ಜಲಗಾರ

ಜಲಗಾರ

Regular price
$1.49
Sale price
$1.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana


ಜಲಗಾರ ಸಾಮಾಜಿಕ ನಾಟಕದಂತಿದ್ದರೂ, ಅದರಲ್ಲಿ ಒಂದು ಪುರಾಣದ ಸೃಷ್ಟಿ ಇದೆ. ಪುರೋಹಿತಶಾಹಿ ಮತ್ತು ಅಸ್ಪೃಶ್ಯತೆ ಆಚರಣೆಯನ್ನು ಖಂಡಿಸುವ ಪ್ರಥಮ ಕನ್ನಡ ನಾಟಕವಿದು. ಈ ನಾಟಕದಲ್ಲಿ ವೈದಿಕರು,ರೈತ,ಭಿಕ್ಷುಕ ಮತ್ತು ಜಲಗಾರ ಎಂದರೆ ಪೌರಕಾರ್ಮಿಕರ ಪಾತ್ರಗಳನ್ನು ಪ್ರಮುಖವಾಗಿ ಚಿತ್ರಿಸಲಾಗಿದೆ. ಕಾಯಕದ ಮಹತ್ವವನ್ನು ಜಲಗಾರನ ಪಾತ್ರದ ಮೂಲಕ ಎತ್ತಿ ಹಿಡಿಯಲಾಗಿದೆ. ಇನ್ನೊಂದೆಡೆ ಕುವೆಂಪು ವೈದಿಕರ ಢಂಬಾಚಾರವನ್ನು ಬಯಲಿಗೆಳೆಯುತ್ತಾರೆ. ನೇಗಿಲ ಯೋಗಿ, ಕಬ್ಬಿಗ ಮತ್ತು ಕ್ರಾಂತಿಕಾರಿ ಎಂದು ಕೊಚ್ಚಿಕೊಳ್ಳುವ ಯುವಕರ ಇಬ್ಬಂದಿತನವನ್ನು ಜಲಗಾರ ಮತ್ತು ಭಿಕ್ಷುಕನೊಂದಿಗೆ ಇವರು ನಡೆದುಕೊಳ್ಳುವ ರೀತಿಯಿಂದ ಅನಾವರಣಗೊಳಿಸಿದ್ದಾರೆ. ಜಲಗಾರನಿಗೆ ಶಿವಗುಡಿಯ ಪ್ರವೇಶವಿಲ್ಲದ ಕುರಿತಾಗಿ ಗಂಭೀರವಾಗಿ ಚಿಂತಿಸುವ ಕುವೆಂಪು ಶಿವನನ್ನೇ ಜಲಗಾರನ ಮುಂದೆ ತಂದು ನಿಲ್ಲಿಸಿರುವ ನಡೆ ಅತ್ಯಂತ ಪ್ರಗತಿಪರ ಚಿಂತನೆಯಷ್ಟೇ ಅಲ್ಲ ಕ್ರಾಂತಿಕಾರಿ ವಿಚಾರವೂ ಹೌದು. ಜೀವನದಲ್ಲೆಂದೂ ದೇವಸ್ಥಾನ ಪ್ರವೇಶ ಮಾಡದ ವಿಶಿಷ್ಟ ಬಗೆಯ ಆಸ್ತಿಕ ಮನೋಭಾವದ ಕುವೆಂಪುರವರು, ಗಾಂಧೀಜಿಯವರ ಹರಿಜನೋದ್ಧಾರ ಚಳುವಳಿ, ಪೆರಿಯಾರರ ಚಳುವಳಿ, ರಾಮಕೃಷ್ಣ ಆಶ್ರಮದ ಪ್ರಭಾವಕ್ಕೊಳಗಾಗಿದ್ದವರು ಮತ್ತು ಅದೇ ಸಮಯದಲ್ಲಿ ರಷಿಯಾದಲ್ಲಿ ನಡೆದ ವೈಜ್ಞಾನಿಕ ಸಮಾಜವಾದಿ ಕ್ರಾಂತಿ ಕೂಡಾ ಕುವೆಂಪುರವರ ಮೇಲೆ ನಾಟಕ ರಚನೆ ಸಂದರ್ಭದಲ್ಲಿ ಸಾಕಷ್ಟು ಪ್ರಭಾವ ಬೀರಿದ ಅಂಶಗಳಾಗಿವೆ. ಲಂಕೇಶ್ ಅವರ ಮಾತುಗಳಲ್ಲಿ ಹೇಳಬೇಕೆಂದರೆ "ಅವರಿಗಿಂತ ಚೆನ್ನಾಗಿ ಬರೆದ ಕವಿಗಳು ಇರಬಹುದು, ಕಥೆಗಾರರು ಇರಬಹುದು. ಆದರೆ ಕುವೆಂಪು ಅವರನ್ನು ಮೀರಿಸುವ ಪ್ರತಿಭೆಯ ವ್ಯಕ್ತಿ ಮತ್ತು ಗುರು ಮತ್ತೊಬ್ಬರಿಲ್ಲ. ಸುತ್ತಣ ಜಗತ್ತು ಅಸೂಕ್ಷ್ಮವಾಗಿ, ಎಚ್ಚರವೇ ಇಲ್ಲದೆ, ಅನ್ಯಾಯವನ್ನು ಖಂಡಿಸುವ ಶಕ್ತಿ ಇಲ್ಲದೆ, ಮೌಢ್ಯವನ್ನು ತೊಲಗಿಸುವ ಛಲವಿಲ್ಲದ ಸ್ಥಿತಿಯಲ್ಲಿದ್ದಾಗ ಕುವೆಂಪು ಸಮಾಜವನ್ನು ಸೂಕ್ಷ್ಮವಾಗಿ ನೋಡಿ ವ್ಯಂಗ್ಯ, ಕೋಪ, ಪ್ರೀತಿ, ವೈಚಾರಿಕತೆ ಮತ್ತು ನೋವಿನಿಂದ ಬರೆಯುತ್ತಾರೆ". ಶ್ರೀ ಕುವೆಂಪುರವರು ಈ ನಾಟಕವನ್ನು ರಚಿಸಿದ್ದು ತಮ್ಮ 24 ನೇ ವಯಸ್ಸಿನಲ್ಲಿ. ಯೌವ್ವನದ ದಿನಗಳಲ್ಲಿ ಕುವೆಂಪುರವರ ಆಲೋಚನಾ ಕ್ರಮ ಯಾವ ರೀತಿ ಇತ್ತೆಂದು ಈ ನಾಟಕ ನೋಡಿದರೆ / ಓದಿದರೆ ಸುಲಭವಾಗಿ ಅರ್ಥವಾಗುತ್ತದೆ. ಕುವೆಂಪುರವರು ತಮ್ಮ ಅಂತಿಮ ದಿನಗಳವರೆಗೂ ಇದೇ ರೀತಿಯ ಸಮಾಜಮುಖಿ ಚಿಂತನೆಗಳನ್ನು ಹೆಚ್ಚು ಅರ್ಥಗರ್ಭಿತವಾಗಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಪ್ರಕಟಿಸುತ್ತಾ ವೈಚಾರಿಕ,ವೈಜ್ಞಾನಿಕ ಮತ್ತು ಮೌಢ್ಯರಹಿತ ಆಧ್ಯಾತ್ಮಿಕ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತೆತ್ತುಕೊಂಡಿದ್ದರು.

 

- ಜಿ.ಟಿ.ನರೇಂದ್ರ ಕುಮಾರ್ ಸಂಚಾಲಕ ಕುವೆಂಪು ~ ತೇಜಸ್ವಿ ಬಳಗ ಕಪ್ಪಣ್ಣ ಅಂಗಳ. ಬೆಂಗಳೂರು

 

ಪುಟಗಳು: 26

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !