ಕಾಲೂರ ಚೆಲುವೆ (ಇಬುಕ್)

ಕಾಲೂರ ಚೆಲುವೆ (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

 'ಕಾಲೂರ ಚೆಲುವೆ' ಇದೊಂದು ಹಳ್ಳಿಯ ಬಡ ಸಮಾಜದ ಮುಗ್ಧ ಗಂಡು ಹೆಣ್ಣುಗಳ ನಲ್ಮೆಯ ಮದುವೆ, ಅಧಿಕಾರಿಗಳ ದೌರ್ಜನ್ಯ, ಪೋಲೀಸರು ಲಂಚಗುಳಿತನದಿಂದ ಮಾಡುವ ಅನ್ಯಾಯ ಇತ್ಯಾದಿಗಳನ್ನು ರಮ್ಯವಾಗಿ ಚಿತ್ರಿಸುವ ರಸಗಬ್ಬ. ಆಂಗ್ಲ ಭಾಷೆಯ ಪ್ರಭಾವದಿಂದ, ತುಳು ಮತ್ತಿತರ ಭಾಷೆಗಳ ಮೋಹದಿಂದ ಕನ್ನಡಿಗರು ಕನ್ನಡ ಶಬ್ದಗಳನ್ನು ದಿನದಿಂದ ದಿನಕ್ಕೆ ಮರೆತು ಕನ್ನಡದ ನಲ್ನುಡಿಗಳು ಮೂಲೆ ಪಾಲಾಗುತ್ತಿರುವ ಈ ದಿನಗಳಲ್ಲಿ ಅಚ್ಚಗನ್ನಡ ಪದಗಳನ್ನೇ ಆಯ್ದು ನೇಯ್ದು ರಚಿಸಿರುವ ಈ ಕೃತಿಯು ಅಚ್ಚಗನ್ನಡ ಪದಗಳ ಪರಿಚಯವನ್ನು ಮತ್ತೊಮ್ಮೆ ಮಾಡಿಕೊಡುವುದರ ಮೂಲಕ ಕನ್ನಡ ಶಬ್ದಸಂಪತ್ತನ್ನುಳಿಸಿ ಕನ್ನಡಿಗರ ತಿಳಿನುಡಿಯಾಗಿ ಬೆಳೆಯಿಸಲು ಈ ಕೃತಿಯು ಸಹಾಯಕವಾಗಬಹುದು.

ಆಂಡಯ್ಯನ ‘ಕಬ್ಬಿಗರ ಕಾವ’ವು ಸಂಸ್ಕೃತ ಪದಗಳಿಲ್ಲದಿದ್ದರೂ, ತದ್ಭವ ಭೂಯಿಷ್ಠವಾಗಿರುವುದು. ‘ಕಾಲೂರ ಚೆಲುವೆ’ಯಾದರೆ ಕೇವಲ ಅಚ್ಚಗನ್ನಡಪದ ಭೂಷಿತೆಯಾಗಿರುವುದು ಒಂದು ವೈಶಿಷ್ಟ್ಯವೆನ್ನಬೇಕು. ಈ ಕಾವ್ಯದಲ್ಲಿ, ಮೂಲೆ ಪಾಲಾಗಿ ಪ್ರಕೃತ ಬಳಕೆಯಲ್ಲಿಲ್ಲದಿರುವ ಕನ್ನಡ ಪದಗಳನ್ನು ಆಯ್ದು ಬಳಸಿರು ವುದರಿಂದ ಓದುಗರಿಗೆ ಸುಲಭವಾಗಿ ಅರ್ಥವಾಗದೆ ನಾಳಿಕೇರ ಪಾಕವಿದ್ದರೂ ಟಿಪ್ಪಣಿಕೊಡುವುದರಿಂದ ಅರ್ಥಮಾಡಿಕೊಂಡಲ್ಲಿ ರಸಾಸ್ವಾದಕ್ಕೆ ತೊಡಕಾಗದೆಂದು ನನ್ನೆಣಿಕೆ. ಅರ್ಥವಾಗದ ಪದಗಳ ಪ್ರಯೋಗದಿಂದ ಕಾವ್ಯವು ಕಠಿನವೆನಿಸಿ ಕಬ್ಬಿಣದ ಕಡಲೆಯಾಗಿದೆಯೆಂದು ಕೆಲವರೆಂದರೆ ಅದು ದೋಷವಲ್ಲ. “ಕಾವ್ಯ ಮಂ ಕೇಳ್ದು ಮಥಿಸಿ, ಜನಿಸಿದ ಪದಾರ್ಥಮಂ ತಿಳಿದು ನೋಡದೆ, ವಿನೂತನ ಕವಿತೆಯೆಂದು ಕುಂದಿಟ್ಟು ಜರೆದೊಡೆ, ಪೇಳ್ದವನೊಳಾವದೂಣೆಯಂ?” ಲಕ್ಷ್ಮೀಶ ಕವಿಯೆಂದ ಈ ಮಾತು ಈ ಕಾವ್ಯಕ್ಕೂ ಅನ್ವಯಿಸುತ್ತದೆ. ಕಬ್ಬನ್ನು ಜಗಿಯಲು ಪಲ್ಲಿಲಿ ಬಾಯವನಿಗಸಾಧ್ಯವಾದರೆ ಕಬ್ಬು ರಸಹೀನವೆನಿಸುವುದೆ? ಪ್ರಚಲಿತ ಕಾಲದಲ್ಲಿ ದಿನದಿಂದ ದಿನಕ್ಕೆ ಸರಳ ಸುಲಭ ಗ್ರಾಮ್ಯ ಶಬ್ದಗಳ ಬಳಕೆಯ ಸಾಹಿತ್ಯ ಕೃತಿಗಳು ಹುಟ್ಟುತ್ತಿರುವುದರಿಂದ ಓದುಗರ ಅರ್ಥಗ್ರಹಣ ಶಕ್ತಿಯೂ ಕುಂಠಿತ ವಾಗುತ್ತ ಬರುತ್ತಿರುವುದು ವಿಷಾದನೀಯ! ಈಗಿನ ಓದುಗರು ಪ್ರಾಚೀನ ಕಾವ್ಯಗಳ ರಸಾಸ್ವಾದನವನ್ನೊಮ್ಮೆ ಮಾಡಲಿ ನೋಡೋಣ! ಈ ದೃಷ್ಟಿಯಲ್ಲಿ ವಾಚಕರ ಅರ್ಥ ಗ್ರಹಣ ಶಕ್ತಿಯನ್ನು ಕಾವ್ಯವ್ಯಾಸಂಗಾಸಕ್ತಿಯನ್ನೂ ಹೆಚ್ಚಿಸಲು ಈ ತರದ ವಿನೂತನ ಪ್ರೌಢಕಾವ್ಯಗಳ ರಚನೆಯಾಗಬೇಕಾದುದು ಅಗತ್ಯ. ಇಂತಹ ಕಾವ್ಯವನ್ನು ರಚಿಸಿದ ನಿಮ್ಮನ್ನು ಮನಸಾ ಅಭಿನಂದಿಸುತ್ತೇನೆ.

ಇಂತು ನಿಮ್ಮ ಸ್ನೇಹಿತ
S.Tirumaleshwara Bhat

 

ಪುಟಗಳು: 196

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !