ಬರಹಗಾರರು: ಜೋಗಿ
ಮಹಾನಗರಕ್ಕೆ ಕಸ ಸೇರುತ್ತಲೇ ಇದೆ. ಅದು ಸಾಂಸ್ಕೃತಿಕ, ರಾಜಕೀಯ, ಆಧುನಿಕತೆ- ಹೀಗೆ ವಿವಿಧ ಸ್ವರೂಪದ್ದಿರಬಹುದು. ಬಗೆಹರಿಯದ ವಿವಾದಗಳು, ಚುನಾವಣೆಯ ಭಯ, ಭ್ರಷ್ಟಾಚಾರದ ಜೊತೆಗೇ ಬೆಂಗಳೂರು ಕಾಲ್ನಡಿಗೆಯಲ್ಲಿ ಸಾಗುವವರಿಗೆ ಮಾರಣಾಂತಿಕ ಆಗುತ್ತಿದೆ. ಬೆಂಗಳೂರಿನ ಮನಸ್ಸನ್ನು ಚರಿತ್ರೆ ಮತ್ತು ವರ್ತಮಾನದ ತಲ್ಲಣಗಳೊಂದಿಗೆ ಹಿಡಿಯುಬೇಕಿದೆ. ಅದಕ್ಕೆ ಪೂರ್ವಭಾವಿಯಾಗಿ ಜೋಗಿಯವರು ಮಾಡಿಕೊಂಡ ಒಂದಷ್ಟು ಟಿಪ್ಪಣಿಗಳು, ಅನಿಸಿಕೆಗಳು ಮತ್ತು ಗ್ರಹಿಕೆಗಳು ಇಲ್ಲಿವೆ. ಬೆಂಗಳೂರಿನ ಕುರಿತು ನೀವು ರಿಲೇಟ್ ಮಾಡಿಕೊಳ್ಳಲು ಆಗುವ ಹಲವು ಅನುಭವ, ಅನಿಸಿಕೆಗಳು ಇಲ್ಲಿವೆ.