ಶಿವರಾಮ ಕಾರಂತರ ಲೇಖನಗಳು ಸಂಪುಟ - 3 (ಇಬುಕ್)

ಶಿವರಾಮ ಕಾರಂತರ ಲೇಖನಗಳು ಸಂಪುಟ - 3 (ಇಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

GET FREE SAMPLE

ಸುಮಾರು 3000 ಪುಟಗಳಿಗೂ ಮಿಗುವ, 24 ಕಲಾಗ್ರಂಥಗಳನ್ನು ಕನ್ನಡಕ್ಕೆ ಕಾಣಿಕೆಯಾಗಿ ಕೊಟ್ಟಿರುವ ಶಿವರಾಮ ಕಾರಂತರು ವಿವಿಧ ಕಲಾ ವಿಷಯಗಳ ಬಗ್ಗೆ ಅಸಂಖ್ಯ ಉಪನ್ಯಾಸಗಳನ್ನು, ಪ್ರಾತ್ಯಕ್ಷಿಕೆಗಳನ್ನು ಕೊಡುತ್ತಲೇ ಬಂದಂತೆ, ಹಲವಾರು ಕಲಾಲೇಖಗಳನ್ನೂ ಪ್ರಕಟಿಸುತ್ತ ಬಂದಿದ್ದಾರೆ. ಈ ಸಂಪುಟದಲ್ಲಿ ಕಾರಂತರ ಕಲಾಲೇಖ ಗಳನ್ನು ಪ್ರಕಟಿಸಲಾಗಿದೆ. ಹಲವಾರು ಮೂಲ ಲೇಖನಗಳು ದೃಷ್ಟಾಂತ ಚಿತ್ರಗಳಿಂದ ಕೂಡಿವೆಯೆಂಬುದನ್ನು ಅಭ್ಯಾಸಿಗಳು ಗಮನಿಸಬೇಕು. ಕಲಾಭ್ಯಾಸಿಗಳು ಈ ಸಂಪುಟವನ್ನಲ್ಲದೆ, ಶಿವರಾಮ ಕಾರಂತರ ಲೇಖನಗಳ ಇತರ ಸಂಪುಟಗಳನ್ನೂ ಪರಿಶೀಲಿಸಬೇಕಾಗುತ್ತದೆ. ಅದರಲ್ಲಿಯೂ, ದ್ವಿತೀಯ ಸಂಘಟದಲ್ಲಿ ಪ್ರಕಟಿಸಲಾದ ಸಂಸ್ಕೃತಿ ವಿಷಯಕ ಲೇಖಗಳನ್ನೂ, ಸಂಶೋಧನ ಲೇಖಗಳ ವಿಭಾಗದಲ್ಲಿರುವ ಕಲಾ ವಿಷಯಗಳ ಸಂಶೋಧನ ಬರಹಗಳನ್ನೂ ಅಗತ್ಯವಾಗಿ ಅವಲೋಕಿಸಬೇಕಾಗುತ್ತದೆ. ಮಾತ್ರವಲ್ಲದೆ, ಹೆಚ್ಚಿನ ಅಭ್ಯಾಸಕ್ಕಾಗಿ ಶಿವರಾಮ ಕಾರಂತರ ಇತರ ಕಲಾಗ್ರಂಥಗಳನ್ನು ಸಹ ಪರಿಶೀಲಿಸಬೇಕು.

ʼʼಮನುಷ್ಯನನ್ನು ಇದ್ದ ಸ್ಥಿತಿಗಿಂತ ಉನ್ನತ ಮಟ್ಟಕ್ಕೇರಿಸುವ ಕೃತಿಯೇ ಕಲೆ'' ಎಂಬುದಾಗಿ ಕಲೆಯನ್ನು ವಿಮರ್ಶಿಸಿದ್ದಾರೆ. ಆದಿವಾಸಿ ಕುಟುಂಬಗಳಲ್ಲಿ ದೈವ, ದೇವರುಗಳ ಕಲ್ಪನೆ ಎಂದು ಹುಟ್ಟಿತೋ, ಅಂದಿನಿಂದ ಅಂತಹ ಕಲ್ಪನೆಗಳನ್ನು ಬಿಂಬಿಸುವ ಚಿತ್ರ, ಶಿಲ್ಪ, ಸಾಹಿತ್ಯ-ಮುಂತಾದ ಕಲೆಗಳು ಹುಟ್ಟಿಕೊಂಡುವು-ಎಂಬುದಾಗಿ ಊಹಿಸಲಾಗಿದೆ. ಕಲೆ ಮತ್ತು ಸಂಸ್ಕೃತಿ ಅವಳಿ ಮಕ್ಕಳಂತೆ ಎಂದುಕೊಳ್ಳಬಹುದು. ಚಲಚ್ಚಿತ್ರ, ಚಿತ್ರ, ಶಿಲ್ಪ, ವಾಸ್ತು, ಜಾನಪದ, ನೃತ್ಯ, ಸಂಗೀತ, ನಾಟಕ, ಯಕ್ಷಗಾನ-ಮುಂತಾದ ದೃಕ್‌- ಶ್ರವಣ ಲಲಿತಕಲೆಗಳ ಬಗ್ಗೆ 90ಕ್ಕೂ ಮಿಕ್ಕಿದ ಲೇಖನಗಳನ್ನು ಈ ಸಂಪುಟದಲ್ಲಿ ಸೇರಿಸಲಾಗಿರುವುದರಿಂದ, ಸಂಪುಟದ ಗಾತ್ರವನ್ನು ದೃಷ್ಟಿಯಲ್ಲಿರಿಸಿಕೊಂಡು, ಅನಿವಾರ್ಯ ವಾಗಿ ಸಂಸ್ಕೃತಿ ಮತ್ತು ಕಲಾಶೋಧಗಳ ಬರವಣಿಗೆಗಳನ್ನು ದ್ವಿತೀಯ ಸಂಪುಟದಲ್ಲಿ ಅಳವಡಿಸಿಕೊಳ್ಳಬೇಕಾಯಿತು. ಒಂದು ನಾಡಿನ ಭಾಷೆ, ಶಿಕ್ಷಣ, ಮತ್ತು ಸಂಸ್ಕೃತಿಗಳೊಳಗೆ ನಿಕಟ ಸಂಬಂಧವಿರುವುದೂ ಸರಿಯಷ್ಟೆ. ಆ ವಿಷಯಗಳಿಗೆ ಸಂಬಂಧಿಸಿದ ಕಾರಂತರ ಶೋಧೆ, ಚಿಂತನೆಗಳೇನೇನು-ಎಂಬುದನ್ನು ದ್ವಿತೀಯ ಸಂಪುಟದಲ್ಲಿ ಪ್ರಕಟಿಸಿರುವ ಸಂಶೋಧನ ಲೇಖನಗಳೂ ತಿಳಿಸುತ್ತವೆ. ಹಾಗಾಗಿ, ಅಭ್ಯಾಸಿಗಳ ಅನುಕೂಲಕ್ಕಾಗಿ-- ಒಂದಕ್ಕೊಂದು ಹೊಂದಿಕೆಯಾಗುವ ವಿಷಯಗಳ ಸಂಪುಟಗಳನ್ನು ಅನುಕ್ರಮವಾಗಿ ಪ್ರಕಟಿಸುತ್ತಿದ್ದೇನೆ. ಸಾಹಿತ್ಯ, ಸಂಸ್ಕೃತಿ, ಕಲೆ-ಮುಂತಾದ ವಿಷಯಗಳೂ ಅವಿಭಾಜ್ಯ ಅಂಗಗಳಾಗಿರುವುದರಿಂದ, ನಾಲ್ಕನೆಯ ಸಂಪುಟದಲ್ಲಿ ಸಾಹಿತ್ಯಿಕ ಬರವಣಿಗೆಗಳನ್ನು ಪ್ರಕಟಿಸಲಾಗುವುದು. ನಮ್ಮ ಬದುಕಿಗೆ ಸಂಬಂಧಿಸಿದ ಯಾವ ವಿಷಯವೂ ಒಂದನ್ನು ಬಿಟ್ಟು ಇನ್ನೊಂದಿಲ್ಲ; ಒಂದರ ಬೆಳವಣಿಗೆಗೆ ಇನ್ನೊಂದು ಅನಿವಾರ್ಯ ಯಾ ಪೂರಕ- ದೃಷ್ಟಿಕೋನವನ್ನು ಕಾರಂತರ ಎಲ್ಲ ಬರಹಗಳೂ ತಳೆದಿವೆ-ಎಂಬುದನ್ನು ಅವರ ಬರವಣಿಗೆಗಳು ತಿಳಿಸುವುದರಿಂದ-ಅವರ ಲೇಖನಗಳನ್ನು ವಿಷಯಕ್ಕೆ ಅನುಗುಣವಾಗಿ ವರ್ಗೀಕರಿಸುವುದು ಕಷ್ಟದ ಕೆಲಸ. ಹಾಗಾಗಿ, ಶಿವರಾಮ ಕಾರಂತರ ಲೇಖನಗಳನ್ನು ನಾನು ಎಂಟು ಸಂಪುಟಗಳಲ್ಲಿ ಹಂಚಿ ಹಾಕಿರುವುದು ಒಂದು ಸ್ಥೂಲ ವರ್ಗೀಕರಣದ ರೀತಿಯನ್ನು ದೃಷ್ಟಿಯಲ್ಲಿರಿಸಿಕೊಂಡು-ಎಂಬ ಸಂಗತಿಯನ್ನು ಅಧ್ಯಯನಾಸಕ್ತರು ವಿಶೇಷ ವಾಗಿ ಗಮನಿಸಬೇಕು.

 

ಪುಟಗಳು: 526

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !