ಕಥಾ ಸಮಯ

ಕಥಾ ಸಮಯ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರರು: ಜೋಗಿ

ಪುಸ್ತಕ ಪ್ರಕಾರ: ಕಥಾ ಸಂಕಲನ

ಭಾರತೀಯ ಮಹಾಕಾವ್ಯಗಳ ಸೊಗಸೇ ಬೇರೆ. ಅಲ್ಲಿ ಯಾವುದೇ ಮಡಿವಂತಿಕೆಗೆ ಜಾಗವಿಲ್ಲ. ಅದು ಎಲ್ಲವನ್ನೂ ನೇರವಾಗಿ ಹೇಳುತ್ತ ಹೋಗುತ್ತದೆ. ಅದರಿಂದ ಓದುಗರ, ಕೇಳುಗರ ಮನಸ್ಸಿನ ಮೇಲೆ ಯಾವ ಪರಿಣಾಮವಾಗುತ್ತದೆ ಎಂದು ಗಮನಿಸುವುದಕ್ಕೂ ಹೋಗುವುದಿಲ್ಲ. ಯಾಕೆಂದರೆ ನಮ್ಮ ಪುರಾಣಗಳಲ್ಲಿ ತಂದೆಯ ಮಾತಿಗೆ ತಪ್ಪದ ಶ್ರೀರಾಮಚಂದ್ರನಿದ್ದಾನೆ. ತಂದೆಯ ಮಾತನ್ನೇ ಕೇಳದ ಪ್ರಹ್ಲಾದನಿದ್ದಾನೆ. ತಂದೆಯ ಮಾತಿಗೆ ಬೆಲೆ ಕೊಟ್ಟು ತಾಯಿಯ ಕೊರಳಿಗೆ ಕೊಡಲಿಯಿಟ್ಟ ಪರಶುರಾಮನಿದ್ದಾನೆ. ತಾಯಿಯ ಮಾತಿಗೆ ಕಟ್ಟುಬಿದ್ದು ತಂದೆಯೊಂದಿಗೇ ಕದನಕ್ಕೆ ನಿಂತ ಗಣೇಶನಿದ್ದಾನೆ. ತಂದೆ ತಾಯಿಯರನ್ನು ಬಿಟ್ಟು ಕಾಡ ಮೂಲಕವೇ ಪಥ ಆಗಸಕ್ಕೆ ಎಂದು ಭಾವಿಸಿ ಕಾಡಿಗೆ ನಡೆದು ಧ್ರುವರಾಯನಿದ್ದಾನೆ. ಇಂಥ ವೈವಿಧ್ಯಮಯ ಪಾತ್ರಗಳ ನಡುವೆಯೇ ನಾವು ಕಲಿಯುತ್ತಾ ಹೋಗುತ್ತೇವೆ. ದ್ರೌಪದಿಯ ವಸ್ತ್ರಾಪಹರಣವನ್ನು ಖಂಡಿಸಿದ ಕೌರವನ ಸೋದರ ವಿಕರ್ಣ, ಬೆಂಬಲಿಸಿದ ಮಿತ್ರ ಕರ್ಣ ಇಬ್ಬರೂ ಒಂದೇ ಪಕ್ಷದಲ್ಲಿ ನಿಂತು ಹೋರಾಡುತ್ತಾರೆ. ಸೋದರಮಾವನನ್ನು ಕೊಂದ ಕೃಷ್ಣ ನಮಗೆ ದೇವರು. ಮಾವನ ಕೈಯಿಂದ ಅವಮಾನಿತನಾದ ಶಿವನೂ ನಮ್ಮ ದೇವರು. ಅತ್ಯಂತ ಶ್ರೀಮಂತಿಕೆಯಿಂದ ಕ್ಷೀರಸಾಗರದಲ್ಲಿ ತೇಲಾಡುವ ವಿಷ್ಣು ಮಲಗುವುದು ಹಾವಿನ ಮೇಲೆ. ಸಂಚರಿಸುವುದು ಸರ್ಪದ ಹುಟ್ಟು ವೈರಿಯಾದ ಗರುಡನ ಮೇಲೆ. ಗಣಪತಿಯ ಕೊರಳಲ್ಲಿ ಹಾವಿದೆ. ಗಣಪತಿಯ ವಾಹನ ಹಾವಿನ ಆಹಾರವಾದ ಇಲಿ. ಸಿರಿಪತಿ ವಿಷ್ಣು, ಸ್ಮಶಾನ ವಾಸಿ ಶಿವ ಇಬ್ಬರನ್ನೂ ಹರಿಹರರೆಂದು ಏಕಕಾಲಕ್ಕೆ ನಂಬುವವರಿದ್ದಾರೆ.

ಪುರಾಣ ಜಗತ್ತಿನ ಬೆರಗಿನ ಕಥೆಗಳನ್ನು ಇಂದಿನ ಯುಗದಲ್ಲಿ ನಿಂತು ನೋಡುತ್ತ ಹೊಸ ವ್ಯಾಖ್ಯಾನ ನೀಡುವ ಜೋಗಿಯವರ ಹೊಸತನದ ಪ್ರಯತ್ನ ಇಲ್ಲಿದೆ.