಯಲ್ಲಿ ತಂತಮ್ಮ ಎದೆಬಡಿತ ಕೇಳಲಾರಂಭಿಸಿತು. ಆದರೂ ಮಾಣಿ ದೀಪವ ಹಾಗೇ ಹಿಡಿದು ನಿಂತಿದ್ದ. ಹುಲಿಯೊಮ್ಮೆ ದೋಣಿಯನ್ನು ದಿಟ್ಟಿಸಿ, ನಿಧಾನವಾಗಿ ಹಿಂದೆ ಸರಿದು, ಹಿಂದಿದ್ದ ದಿಬ್ಬವನ್ನು ಏರಿ, ಕಪ್ಪು ಮರಗಳೊಳಗೆ ಅಂತರ್ಧಾನವಾಯಿತು. ಮಳೆ ಹನಿ ಹಾಕಲಾರಂಭಿಸಿತು.

ಭರವಸೆಯ ಯುವ ಬರಹಗಾರ ಅನುಷ್ ಶೆಟ್ಟಿಯವರ ಐದನೆಯ ಕಾದಂಬರಿ "ಹುಲಿ ಪತ್ರಿಕೆ - ೧" ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 ಪುಟಗಳು: 200