ಜಾತ್ರೆಯಲ್ಲಿ ಶಿವ (ಇಬುಕ್)

ಜಾತ್ರೆಯಲ್ಲಿ ಶಿವ (ಇಬುಕ್)

Regular price
$2.99
Sale price
$2.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಸಮಕಾಲೀನ ಕನ್ನಡ ಕವಯತ್ರಿಯರ ನಡುವೆ ವಿಭಿನ್ನವೂ ವಿಶಿಷ್ಟವೂ ಆದ ವ್ಯಕ್ತಿತ್ವವನ್ನುಳ್ಳ ಸವಿತಾ ಅವರ ಕವಿತೆ, ಬದುಕನ್ನು ಉತ್ಕಟವಾಗಿ ಪ್ರೀತಿಸುವ ಎಲ್ಲರ ಧ್ವನಿಯೂ ಆಗಿದೆ.

- ಜಿ.ಎಸ್. ಶಿವರುದ್ರಪ್ಪ

ನಿಮ್ಮ ಪದ್ಯಗಳ ನಿರಾಡಂಬರ ಸರಳತೆ, ಅನಿರೀಕ್ಷಿತ ಬೆಳವಣಿಗೆ ಮತ್ತು ಕೆಲವೆಡೆಯಲ್ಲಿನ ಸಾರ್ಥಕ ಮುಕ್ತಾಯ ಇವೊತ್ತಿನ ಕವಿಗಳಿಗೆ ಪಾಠವಾಗುವಂಥದು. ಸ್ತ್ರೀವಾದಿತ್ವದ ಉರುಬಿನಲ್ಲಿ ಬದುಕಿನ ಅನೇಕಮುಖಿ ಅನುಭವಗಳಿಗೆ ನೀವು ಎರವಾಗದಿರುವುದು ಹಾಗೂ ಆ ಅನುಭವಗಳನ್ನು ಸಂವೇದನಾತ್ಮಕವಾಗಿ ಪಡೆಯಲು ಉತ್ಸುಕರಾಗಿರುವುದು ಶ್ಲಾಘನೀಯವೆನ್ನಿಸುತ್ತದೆ. ನಮ್ಮ ಕವಯತ್ರಿಯರಲ್ಲೇ ನಿಮಗೊಂದು ವಿಶಿಷ್ಟ ಸ್ಥಾನವಿರುವುದನ್ನು ನಿಮ್ಮ ಪದ್ಯಗಳ ಮೂಲಕ ನಾನು ಗುರುತಿಸಿದ್ದೇನೆ.

- ಕೆ.ಎಸ್. ನಿಸಾರ್ ಅಹಮದ್

ನಿಮ್ಮ ಕವಿತೆಗಳೆಲ್ಲಾ ಮಧುರ ಧ್ವನಿಯವು. 'ಜಾತ್ರೆಯಲ್ಲಿ ಶಿವ' ನಿಮ್ಮೆಲ್ಲಾ ಹಿಂದಿನ ಕವಿತೆಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇದರ ಸರಳತೆ ಹಾಗೂ ತಿರುವುಗಳು ಬಹುಶಃ ನಿಮ್ಮ ಒಟ್ಟಾರೆ ಕಾವ್ಯದಲ್ಲೇ ವಿಶಿಷ್ಟವೆನಿಸುವಂಥವು.

- ಕೆ.ವಿ. ತಿರುಮಲೇಶ್

ಸವಿತಾ ಕಾವ್ಯ ತಂಗಾಳಿಯಂತೆ...

- ದೇವನೂರ ಮಹಾದೇವ

 

ABOUT THE AUTHOR 

ಸವಿತಾ ನಾಗಭೂಷಣ ಅವರು 11 ಮೇ 1961ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದರು. ಶಿವಮೊಗ್ಗಾದಲ್ಲಿ ಪದವಿ ಪೂರೈಸಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಅವರು ಮುಕ್ತವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಕಾಲೀನ ಕನ್ನಡ ಕಾವ್ಯದ ಪ್ರಮುಖರಲ್ಲೊಬ್ಬರೆಂದು ಪರಿಗಣಿತವಾಗಿರುವ ಇವರು 'ಸ್ತ್ರೀಲೋಕ' ಎಂಬ ವಿಶಿಷ್ಟ ರೂಪದ ಕಾದಂಬರಿಯನ್ನೂ ರಚಿಸಿದ್ದಾರೆ. 'ನಾ ಬರುತ್ತೇನೆ ಕೇಳು', 'ಚಂದ್ರನನ್ನು ಕರೆಯಿರಿ ಭೂಮಿಗೆ', 'ಹೊಳೆಮಗಳು', 'ಜಾತ್ರೆಯಲ್ಲಿ ಶಿವ', 'ದರುಶನ' - ಇವು ಇದುವರೆಗೆ ಪ್ರಕಟವಾಗಿರುವ ಅವರ ಕವನಸಂಕಲನಗಳು. 'ಆಕಾಶ ಮಲ್ಲಿಗೆ', 'ಕಾಡು ಲಿಲ್ಲಿ ಹೂವುಗಳು' - ಎಂಬ ಇವರ ಎರಡು ಕವಿತಾ ಸಂಕಲನಗಳೂ ಈವರೆಗೆ ಹೊರಬಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಬಹುಮಾನ, ಎಂ.ಕೆ. ಇಂದಿರಾ ಪ್ರಶಸ್ತಿ, ಡಾ. ಡಿ.ಎಸ್. ಕರ್ಕಿ ಕಾವ್ಯಪ್ರಶಸ್ತಿ, ವಾರಂಬಳ್ಳಿ ಕಾವ್ಯಪ್ರಶಸ್ತಿ, ಬಿ.ಎಚ್. ಶ್ರೀಧರ ಸಾಹಿತ್ಯಪ್ರಶಸ್ತಿ ಮೊದಲಾದ ಹಲವು ಮನ್ನಣೆಗಳಿಗೆ ಪಾತ್ರರಾಗಿರುವ ಇವರು ಸದ್ಯ ಸ್ವಯಮಿಚ್ಛೆಯ ನಿವೃತ್ತಿ ಪಡೆದು ಶಿವಮೊಗ್ಗೆಯಲ್ಲಿ ನೆಲೆಸಿದ್ದಾರೆ.

 

ಪುಟಗಳು: 53

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !