ವಿರಹದ ಸಂಕ್ಷಿಪ್ತ ಪದಕೋಶ

ವಿರಹದ ಸಂಕ್ಷಿಪ್ತ ಪದಕೋಶ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರರು: ಜೋಗಿ

ಪುಸ್ತಕ ಪ್ರಕಾರ: ಕಾದಂಬರಿ

ಎಲ್ಲೋ ಇರುವ ಅವಳು, ಇನ್ನೆಲ್ಲೋ ಇರುವ ಅವನು ನಿರಂತರ ಸಂಪರ್ಕದಲ್ಲಿ ಇರುವುದಕ್ಕೆ ತಂತ್ರಜ್ಞಾನ ವ್ಯವಸ್ಥೆ ಮಾಡಿಕೊಟ್ಟಿದೆ. ಮಾತುಕತೆ, ಸಲ್ಲಾಪ ಸತತವಾಗಿ ಸಾಗುತ್ತಲೇ ಇರುತ್ತದೆ. ಅವನ ಪ್ರತಿಕ್ಷಣದಲ್ಲೂ ಅವಳು ಜೊತೆಗಿರುತ್ತಾಳೆ, ಒಂದಲ್ಲ ಒಂದು ರೂಪದಲ್ಲಿ. ಅವಳ ಅತ್ಯಂತ ಖಾಸಗಿ ಗಳಿಗೆಗಳನ್ನೂ ಅವನು ಹಂಚಿಕೊಳ್ಳುತ್ತಾನೆ, ಡಿಜಿಟಲೀ.

ಹಾಗಿದ್ದರೆ ವಿರಹ ? ವಿರಹ ಮತ್ತಷ್ಟು ಗಾಢವಾಗಿದೆ. ವಿರಹದ ಗೈರುಹಾಜರಿಯೇ ವಿರಹದ ಅತ್ಯುನ್ನತ ಸ್ಥಿತಿ. ಜೊತೆಗಿದ್ದರೂ ಜೊತೆಗಿರಲಾರದ, ಸಮೀಪದಲ್ಲಿದ್ದರೂ ದೂರವಿದ್ದಂತೆ ಭಾಸವಾಗುವ, ನೂರೆಂಟು ಸಂಗತಿಗಳು ನಮ್ಮನ್ನು ಅತ್ತಿತ್ತ ಸೆಳೆಯುತ್ತ ಒಂದು ಕ್ಷಣ ಕೂಡ ಧ್ಯಾನಸ್ಥರಾಗದಂತೆ ತಡೆಯುವ ಕಾಲದಲ್ಲಿ ಸಾಂಗತ್ಯವೇ ವಿರಹ. ಜೊತೆಗಿದ್ದವನು ಜೊತೆಗಿಲ್ಲ ಅನ್ನಿಸುವುದು, ಹತ್ತಿರವಿದ್ದವಳು ದೂರದಲ್ಲಿದ್ದಾಳೆ ಎಂದು ಭಾಸವಾಗುವುದು, ನಮ್ಮವರು ನಮ್ಮವರಲ್ಲ ಎಂದು ತೋರುವುದು- ಇವೆಲ್ಲ ವಿರಹದ ಲಕ್ಷಣಗಳೇ.

ಅಂಥ ವಿರಹವನ್ನು ಈ ಕಾದಂಬರಿ ಹಿಡಿಯಲು ಯತ್ನಿಸಿದೆ. ಅದೇ ಕಾರಣಕ್ಕೆ ವರ್ತಮಾನದ ಯಾವ ಭಾರವೂ ಇಲ್ಲದ, ಸುಲಭವಾಗಿ ಎಲ್ಲೂ ನೋಡುವುದಕ್ಕೆ ಸಿಗದ, ಬೇರುಗಳ ಹಂಗೇ ಇಲ್ಲದ ಮೂರು ಪಾತ್ರಗಳು ಇಲ್ಲಿವೆ. ಇಲ್ಲಿ ನಿಮಗೆ ಎದುರಾಗುವ ವಿಶ್ವಾಸ ಕಾರಂತ, ವಂದನಾ ಮತ್ತು ರಾಜೀವ್‌- ಈ ಮೂವರಿಗೂ ಹಿನ್ನೆಲೆಯಿಲ್ಲ. ಅವರು ಹೇಳಿಕೊಟ್ಟಂತೆ ವರ್ತಿಸುವುದಿಲ್ಲ. ಅವರನ್ನು ಶಿಕ್ಷಣವೋ ಸಾಹಿತ್ಯವೋ ರಾಜಕೀಯವೋ ರೂಪಿಸಿಲ್ಲ. ಅವರು ಪ್ರೋಗ್ರಾಮ್ಡ್‌ ಅಲ್ಲ. ಈ ಮೂರು ಪಾತ್ರಗಳ ನಡುವೆ ಸಂಘರ್ಷ ಇಲ್ಲ. ಅನುಸಂಧಾನ ಮಾತ್ರ ಇದೆ. ಅದಕ್ಕೊಂದು ಕೊನೆಯೂ ಇಲ್ಲ. ನೆಲೆಯೂ ಇಲ್ಲ.

ಇದು ನಮ್ಮ ಇಂದಿನ ಸ್ಥಿತಿಗೆ ರೂಪಕವಾಗಬಹುದು.