ಕಾಡು ತಿಳಿಸಿದ ಸತ್ಯಗಳು

ಕಾಡು ತಿಳಿಸಿದ ಸತ್ಯಗಳು

Regular price
$6.99
Sale price
$6.99
Regular price
Sold out
Unit price
per 
Shipping does not apply

ಮುನ್ನೂರ ಎಪ್ಪತ್ತು ಕೋಟಿ ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವೋತ್ಪತ್ತಿಯಾಯಿತು ಎಂಬ ಮಾಹಿತಿ ವಿಜ್ಞಾನಿಗಳದ್ದು. ಅದಕ್ಕಿಂತಲೂ ಹಿಂದೆ ಏನಾಗಿತ್ತೋ ಯಾರಿಗೆ ಗೊತ್ತು? ಕಣ್ಣು ಬಿಟ್ಟು ನೋಡಿದರೆ ನಾವು ಸುತ್ತಾಡುವ ಈ ಭೂಮಂಡಲದ ಒಂದೊಂದು ಭಾಗದಲ್ಲೇ ಒಂದೊಂದು ಅದ್ಭುತಗಳಿವೆ. ಸಣ್ಣದೆಂದು ನಾವು ತಿಳಿದಿದ್ದರಲ್ಲಿ ದೊಡ್ಡ ಸಂಗತಿಗಳಿವೆ. ಕೆಲವು ಸತ್ಯಸಂಗತಿಗಳು ನಮ್ಮ ನಂಬಿಕೆಗೆ ವಿರುದ್ಧವಾಗಿವೆ. ಒಂದೆಡೆ ಹಿಮರಾಶಿಯಾದರೆ ಮತ್ತೊಂದು ಕಡೆ ಜಲರಾಶಿ. ಮಗದೊಂದು ಕಡೆ ಸಮೃದ್ಧಿಯಾದ ಸಸ್ಯ ಮತ್ತು ಜೀವಿಗಳು. ಇನ್ನೊಂದು ಕಡೆ ಸುಡುಬಿಸಿಲಿನ ಮರುಭೂಮಿ. ಒಂದೊಂದು ನದಿ, ಗುಡ್ಡ, ಬೆಟ್ಟ, ಪರ್ವತ, ಬಯಲುಗಳ ಹಿಂದೆಯೂ ಒಂದೊಂದು ವಿಸ್ಮಯಗಳಿವೆ. ಕಣ್ಣಿಗೆ ಗೋಚರವಾಗುವ ಆಕಾಶ, ಗ್ರಹ, ನಕ್ಷತ್ರಗಳ ಸೌಂದರ್ಯದೊಳಗೂ ಅಗೋಚರವಾದ, ಊಹಿಸಲೂ ಅಸಾಧ್ಯವಾದ ಅದ್ಭುತವಾದ ಸಂಗತಿಗಳಿವೆ.

ಈ ಕೃತಿಯಲ್ಲಿ ನಮ್ಮ ಅನೇಕ ಮೂಢನಂಬಿಕೆ ಮತ್ತು ಜಗತ್ತಿನ ನಿಯಮಗಳ ಅನಾವರಣ ಮಾಡುವ ಪ್ರಯತ್ನ ಇದೆ. ಏಕೆಂದರೆ ಅವೆರಡೂ ಒಂದಕ್ಕೊಂದು ವಿರುದ್ಧವಾಗಿಯೇ ಇರುತ್ತದೆ. ಒಂದು ದು:ಖಕ್ಕೆ ದಾರಿಯಾದರೆ ಮತ್ತೊಂದು ಸುಖಕ್ಕೆ ದಾರಿ. ಒಂದನ್ನು ಅರಿಯದಿದ್ದರೆ ಮತ್ತೊಂದನ್ನು ಪೂರ್ತಿಯಾಗಿ ತಿಳಿಯಲಾಗುವುದಿಲ್ಲ. ಬದುಕಲ್ಲಿ ಬಹಳಷ್ಟು ಜನ ಸ್ವಂತಿಕೆ ಮರೆತು ಅವರಿವರು ಎತ್ತಲೋ ಓಡುವುದನ್ನು ನೋಡಿ ತಾವೂ ಹಾಗೇ ಓಡಲು ಯತ್ನಿಸುತ್ತಾರೆಯೇ ಹೊರತು ಸತ್ಯ ಮತ್ತು ವಾಸ್ತವವನ್ನು ಬೇಗ ಒಪ್ಪಿಕೊಳ್ಳುವುದಿಲ್ಲ. ಕೆಲವು ಅಪರೂಪದ ಜನ ಹಾಗೆ ಓಡುವವರನ್ನು ನೋಡುತ್ತಾ ಅದಕ್ಕೆ ಕಾರಣ ಹುಡುಕುತ್ತಾರೆ. ಹಾಗೆ ಕಾರಣ ಹುಡುಕುವ ಶ್ರೀವತ್ಸ ಮತ್ತು ವಸುಧ ಎಂಬ ಕಾಲ್ಪನಿಕ ಚಿಂತನಶೀಲ ಪಾತ್ರಗಳ ಮೂಲಕ ಓದುಗರನ್ನು ಪ್ರಶಾಂತವಾದ ವಾತಾವರಣಕ್ಕೆ ಕರೆದೊಯ್ದು ಪ್ರಕೃತಿ ಹಾಗೂ ಜೀವ-ಜಗತ್ತು ಮತ್ತು ಮೌಢ್ಯಗಳ ವಾಸ್ತವ ಚಿತ್ರಣ ಕೊಡುವ ಪ್ರಯತ್ನವೇ ಈ ಕಾದಂಬರಿ. ವಿದ್ಯೆ, ವಿಚಾರವಂತಿಕೆಯ ಉತ್ತುಂಗಕ್ಕೇರಿದ ದಂಪತಿ ತಮ್ಮ ಪ್ರಶ್ನೆಗಳಿಗೆ ಯಾವ ರೀತಿ ಸರಿ ಉತ್ತರ ಕಂಡುಕೊಳ್ಳುತ್ತಾರೆ ಎಂಬ ಸೂಕ್ಷ್ಮವೇ ಇದರ ಕಥಾವಸ್ತು. ಹಾಗಾಗಿ ಇದು ಬರೀ ಕಾದಂಬರಿ ಅಲ್ಲ. ಕಲ್ಪನೆಯ ಪಾತ್ರಗಳ ಜೊತೆಗೆ ವಿಚಾರಗಳೇ ಇದರಲ್ಲಿ ಜಾಸ್ತಿ. ಕೋಟಿ ಕೋಟಿ ವರ್ಷಗಳಲ್ಲಿ ಆಯಾ ಕಾಲಘಟ್ಟ, ಅವರವರ ಮಟ್ಟಕ್ಕೆ ತಕ್ಕಂತೆ ಅದೆಷ್ಟೋ ಜನ ಸತ್ಯಾನ್ವೇಷಣೆಯ ಹಾದಿ ತುಳಿದು ಮರೆಯಾಗಿ ಹೋಗಿದ್ದಾರೆ. ನಮಗೆ ಸಿಕ್ಕಿದ ಜ್ಞಾನದ ಹಿಂದೆ ಅವರ ಪರಿಶ್ರಮ ಇದೆ. ಮುಂದಿನವರಿಗೆ ನಮ್ಮಿಂದಲೂ ಒಂದಿಷ್ಟು ಸಿಗಬಹುದು.

 

ಗಿರಿಮನೆ ಶ್ಯಾಮರಾವ್

 

ಪುಟಗಳು: 240

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !