ಶಿವರಾಮ ಕಾರಂತರ ಲೇಖನಗಳು ಸಂಪುಟ - 5 (ಇಬುಕ್)

ಶಿವರಾಮ ಕಾರಂತರ ಲೇಖನಗಳು ಸಂಪುಟ - 5 (ಇಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

GET FREE SAMPLE

ಕಾರಂತರ ಬಿಡಿ ಬರಹಗಳ 5ನೆಯ ಸಂಪುಟವನ್ನು ಓದುಗರ ಮುಂದಿಡಲು ಸಂತೋಷವೆನಿಸುತ್ತಿದೆ. ಈ ಸಂಪುಟದಲ್ಲಿ- ಧಾರ್ಮಿಕ, ತಾರ್ಕಿಕ, ವೈಜ್ಞಾನಿಕ ಮತ್ತು ಇತರ ವೈಚಾರಿಕ ಲೇಖನಗಳನ್ನು ಸೇರಿಸಲಾಗಿದೆ.

ತಾರುಣ್ಯದ ಉಕ್ಕು, ಸೊಕ್ಕುಗಳ ಆವೇಶವನ್ನು ಅಪ್ಪಟ ದೇಶಪ್ರೇಮ, ರಾಷ್ಟ್ರಭಕ್ತಿ, ಸಮಾಜೋದ್ಧಾರಗಳ ಕನಸಿನಲ್ಲಿ ತೊಡಗಿಸಿಕೊಂಡು, ಕೆಚ್ಚೆದೆಯ ಯೋಧನಂತೆ ದಿಟ್ಟ ಹೆಜ್ಜೆಗಳನ್ನಿಡುತ್ತ, ಮುನ್ನುಗ್ಗುತ್ತಿದ್ದ ಎಳೆಯ ತರುಣನಿಗೆ ಮಾನಸಿಕ ಧೈರ್ಯ, ಸ್ಥೈರ್ಯಗಳನ್ನು ನೀಡುತ್ತಿದ್ದ ಪ್ರಬಲ ಅಸ್ತ್ರವೇ-ದೇವರು ಮತ್ತು ಧರ್ಮ ಆಗಿದ್ದ ಕಾಲವದು. ಹಾಗಾಗಿ, ಕಾರಂತರ ಆರಂಭದ ಅನೇಕ ಬರವಣಿಗೆಗಳಲ್ಲಿ - ದೇವರು, ಧರ್ಮ, ತತ್ವಜ್ಞಾನಿಗಳನ್ನು ಕುರಿತ ಭಕ್ತಿ, ನಂಬಿಕೆಗಳ ನೆರಳನ್ನು ಗುರುತಿಸಬಹುದು. ಕ್ರಾಂತಿ, ಆವೇಶ, ಆದರ್ಶಗಳನ್ನು ಗಾಢವಾದ ತನ್ಮಯತೆಯಿಂದ ತಬ್ಬಿಕೊಂಡು ಬಿಡುವ ವಯಸ್ಸು- ತಾರುಣ್ಯ. ಈ ಶತಮಾನದ ಆರಂಭದ ದ್ವಿತೀಯ ದಶಕದಲ್ಲಿ- ಮಹಾತ್ಮಾ ಗಾಂಧೀಜಿ ಎಂಬೊಬ್ಬ ವ್ಯಕ್ತಿ- ಸಮಗ್ರ ಭಾರತವಾಸಿಗಳ ಮನಸ್ಸು, ಭಾವನೆ, ಜೀವನದ ಮೇಲೆ ಅಯಸ್ಕಾಂತೀಯ ಪ್ರಭಾವವನ್ನು ಬೀರಿದ್ದ ದಿನಗಳವು. ಆತನ ವಾಣಿಯ ಮಹಾಪ್ರವಾಹದಲ್ಲಿ ಇಡೀ ಭಾರತ ದೇಶದ ಜನತೆ ಕೊಚ್ಚಿಹೋಗುತ್ತಿದ್ದ ಸಂಕ್ರಮಣ ಕಾಲದಲ್ಲಿ- ಯೌವನದ ಹೊಸ್ತಿಲನ್ನು ಆಗ ತಾನೇ ತುಳಿಯುತ್ತಿದ್ದ ಎಳೆಯ ತರುಣನೂ, ಮಹಾತ್ಮರ ರಣಕಹಳೆಯ ಮೊಳಗಿನಿಂದ ಉತ್ತೇಜಿತನಾದುದರಲ್ಲಿ ಅಚ್ಚರಿಯೇನೂ ಇಲ್ಲ. ಆ ದಶಕಗಳಲ್ಲಿ--ಅನ್ಯ ಭಾರತೀಯರಂತೆ, ತರುಣ ಶಿವರಾಮ ಕಾರಂತರ ಕತ್ತು ಸಹ- ತಮ್ಮ ಆವೇಶ, ಆದರ್ಶಗಳಿಗೆ ರೂಪುಕೊಡಲು, ಮಹಾತ್ಮರತ್ತವೇ ಹೊರಳಿತ್ತು. ಅಂದು, ಗಾಂಧೀಜಿಯವರ ಮಾತು, ಸಮಸ್ತ ಭಾರತೀಯರ ಪಾಲಿಗೆ ಅಮೃತವಾಗಿತ್ತು; ಅವರ ಬದುಕು ಅನುಸರಣೀಯ ಆದರ್ಶವೆನಿಸಿತ್ತು. ಅವರ ನಂಬಿಕೆ, ಬೋಧೆ, ನಡವಳಿಕೆಗಳೇ ದಾಸ್ಯದ ಶೃಂಖಲೆಯಿಂದ ಭಾರತೀಯರನ್ನು ಮುಕ್ತರನ್ನಾಗಿಸುವ ಅಸ್ತ್ರಗಳೆನಿಸಿದ್ದುವು.

 

ಪುಟಗಳು: 510

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !