ಬರಹಗಾರರು: ಜೋಗಿ
ಪುಸ್ತಕ ಪ್ರಕಾರ: ಕಾದಂಬರಿ
ಅಂದಂತೆ ಅನ್ನಿಸಿಕೊಂಡು, ಮೋಸ ಹೋಗುತ್ತಾ, ಯಾರದೋ ವಂಚನೆಗೆ ಗುರಿಯಾಗುತ್ತಾ ಬದುಕು ಸಾಗಿಸುವ ಮೇನಕಾ. ತನಗೆ ಬೇಕಾದ್ದನ್ನು ಪಡೆದುಕೊಳ್ಳಲು ಯಾರನ್ನು, ಯಾವಾಗ, ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅರಿತ ಚಾಣಾಕ್ಷೆ ಮಾಧುರಿ. ಇವೆಲ್ಲವನ್ನೂ ಮೀರಿದ, ತನಗೆ ತಾನೇ ನಾಯಕಿಯಾದ ಸರ್ವಾಧಿಕಾರಿ ಊರ್ಮಿಳಾ. ಮೂರು ಪಾತ್ರಗಳ ಮೂಲಕ ಬದುಕಿನ ಏರಿಳಿತಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟ ಜೋಗಿಯವರ ಕಾದಂಬರಿ ಊರ್ಮಿಳಾ. ಕನ್ನಡ ಪ್ರಭದ ದೀಪಾವಳಿ ವಿಶೇಷಾಂಕಕ್ಕೆ ಐದೇ ಐದು ದಿನಗಳಲ್ಲಿ ಅವರು ಬರೆದ ಕಾದಂಬರಿ ನಿಮ್ಮನ್ನು ಅಷ್ಟೇ ವೇಗವಾಗಿ ಓದಿಸಿಕೊಂಡು ಹೋಗಬಲ್ಲದು!