ಜೀವ ಕೊಡಲೇ? ಚಹ ಕುಡಿಯಲೇ? (ಇಬುಕ್)

ಜೀವ ಕೊಡಲೇ? ಚಹ ಕುಡಿಯಲೇ? (ಇಬುಕ್)

Regular price
$10.00
Sale price
$10.00
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana


ಮಾಮ ಅವಳಿಗೆ ಹೇಳಿದ್ದ ‘ನಿನ್ನ ಮನೆಗೊಂದು ಮನೆಯ ಕಳೆಯಿಲ್ಲ.’ ನಂತರ ನಾನು ಅಮ್ಮನಲ್ಲಿ ಕೇಳಿದ್ದೆ ‘ಮನೆಯ ಕಳೆ ಅಂದ್ರೇನು?’ ಅಮ್ಮ ಹೇಳಿದ್ದಳು: ‘ಮನೆಮಂದಿಯ ಮಧ್ಯದಲ್ಲಿ ಎಲ್ಲ ಸರಿಯಿದ್ದರೆ ಆ ಮನೆಗೆ ಕಳೆ.’ ನಂತರ ಎಲ್ಲಿಯೂ ಯಾವ ಮನೆಗೆ ಹೋದರೂ ನಾನು ಮನೆಯ ಕಳೆಯನ್ನು ಹುಡುಕುತ್ತಿದ್ದೆ. 

(ಜೀವ ಕೊಡಲೇ? ಚಹಾ ಕುಡಿಯಲೇ?)

***

ಗೋವಾದ ಬಹುಸಂಸ್ಕೃತಿ ಮಿಶ್ರಣದ ಜೀವನದ ವಿಶಿμÀ್ಟ ಒಳನೋಟಗಳನ್ನು ಕೊಡುವ, ಕೊಂಕಣಿಯ ಬಹುಮುಖ್ಯ ಲೇಖಕರಲ್ಲೊಬ್ಬರಾದ ದಾಮೋದರ ಮಾವಜೋ ಅವರ ಹೊಸ ಕಾದಂಬರಿಯಿದು. ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾದ ಮಾವಜೋ ಈ ಕೃತಿಯಲ್ಲಿ ಹದಿಹರೆಯದವರ ಕಣ್ಣಿನಿಂದ ಜೀವನದ ಹೊಯ್ದಾಟಗಳನ್ನು ಕಂಡಿದ್ದಾರೆ.

 

ABOUT THE AUTHOR

`ಕಿಶೂ ಬಾರ್ಕೂರು’ ಕಾವ್ಯನಾಮದಿಂದ ಬರೆಯುವ ಕಿಶೋರ್ ಕುಮಾರ್ ಪೀಟರ್ ಗೊನ್ಸಾಲ್ವಿಸ್ ಕೊಂಕಣಿಯ ಕವಿ ಹಾಗೂ ಲೇಖಕ. ಕೊಂಕಣಿ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಕವಿತೆ, ಸಣ್ಣ ಕಥೆ ಹಾಗೂ ವೈಜ್ಞಾನಿಕ ವಿಷಯಗಳ ಮೇಲೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಸಂಗೀತ, ನಾಟಕ ಹಾಗೂ ಸಿನೇಮಾ ಇವರ ಅಭಿರುಚಿಯ ಕ್ಷೇತ್ರಗಳು. ಗಾಯಕರಾಗಿಯೂ ಪ್ರಸಿದ್ಧರಾಗಿರುವ ಇವರ ಪ್ರಕಟಿತ ಸಾಹಿತ್ಯ ಕೃತಿಗಳು ‘ಧಾಕ್ಟ್ಯಾ ದೆವಾಚಿಂ ಭುರ್ಗಿಂ’ (ಕವಿತಾ ಸಂಗ್ರಹ) ಮತ್ತು ‘ರುಪ್ಣಿಂ’ (ಕಥಾಸಂಕಲನ). ‘ರುಪ್ಣಿಂ’ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ಕವಿತಾ ಟ್ರಸ್ಟಿನ ಮಾಜಿ ಕಾರ್ಯದರ್ಶಿಯಾದ ಕಿಶೂ ಬಾರ್ಕೂರು ಪ್ರಸ್ತುತ ದಾಯ್ಜಿವರ್ಲ್ಡ್ ಮಾಧ್ಯಮ ಸಂಸ್ಥೆಯ ನಿರ್ದೇಶಕ ಹಾಗೂ ಉಡುಪಿ ಘಟಕದ ಮುಖ್ಯಸ್ಥ.

ಕೊಂಕಣಿಯ ಪ್ರಖ್ಯಾತ ಕತೆಗಾರ, ಕಾದಂಬರಿಕಾರ ಮತ್ತು ಅನುವಾದಕ ದಾಮೋದರ ಮಾವಜೋ ಹದಿನೇಳು ಪುಸ್ತಕಗಳನ್ನು ಕೊಂಕಣಿಯಲ್ಲಿಯೂ ಒಂದನ್ನು ಇಂಗ್ಲಿಷಿನಲ್ಲಿಯೂ ಪ್ರಕಟಿಸಿದ್ದಾರೆ. ಅವರ ಅನೇಕ ಪುಸ್ತಕಗಳು ಇಂಗ್ಲಿಷ್ ಮರಾಠಿ ಕನ್ನಡ ಹೀಗೆ ಅನೇಕ ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅವರ ಕಾರ್ಮೆಲಿನ್ ಕಾದಂಬರಿಯು ಹದಿನಾಲ್ಕು ಭಾಷೆಗಳಿಗೆ ಅನುವಾದಗೊಂಡಿದೆ. ಅವರ ‘ತೆರೇಸಾಸ್ ಮ್ಯಾನ್ ಆಂಡ್ ಅದರ್ ಸ್ಟೋರೀಸ್’ ಪುಸ್ತಕವು ಫ್ರಾಂಕ್ ಒಕೊನೆರ್ ಅಂತರಾಷ್ಟ್ರೀಯ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು. ಗೋವಾ ಆರ್ಟ್ಸ್ ಮತ್ತು ಲಿಟರರಿ ಫೆಸ್ಟಿವಲ್‌ನ ರೂವಾರಿಗಳಲ್ಲಿ ಇವರೊಬ್ಬರು. ಅನೇಕ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಮಾವಜೋ, ಪೆನ್ ಸೌತ್ ಇಂಡಿಯಾದ ಸ್ಥಾಪಕ ಸದಸ್ಯರಲ್ಲೊಬ್ಬರು.


ಪುಟಗಳು: 397

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !