ಬರಹಗಾರ: ಕುವೆಂಪು
ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ
ಆಡಿಯೋ ಪುಸ್ತಕದ ಅವಧಿ : 9 ಗಂಟೆ 21 ನಿಮಿಷ
13. ಸೀತೆಯ ಮನಸ್ಸಿಗೆ ಮೊದಲನೆಯ ಸಿಡಿಲು - ಬೈರನು ಹೊಂಡ ತೊಣಕಿದ್ದು
14. ಕಿಲಿಸ್ತರ ಮಾರ್ಕನಿಗೆ ಬೈರ ನಾಮ ಹಾಕಿದ್ದು - ಮನೆ ಪಾಲಾಗುವ ಮಾತು
15. ಕಾನೂರಿನಲ್ಲಿ ದೆಯ್ಯದ ಹರಕೆ - ಹೋತದ ದೆಸೆಯಿಂದ
16. ಸೀತೆಯ ರೋಗದ ರಹಸ್ಯ - ಬಾಳಿನ ಬಲೆ
17. ಅಣ್ಣಯ್ಯಗೌಡರನ್ನು ಊರು ಬಿಡಿಸಿದ್ದು - ಆ ಹುಲಿ
18. ಮುತ್ತಳ್ಳಿಯಲ್ಲಿ ಒಂದು ಮಧ್ಯಾಹ್ನ - ದುಃಖಕ್ಕೆ ದೊಡ್ಡವರು ಬಡವರು ಎಂಬ ಭೇದವಿದೆಯೆ?
19. ಮದುವೆಯಾಗುವವನೇ ಹೆಣ್ಣು ಕೇಳುವುದೇ? - ಕಳ್ಳಂಗಡಿಯವನ ಸಾಲಕ್ಕಾಗಿ ಸೋಮ ಹಳೆಪೈಕದ ತಿಮ್ಮನ ಕೋಳಿಹುಂಜವನ್ನು ಕದ್ದದ್ದು
20. ವರ್ಡ್ಸ್‌ವರ್ತ್ - ಮ್ಯಾಥ್ಯೂ ಆರ್ನಾಲ್ಡ್ - ಕಾನೂರು ಜಮೀನಿನ ಹಿಸ್ಸೆಯ ಪಂಚಾಯಿತಿ
21. ಮನೆಯ ಚರಸೊತ್ತಿನ ಹಿಸ್ಸೆ, ವಾಸುವಿನ ವಿಚಿತ್ರ ಮೂರ್ಛೆ - ಸಣ್ಣ ಮನಸ್ಸು
22. ಹೂವಯ್ಯ ಕಾನೂರು ಮನೆಯನ್ನು ಬಿಟ್ಟು ಹೋದುದು - ಹಾವಿನ ಮೊಟ್ಟೆ - ತೆಂಗಿನಕಾಯಿಯ ಮಂತ್ರಶಕ್ತಿ
23. ಚಂದ್ರಯ್ಯಗೌಡರಿಗೆ ಕೃಷ್ಣಪಕ್ಷ ಹಿಡಿಯಿತು - ಭೂಮಿ ಹುಣ್ಣಿಮೆ ಹಬ್ಬದ ಹಿಂದಿನ ದಿನ ಕಾಡಿನಲ್ಲಿ ದೈತ್ಯನಾದ ಪುಟ್ಟಣ್ಣನ ಕಣೆಹಂದಿಯ ಬೇಟೆ
24. ಚಂದ್ರಯ್ಯಗೌಡರ ಕತ್ತಿಯಿಂದ ತಪ್ಪಿಸಿ ಕೊಂಡು ಸುಬ್ಬಮ್ಮ ರಾತ್ರಾರಾತ್ರಿ ಕಾನೂರಿನಿಂದ ಓಡಿಹೋದದ್ದು - ಬಾಳಿನ ಬಾನಿನಲ್ಲಿ ಕರ್ಮುಗಿಲು ದಟ್ಟವಾಗುತ್ತಿದೆ
25. ಪ್ರೇಮಪತ್ರಕ್ಕೆ ಅಗ್ನಿಜ್ವಾಲೆ - ಗೊಬ್ಬರಗುಂಡಿಯಲ್ಲಿ ಸೋಮ
26. ಸೇರೆಗಾರರ ಸ್ವಾನಬುದ್ಧಿ - ಹಾ, ವಿಧಿ!
ನಾನು ಓದಿದ ಮೊದಲ ಕನ್ನಡ ಕಾದಂಬರಿ ಕುವೆಂಪು ಅವರ ಕಾನೂರು ಹೆಗ್ಗಡಿತಿ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಬೇಸಿಗೆ ರಜೆಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಕಣ್ಣಿಗೆ ಬಿದ್ದ ಈ ಪುಸ್ತಕವನ್ನು ಓದಲು ಆರಂಭಿಸಿ, ಎರವಲು ಪಡೆದು ಮನೆಗೂ ತಂದು ಓದಿ ಮುಗಿಸಿದ್ದು ನೆನಪಿದೆ. ಸುಮಾರು ಆರು ನೂರು ಪುಟಗಳ ಕಾದಂಬರಿ ಓದಿ ಮುಗಿಸಲು ಬಹುಶಃ ಆ ರಜೆಯ ಬಹುಭಾಗವೇ ಹಿಡಿದಿರಬೇಕು. ಈಗ ಹತ್ತು ವರ್ಷಗಳ ಹಿಂದೆ ಮತ್ತೊಮ್ಮೆ ಓದುವಾಗಲೂ ಕಾದಂಬರಿಯ ಸ್ವಾರಸ್ಯಕಡಿಮೆಯಾದಂತೆ ಅನಿಸಲಿಲ್ಲ.
೧೯೩೬ರಲ್ಲಿ ಪ್ರಕಟವಾದ ಈ ಕಾದಂಬರಿಯು ಒಳಗೊಳ್ಳುವ ಪರಿಸರ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಎಂಬ ಹೆಸರಿನಿಂದ ಗುರುತಿಸಲ್ಪಡುವ ಪ್ರದೇಶ. ನನ್ನ ಊರು ಅದೇ ಪ್ರದೇಶದಲ್ಲಿರುವುದರಿಂದ ಈ ಕಾದಂಬರಿಯಲ್ಲಿ ವರ್ಣನೆಗೊಳ್ಳುವ ಹಲವಾರು ಸ್ಥಳ ಹಾಗೂ ವ್ಯಕ್ತಿಚಿತ್ರಗಳು ನಮಗೆಲ್ಲ ಹೊಸತಾಗಿರಲಿಲ್ಲ. ಆದರೂ ಆ ಕಾರಣಕ್ಕಾಗಿ ಕಾದಂಬರಿಯ ಸ್ವಾರಸ್ಯ ನನಗೇನೂ ಕಡಿಮೆಯಾಗಿರಲಿಲ್ಲ. ಮಲೆನಾಡಿನವರಲ್ಲದ ಓದುಗರಿಗಂತೂ ಇದೊಂದು ಹೊಸ ಪ್ರಪಂಚ. ಕುವೆಂಪು ಅವರಂತಹ ಕಲ್ಪನೆ, ಒಳನೋಟ, ಜೀವನ ಪ್ರೀತಿ ಎಲ್ಲವೂ ಬೆರೆತ ಕೃತಿಕಾರನ ಲೇಖನಿಯಲ್ಲಿ ಮಲೆನಾಡಿನ ಪ್ರಕೃತಿ ಲೋಕ ಕಣ್ಣೆದುರಿಗೇ ನಿಂತಷ್ಟು ನೈಜತೆಯಲ್ಲಿ ಮೂಡಿ ಬರುತ್ತದೆ.
ಕಾದಂಬರಿಯ 'ಅರಿಕೆ' ಯಲ್ಲಿ ಕುವೆಂಪು ಅವರೇ ಹೇಳಿರುವಂತೆ 'ಕಾದಂಬರಿ ಅಂಗೈ ಮೇಲಣ ನಾಟಕಶಾಲೆ'. ವಿಧ ವಿಧದ ದೃಶ್ಯಗಳ, ವ್ಯಕ್ತಿಗಳ, ಸನ್ನಿವೇಶಗಳ ಪೂರ್ಣ ಸ್ವಾರಸ್ಯ ಸಿಗಲು ಅವುಗಳು ಓದುವವರ ಪ್ರತಿಭೆಯಲ್ಲಿ ಮತ್ತೊಮ್ಮೆ ಸೃಷ್ಟಿಯಾಗಬೇಕಾಗುತ್ತದೆ.
ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ, ಕಳೆದ ಶತಮಾನದ ಆರಂಭದ ಕಾಲಘಟ್ಟದಲ್ಲಿ ಮಲೆನಾಡು ಪ್ರದೇಶದ ಸೂಕ್ಷ್ಮ ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಅಲ್ಲಿನ ಕೆಲವು ಕುಟುಂಬಗಳ ಜನರ ಬದುಕಿನ ಹಿನ್ನೆಲೆಯಲ್ಲಿ ಈ ಕಾದಂಬರಿಯ ಓದುಗರು ಗ್ರಹಿಸಬಹುದು. ಜಮೀನುದಾರಿಕೆಯ ದರ್ಪ, ಅಧಿಕಾರದ ಪ್ರತಿನಿಧಿಯಂತಿರುವ ಕಾನೂರು ಚಂದ್ರಯ್ಯಗೌಡರ ಕುಟುಂಬವು ಕತೆಯ ಕೇಂದ್ರಬಿಂದು. ಈ ಕುಟುಂಬದ ಒಳಗಿನ ಹಾಗೂ ಹೊರಗಿನ ಸಂಬಂಧಗಳು ಅಂದಿನ ಕಾಲದ ಕೌಟುಂಬಿಕ ಹಾಗೂ ಸಾಮೂಹಿಕ ಜೀವನದ ಪ್ರತಿಮೆಗಳಾಗಿ ಕಾಣಬರುತ್ತವೆ.
- ಶ್ರೀನಾಥ್ ಶಿರಗಳಲೆ ಬ್ಲಾಗ್ ವಿಮರ್ಶೆ
https://srikannadi.blogspot.com/2016/09/blog-post.html
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.