ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಕಾದಂಬರಿ
ಇವತ್ತಿನ ಮಕ್ಕಳಿಗೆ ದೆವ್ವಗಳೆಂದರೆ ಟೀವಿ ಸೀರಿಯಲ್ಲುಗಳಲ್ಲಿ, ಸಿನಿಮಾಗಳಲ್ಲಿ ಕಾಣುವ ಸಂಗತಿಗಳಾಗಿ ಉಳಿದಿವೆ. ಹಳ್ಳಿಗಳಲ್ಲೂ ಅಷ್ಟಾಗಿ ದೆವ್ವಗಳಿದ್ದಂತಿಲ್ಲ. ನಾವೆಲ್ಲ ಬುದ್ಧಿವಂತರೂ ತರ್ಕಬದ್ಧವಾಗಿ ಯೋಚಿಸಬಲ್ಲವರೂ ಜಾಣರೂ ಆದ ಮೇಲೆ ದೆವ್ವಗಳೆಲ್ಲ ಅಸ್ತಿತ್ವ ಕಳಕೊಂಡು ಬಿಟ್ಟಿವೆ.
ಆದರೆ ದೆವ್ವಗಳ ಕತೆಗಳಲ್ಲಿ ಇರುವ ಕುತೂಹಲವನ್ನು ಓದಿದವರೇ ಬಲ್ಲರು. ಇಲ್ಲಿ ಜೋಗಿಯವರು ಬರೆದ ಆರೇಳು ದೆವ್ವದ ಕತೆಗಳಿವೆ. ಒಂದೆರಡು ಬೇಟೆಯ ಕತೆಗಳಿವೆ. ನಿಮಗೆ ದೆವ್ವದ ಕತೆಗಳು ಇಷ್ಟವಾದರೆ ನೀವಿದನ್ನು ಓದಲೇಬೇಕು.