ಶಿವರಾಮ ಕಾರಂತರ ಆಯ್ದ ಬಿಡಿ ಬರಹಗಳು (ಇಬುಕ್)

ಶಿವರಾಮ ಕಾರಂತರ ಆಯ್ದ ಬಿಡಿ ಬರಹಗಳು (ಇಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

GET FREE SAMPLE

"....ಕಾರಂತರ ಬಿಡಿ ಲೇಖನಗಳನ್ನೆಲ್ಲಾ ಒಂದುಗೂಡಿಸಿ, ವಿಶ್ವವಿದ್ಯಾನಿಲಯ ಪ್ರಕಟಿಸುವುದು ಕೇವಲ ಕಾರಂತರಿಗೆ ಮರ್ಯಾದೆ ಮಾಡುವುದಕ್ಕಾಗಿ ಅಲ್ಲ. ಕಾಲಮಾನದ ಬದಲಾವಣೆಗಳಲ್ಲಿ, ಸಂಘರ್ಷಗಳಲ್ಲಿ ಒಬ್ಬ ಚಿಂತನಶೀಲ, ಪ್ರತಿಭಾನ್ವಿತ ಹಾಗೂ ಕಳಕಳಿಯ ವ್ಯಕ್ತಿ ಯಾವ ರೀತಿ ಸ್ಪಂದಿಸಿದ? ಯಾವ ರೀತಿ ವಿಚಾರಿಸಿದ? ಯಾವ ರೀತಿ ಚಿಂತನೆ, ಸ್ಪಂದನೆಯನ್ನು ಬರವಣಿಗೆಗಳಲ್ಲಿ, ಭಾಷಣಗಳಲ್ಲಿ ಅಭಿವ್ಯಕ್ತಿಸಿದ ಎನ್ನುವುದು ನಾಡಿನ ಇತಿಹಾಸದ ದೃಷ್ಟಿಯಿಂದ ಮೌಲಿಕ. ಕಾರಂತರು, ಕಾರಂತರ ಸಾಹಿತ್ಯ, ಕಾರಂತರ ಬರವಣಿಗೆ, ಕಾರಂತರ ಬೆಳವಣಿಗೆ, ಕಾರಂತರ ಕಾಲದ ರಾಜಕೀಯ, ಸಾರ್ವಜನಿಕ ಪರಿಸರ - ಇವುಗಳ ಬಗ್ಗೆ ಸಂಶೋಧನೆ ಮಾಡುವವರಿಗೆ ಇದು ಒಂದು ಸೂಕ್ತವಾದ ಆಕರ ಗ್ರಂಥ" (ಪ್ರೊ. ಎಂ.ಐ. ಸವದತ್ತಿ, ಕುಲಪತಿಯವರು, ಮಂಗಳೂರು ವಿಶ್ವವಿದ್ಯಾಲಯ).

ಶಿವರಾಮ ಕಾರಂತರ ಬರಹ, ಭಾಷಣಗಳಿಂದ, ಸಂದರ್ಶನಗಳಿಂದ ಪ್ರಭಾವಿತರಾಗಿ - ಲೇಖಕರು, ಕಲಾವಿದರು, ಸಾಹಿತಿಗಳು, ಸಾಹಸಿಕ ಉದ್ಯಮಿಗಳಾಗಿ ಹೊರಹೊಮ್ಮಿ ದವರು ಕರ್ನಾಟಕದಲ್ಲಿ ಹಲವು ಜನರಿದ್ದಾರೆ. ಇತ್ತೀಚೆಗೆ, ಸಾಲಿಗ್ರಾಮದ ʼಮಾನಸ' ನಿವಾಸದಲ್ಲಿರುವ ʼಶಿವರಾಮ ಕಾರಂತ ಸ್ಮೃತಿ ಚಿತ್ರಶಾಲೆ'ಗೆ ಭೇಟಿ ನೀಡಿದ್ದ ತಮಿಳಿನ ಹೆಸರಾಂತ ಲೇಖಕರೊಬ್ಬರು ತಾವು ಕಾರಂತರನ್ನು ತನ್ನ ಎಳೆಯ ವಯಸ್ಸಿನಲ್ಲಿ ಭೇಟಿ ಮಾಡಿದ್ದ ಬಗ್ಗೆ, ಅವರ ಆಶೀರ್ವಾದದ ಬಲದಿಂದ - ತಮಿಳಿನ ಪ್ರಸಿದ್ಧ ಸಾಹಿತಿಯಾಗಿ ಬೆಳೆದ ಕುರಿತು - ಹೃದಯಸ್ಪರ್ಶಿಯಾಗಿ - ನನ್ನೊಂದಿಗೆ ವಿವರಿಸುತ್ತಿದ್ದಾಗ-ನನಗೂ ಮನವರಿಕೆಯಾಗಿತ್ತು - ಕನ್ನಡದ ಶಿವರಾಮ ಕಾರಂತರು ಇಂತಹ ಲಕ್ಷೋಪ ಲಕ್ಷ ಅಭಿಮಾನಿಗಳ ಬದುಕಿನಲ್ಲಿ ಸ್ಫೂರ್ತಿಯ ಸೆಲೆಯಾಗಿದ್ದರು- ಎಂಬುದಾಗಿ. ʼಕಾರಂತರ ಆಯ್ದ ಬರಹಗಳ' ಈ ಸಂಪುಟ ಇಂದಿನ ಮತ್ತು ಮುಂದಿನ ತಲೆಮಾರಿನ ಜನರಿಗೂ ʼನಾನೂ ಕಾರಂತರಂತೆ ಆಗಬೇಕು' ಎಂಬ ಹಂಬಲವನ್ನು ಮೂಡಿಸಿ ಅವರ ಸಮಗ್ರ ಬದುಕು, ಬರಹಗಳ ಅವಲೋಕನಕ್ಕೆ ಪ್ರೇರಣೆಯಾಗಲಿ ಎಂದು ನಾನು ಹಾರೈಸುತ್ತೇನೆ.

ಇತಿ,
ಬಿ. ಮಾಲಿನಿ ಮಲ್ಯ.

 

ಪುಟಗಳು: 301

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !