ಬರಹಗಾರರು: ಕರಣಂ ಪವನ್ ಪ್ರಸಾದ್
’ನನ್’ ಒಬ್ಬಳ ಸತ್ಯದ ಹುಡುಕಾಟದಂತೆ ಕಾಣುವ ಈ ಕಾದಂಬರಿ, ಆಳದಲ್ಲಿ ಮನುಷ್ಯನ ಮೂಲ ಪ್ರವೃತ್ತಿಯ ಹುಡುಕಾಟವಾಗಿದೆ. ಸಮಕಾಲೀನವಲ್ಲದ, ಒಂದು ಪ್ರದೇಶದ ಸೀಮಿತ ವಸ್ತುವನ್ನು ಒಳಗೊಳ್ಳದ, ವಿಸ್ತಾರವಾಗಿ ಹರಡಿಕೊಂಡಿರುವ ಕಥಾವಸ್ತುವಿನಲ್ಲಿ, ಪ್ರತಿ ಪಾತ್ರವೂ ’ಸತ್ಯ ಎಂದರೆ ಸೂರ್ಯನಿದ್ದಂತೆ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವು ಎಂದುದನ್ನು ನಿರೀಕ್ಷಿಸುತ್ತದೆ.’ ವಸ್ತು, ಸಾಮಗ್ರಿ, ರಸಸೃಷ್ಟಿ, ಅಭಿವ್ಯಕ್ತಿ ಇವೆಲ್ಲದರ ಒಟ್ಟಂದದ ಕಲಾಕೃತಿಯೇ ’ನನ್ನಿ’