ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು (ಇಬುಕ್)

ಶಿವರಾಮ ಕಾರಂತರ ಬೆಲೆಬಾಳುವ ಬರಹಗಳು (ಇಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

GET FREE SAMPLE

ಮನುಷ್ಯನೊಬ್ಬನು ತನ್ನ ಜೀವಿತಾವಧಿಯಲ್ಲಿ ಒಟ್ಟು ಆಡಿದ್ದ ಮಾತುಗಳಿಗೆ ಲೆಕ್ಕವಿಡಲು ಸಾಧ್ಯವೇ? ಇದೇ ಪ್ರಶ್ನೆಯನ್ನು ಕನ್ನಡದ ಶಿವರಾಮ ಕಾರಂತರ ಭಾಷಣ, ಸಂದರ್ಶನಗಳಿಗೆ ಅನ್ವಯಿಸಿದಲ್ಲಿ ಅದೆಂದೂ ಉತ್ಪ್ರೇಕ್ಷೆಯ ಹೇಳಿಕೆಯಾಗದು. ಕರ್ನಾಟಕದ ಅಲ್ಪ ವಿದ್ಯಾವಂತರಿಂದ ತೊಡಗಿ, ಅತ್ಯಂತ ಜ್ಞಾನಿಗಳೆನಿಸಿಕೊಂಡವರೂ ಕಾರಂತರ ಮಾತಿನ ಮೋಡಿಗೆ ಒಳಗಾದವರೇ. ಅವಿರತ ಭಾಷಣ, ಸಂದರ್ಶನಗಳಿಂದಾಗಿ ಎಲ್ಲೆಲ್ಲೂ ಕಾರಂತರು ಜನಪ್ರೀತಿ ಗಳಿಸಿದ್ದರು; ಸಿನೆಮಾ ನಟರನ್ನು, ಕ್ರಿಕೆಟ್‌ ಆಟಗಾರರನ್ನು ಕಂಡು ಸಂತಸ, ವಿಸ್ಮಯ ತಾಳುವಂತೆ, ಸಾಹಿತಿ, ಕಲಾವಿದ, ಭಾಷಣಕಾರ, ಲೇಖಕ, ವಿದ್ವಾಂಸ-ಹೀಗೆ ಎಲ್ಲದರಲ್ಲಿ ಅನೇಕವಾಗಿದ್ದ ಶಿವರಾಮ ಕಾರಂತರು-ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿದ್ದರು; ಅವರ ಭಾಷಣ, ಸಂದರ್ಶನಗಳಲ್ಲಿ ಪ್ರಸ್ತಾಪವಾಗದ ವಸ್ತು, ವಿಷಯಗಳೇ ಇರಲಿಲ್ಲ.

ಸತತ ವೈವಿಧ್ಯಮಯ ಬರವಣಿಗೆ, ಚಿತ್ರಲೇಖನ, ಕಲಾತ್ಮಕ ಚಟುವಟಿಕೆ, ಪ್ರವಾಸ, ಭಾಷಣ, ಸಂದರ್ಶನ, ಅಧ್ಯಯನ, ಮುಂತಾದ ಹತ್ತಾರು ತೆರನ ಬೌದ್ಧಿಕ ಚಟುವಟಿಕೆಗಳಲ್ಲಿ ೯೫ರ ಇಳಿವಯಸ್ಸಿನ ತನಕವೂ ತೊಡಗಿಕೊಂಡಿದ್ದ ಕಾರಂತರು-ಮನೆಯಲ್ಲಿದ್ದಾಗ “ಹೊತ್ತು ಹೋಗದು'' ಎಂದು ಆಗಾಗ ಗೊಣಗುತ್ತಲೇ ಇರುತ್ತಿದ್ದರು. “ಹೊತ್ತು ತಾನಾಗಿಯೇ ಹೋಗುವಂಥದು; ನಮ್ಮ ಪ್ರಯತ್ನವಿಲ್ಲದೆಯೇ'' ಎಂದು ನಂಬಿ, ಆಯುಷ್ಯವನ್ನು ಕಾಡು ಹರಟೆಗಳಲ್ಲಿ, ಸೋಮಾರಿತನದಲ್ಲಿ ಕಳೆಯುವಂಥವರಿಗೆ ಕಾರಂತರು ಮಾದರಿಯಾಗಿದ್ದರು. ಆಂಗ್ಲ ಭಾಷೆಯಲ್ಲಿ "Go to the Ants though sluggard" ಎಂಬ ಗಾದೆಯ ಮಾತಿದೆ: “ಎಲೈ ಮೈಗಳ್ಳನೇ, ಶಿವರಾಮ ಕಾರಂತರನ್ನು ಕಂಡು ಕಲಿ'' ಎಂಬ ನಾಣ್ಣುಡಿಯನ್ನು ಕನ್ನಡದಲ್ಲಿ ಸೃಷ್ಟಿಸಬಹುದಾದಷ್ಟು ಕ್ರಿಯಾಶೀಲ ವ್ಯಕ್ತಿಯಾಗಿದ್ದರು; ಶಕ್ತಿಯಾಗಿದ್ದರು-ತಮ್ಮ ಬದುಕಿನ ಉದ್ದಕ್ಕೂ.

ಇತಿ,
ಬಿ. ಮಾಲಿನಿ ಮಲ್ಯ.

 

ಪುಟಗಳು: 320

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !