ಇದ್ದರೂ ಚಿಂತೆ

ಇದ್ದರೂ ಚಿಂತೆ

Regular price
$6.99
Sale price
$6.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ಶಿವರಾಮ ಕಾರಂತರ “ಇದ್ದರೂ ಚಿಂತೆಯಿಲ್ಲ” ಎಂಬ ಕಾದಂಬರಿಯನ್ನು ಇತ್ತೀಚೆಗಷ್ಟೇ ಓದಿದೆ.  ಕಾರಂತರ ದೂರದರ್ಶಿತ್ವದ ನಿಖರತೆಗೆ ಇದೇ ಸಾಕ್ಷಿ ಎನ್ನಿಸಿತು. ಅವರ ಕಾದಂಬರಿಯೆಂದರೆ ಅದು ಒಂದು ಕಾಲದ ಜನ ಜೀವನವನ್ನೇ ಪ್ರತಿನಿಧಿಸುವಂಥದ್ದು, ಸ್ಪಷ್ಟವಾಗಿ ನಿರೂಪಿಸಬಲ್ಲಂಥದ್ದು. ಸ್ವಾತಂತ್ರ್ಯದ ಆಸುಪಾಸಿನ ಕಾಲದಲ್ಲಿನ ಬಾರ್ಕೂರು, ಬ್ರಹ್ಮಾವರದ ಸುತ್ತಮುತ್ತಲ ಜನ ಜೀವನ, ಸ್ವಾತಂತ್ರ್ಯದ ನಶೆ ಇಲ್ಲಿನ ಜನರನ್ನು ತಟ್ಟಿದ ಬಗೆ, ಸ್ವಾತಂತ್ರ್ಯದ ಹೆಸರಿನಲ್ಲಿ ಓಡಾಡಿದ ಒಂದಷ್ಟು ಜನ, ಅದರಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಂಡ ಕೆಲವರ ಬಗೆ, ಈ ಎಲ್ಲವನ್ನೂ ಸಾದ್ಯಂತವಾಗಿ ವಿವರಿಸುತ್ತಾ ಕಥೆ ಹೆಣೆಯುತ್ತಾ ಹೋಗಿದ್ದಾರೆ. ಆ ಕೃತಿಯನ್ನು ವಿವರಿಸುವುದು ನನ್ನ ಉದ್ದೇಶವಲ್ಲ. ಆ ಕೃತಿಯಲ್ಲಿ ಬರುವ ಒಂದು ಮುಖ್ಯ ಪಾತ್ರ ಶೀನ ಭಟ್ಟರದ್ದು. ಪ್ರಾಮಾಣಿಕತೆ, ಸ್ವಾಭಿಮಾನಗಳನ್ನೇ ಉಸಿರಾಗಿಸಿಕೊಂಡು ಬದುಕಿದ ಶೀನ ಭಟ್ಟರು ಈ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ನಡೆಯುತ್ತಿದ್ದ ದಗಲ್ಬಾಜಿಗಳು,ಅನಾಚಾರಗಳನ್ನು ನೋಡಿಯೇ ಬ್ರಿಟಿಷರು ಇಲ್ಲಿ ಇದ್ದರೂ ಚಿಂತೆಯಿಲ್ಲ ಎಂಬ ಭಾವನೆ ತಾಳುತ್ತಾರೆ. ಅವರ ಎಣಿಕೆಯಂತೆಯೇ ಸ್ವಾತಂತ್ರ್ಯಾ ನಂತರ ದೇಶದಲ್ಲಿ ಅಪಾರ ಅರಾಜಕತೆ, ಗಲಭೆಗಳೊಂದಿಗೆ ಪ್ರಥಮ ಚುನಾವಣೆಯೂ ಸಂಪೂರ್ಣ ಭ್ರಷ್ಟಾಚಾರದೊಂದಿಗೆ ಕೊನೆಗೊಳ್ಳುತ್ತದೆ. ದುರದೃಷ್ಟವಶಾತ್ ಆ ಪಾತ್ರದ ಮೂಲಕ ಹೇಳಿದ ಕಾರಂತರ ಭವಿಷ್ಯವಾಣಿ ಸುಳ್ಳಾಗಲಿಲ್ಲ.

 

-ಮಧು ಭಟ್ ಕೆ

 

ಕೃಪೆ 

kannada.readoo.in

 

ಪುಟಗಳು: 232

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !