ಜಗದೋದ್ಧಾರ-ನ

ಜಗದೋದ್ಧಾರ-ನ

Regular price
$6.99
Sale price
$6.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

 

'ಜಗದೋದ್ಧಾರ-ನಾ' ಕಾದಂಬರಿ. ನನ್ನ 'ದೇವದೂತರು' ಕಾದಂಬರಿಯಂತೆ ಒಂದು ವ್ಯಂಗ್ಯ ಬರಹ. ನಮ್ಮ ದೇಶದಲ್ಲಿ ಮಹಾವಿಷ್ಣು ಅವತರಿಸುವುದನ್ನು ಬಿಟ್ಟಿದ್ದರೂ, ನಮಗೆ ತಿಳಿದಿಲ್ಲದ ಇನ್ನಾವನೋ ಒಬ್ಬ ದೇವನು ತಿರುತಿರುಗಿ ಅವತರಿಸುತ್ತಲೇ ಬಂದಿದ್ದಾನೆ. ಅಂಥ ನಾಲ್ಕಾರು ಅವತಾರಗಳು ಒಮ್ಮೆಗೇ ಈ ಪವಿತ್ರ ಭರತ ಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಅದರಿಂದಾಗಿ ನಮ್ಮ ಭರತದೇಶ, ವಿದೇಶಗಳಿಗೆ ಹಿಂದೂ ಧರ್ಮವನ್ನು ರವಾನಿಸಲು ಶಕ್ತವಾಗಿದೆ! ನಮ್ಮ ಭಕ್ತಕೋಟಿಗೆ ಗೀತೆಯ 'ಯದಾ ಯದಾಹಿ ಧರ್ಮಸ್ಯ...' ಭಗವಂತ ಒಮ್ಮೆಗೇ ಇಷ್ಟೆಲ್ಲ ಅವತಾರಗಳನ್ನು ಯಾತಕ್ಕೆ ತಳೆದ? ಎಂಬ ಸಂಶಯವೂ ಬಂದಿಲ್ಲ. ಅದು ಈ ದೇಶದಲ್ಲಿ ರಕ್ಕಸ ಹಾವಳಿ ಹೆಚ್ಚಿದ್ದಕ್ಕಂತು ಇರಲಾರದು. ಪ್ರಾಯಶಃ ಭರತ ಭೂಮಿಯ ರಕ್ಕಾಸತೀತರಾದ ಮಾನವರ ಬುದ್ಧಿ ಶೋಷಣೆಗಾಗಿ ಇರಲೂಬಹುದು.

ದೇಶಕ್ಕೆ ಗ್ಲಾನಿ ಬಂದಾಗ ದೇವರು ಅವತರಿಸುವ ಬದಲು, ಗ್ಲಾನಿಗೇ ಗಿರಾಕಿ ಹೆಚ್ಚಿರುವುದರಿಂದ. ಅದರ ವೃದ್ಧಿಗೆ, ಅದರದೇ ವ್ಯಾಪಾರ, ವ್ಯವಹಾರ ಬೆಳೆಯಲು ಆತ ಆಗಾಗ ಅವತರಿಸುತ್ತಿದ್ದಾನೆ- ಎಂದು ತಿಳಿಯಬೇಕು. ಹಾಗಾಗಿ, ಈ ಬರಹದ ಒಬ್ಬ ಎಷ್ಟು ಅನಿವಾರ್ಯವಾಗಿ ಒಂದೇ ಜೀವನದಲ್ಲಿ ತೆರತೆರನ ಅವತಾರಗಳನ್ನು ತಳೆಯಬೇಕಾದ ಸಂಕಷ್ಟ ಪ್ರಾಪ್ತಿಸಿತು.


- ಶಿವರಾಮ ಕಾರಂತ

 

ಪುಟಗಳು: 172

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !