ದೇವರ ಹುಚ್ಚು

ದೇವರ ಹುಚ್ಚು

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರರು: ಜೋಗಿ

ಪುಸ್ತಕ ಪ್ರಕಾರ: ಕಾದಂಬರಿ

ಭಕ್ತಿಯ ಅಮಲು ಅತ್ಯುತ್ತಮ. ಶಕ್ತಿಯ ಅಮಲು ಮಧ್ಯಮ, ವಿಭಕ್ತಿಯ ಅಮಲು ಅಧಮ. ನಮ್ಮದು ಭಕ್ತಿಯೋ ವಿಭಕ್ತಿಯೋ ಗೊತ್ತಿಲ್ಲ. ನಾವು ದೇವಸ್ಥಾನ ಕಟ್ಟಬಲ್ಲೆವು, ಮಹಾಪೂಜೆ ಮಾಡಿಸಬಲ್ಲೆವು. ವೈಕುಂಠದ ತನಕ ಹೆದ್ದಾರಿ ಹಾಸಬಲ್ಲೆವು ಎಂದು ಬೀಗುತ್ತಲೇ ನಮ್ಮ ಅಪ್ಪ, ಅಜ್ಜ, ಅಜ್ಜಿಯರು, ಮಕ್ಕಳು- ದಾಟಿಬಿಟ್ಟೇವು ಎಂಬ ನಂಬಿಕೆಯಿಂದ ದಾಟಲಾಗದ ರಸ್ತೆಗಳನ್ನೂ ಅದರ ಮೇಲೆ ಶರವೇಗದಲ್ಲಿ ಓಡುವ ಕಾರುಗಳನ್ನು ಮಾಡಿಟ್ಟಿದ್ದೇವೆ. ಕಾಲದಲ್ಲಿ ಹಿಂದೆ ಹೋಗಬೇಕೋ ಮುಂದೆ ಹೋಗಬೇಕೋ ಎಂಬ ದ್ವಂದ್ವದಲ್ಲಿ ಕೂಡು ಹಾದಿಯಲ್ಲಿದ್ದೇವೆ. ಕಣ್ಮುಂದೆ ಯಾವತ್ತೂ ಹಸಿರಿಗೆ ಬದಲಾಗದ ಕೆಂಪುದೀಪದಂತೆ ನಿರರ್ಥಕತೆ ಪ್ರಖರವಾಗಿದೆ.

ಬರವಣಿಗೆ ಕೂಡ ನಿರರ್ಥಕ ಎನ್ನಿಸುವ ಜಗತ್ತು ಕ್ರಮೇಣ ಸೃಷ್ಟಿಯಾಗುತ್ತಿರುವ ಹೊತ್ತಲ್ಲಿ ಎರಡು ಜಗತ್ತಿನ ತಳಮಳ ಮತ್ತು ಹೊಂದಾಣಿಕೆಗೆ ತುಯ್ಯುತ್ತಿರುವ ಇಬ್ಬರ ಕತೆಯಾಗಿ ಈ ಕಾದಂಬರಿ ಮೂಡಿ ಬಂದಿದೆ. ನಮ್ಮ ಜಗತ್ತು ಮತ್ತು ಅಲ್ಲಿ ನಮ್ಮ ಆದ್ಯತೆಗಳು ಬದಲಾಗುತ್ತಿರುವ ಹೊತ್ತಲ್ಲಿ ಹಳತು ಹೊಸತಿನ ನಡುವಿನ ತಳಮಳಕ್ಕೆ ಕನ್ನಡ ಹಿಡಿಯುವ ಪ್ರಯತ್ನ ಇಲ್ಲಿದೆ.