ಕೇಶಕ್ಷಾಮ ಮತ್ತು ಇತರ ಹಾಸ್ಯ ಲೇಖನಗಳು

ಕೇಶಕ್ಷಾಮ ಮತ್ತು ಇತರ ಹಾಸ್ಯ ಲೇಖನಗಳು

Regular price
$3.49
Sale price
$3.49
Regular price
Sold out
Unit price
per 
Shipping does not apply

ಪ್ರಕಾಶಕರು: ಪರಿಶ ಪ್ರಕಾಶನ

Publisher: Parisha Prakashana

 

ಇದು ಗುರುಪ್ರಸಾದ ಕುರ್ತಕೋಟಿ ಅವರು ಬರೆದಿರುವ ಹಾಸ್ಯ ಬರಹಗಳ / ಕತೆಗಳ ಸಂಗ್ರಹ. ಇದರಲ್ಲಿನ ಬಹುತೇಕ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟ ಆಗಿವೆ. ಅವರು ಐಟಿ ಉದ್ಯಮದಲ್ಲಿ ಕೆಲಸ ಮಾಡುವಾಗ ನಡೆದ ಕೆಲವು ಘಟನೆಗಳನ್ನು ಆಧರಿಸಿ, ವಿವಿಧ ಕಾಲಘಟ್ಟದಲ್ಲಿ ತಮ್ಮ ಜೀವನಾನುಭವಗಳನ್ನು ಸೇರಿಸಿ, ಹಾಸ್ಯವನ್ನು ಬೆರೆಸಿ ಹಾಗೂ ಕೆಲವು ಕಡೆ ವ್ಯಂಗ್ಯವನ್ನು ಲೇಪಿಸಿ ಸೃಷ್ಟಿಸಿರುವ ಲೇಖನಗಳು ಇಲ್ಲಿವೆ. ಇವುಗಳು ತಮಗೆ ಇಷ್ಟವಾಗಿ ಮುಖದಲ್ಲಿ ನಗು ತರಿಸಿದರೆ ಲೇಖಕರ ಶ್ರಮ ಸಾರ್ಥಕವಾದಂತೆ. ಅವರ ಬರಹಗಳ ಕುರಿತು ಕೆಲವು ಸಹೃದಯರ ಅಭಿಪ್ರಾಯಗಳು ಕೆಳಗಿನಂತಿವೆ. 

 

ಬೇರೊಬ್ಬ ರೋಗಿಯನ್ನು ಗಮನಿಸುತ್ತಿದ್ದ ನನ್ನ ಬಳಿ ವ್ಯಕ್ತಿಯೊಬ್ಬರು ಬಂದು “ಬಹಳ ಟೆನ್ಶನ್ ಆಗಿಬಿಟ್ಟಿದೆ, ನೋಡಿ ಸರ್” ಎಂದು ಹೇಳಿದರು. ಅವರನ್ನು ಕುಳ್ಳಿರಿಸಿ, ಆಗ ತಾನೇ ಕೈಗೆ ಸಿಕ್ಕ ‘ಸುಧಾ’ ಓದುವುದಕ್ಕೆ ಕೊಟ್ಟೆ. ಕೆಲವು ಸಮಯದ ಬಳಿಕ ಹೊರಟು ನಿಂತ ಆ ವ್ಯಕ್ತಿ “ಟೆನ್ಶನ್ ಎಲ್ಲಾ ಹೋಯ್ತು, ಬರ್ತೀನಿ ಸರ್” ಎಂದು ಹೊರಟೇ ಹೋದರು. ಗಮನಿಸಿದಾಗ ಅವರು ಗುರುಪ್ರಸಾದ ಕುರ್ತಕೋಟಿಯವರ “ಭಾರ್ಯಾಭಿಮಾನಿ” ಹಾಸ್ಯ ಲೇಖನ ಓದುತ್ತಿದ್ದುದು ತಿಳಿಯಿತು. ನನ್ನ ಫಿ ನೂರು ರುಪಾಯಿ ನಷ್ಟ! 

 - ಡಾ. ಕೆ. ಕೆ. ಜಯಚಂದ್ರ ಗುಪ್ತಾ, ಹಾಸನ

 

 

ಕನ್ನಡದಲ್ಲಿ ಹಾಸ್ಯ ಲೇಖನಗಳ ಸರಣಿ ಇನ್ನೂ ನಿಂತುಹೋಗಿಲ್ಲ ಎಂದು ನಿರೂಪಿಸಿದ್ದೀರಿ. ಎಂ.ಎಸ್. ನರಸಿಂಹಮೂರ್ತಿ, ಎಂ.ಪಿ. ಮನೋಹರಚಂದ್ರನ್, ಅನಂತ ಕಲ್ಲೋಳರು ನೆನಪಿಗೆ ಬರುವಂತೆ ಮಾಡಿದಿರಿ. ನಿಜವಾದ ಪಂಚ್ ನ್ನು ಕೊನೆಗಿಟ್ಟು ಲೇಖನದ ಸ್ವಾರಸ್ಯವನ್ನು ಕಾಪಿಟ್ಟುಕೊಂಡಿದ್ದೀರಿ. ತುಂಬ ಸಂತೋಷವೆನಿಸಿತು. ಶುಭವಾಗಲಿ.

- ಶಂಕರ ಅಜ್ಜಂಪುರ, ಶಿವಮೊಗ್ಗೆ

 

 

ಕನ್ನಡ ಭಾಷಿಕರಿಗೆ ಒಂದು ಚಾಟಿ ಏಟು ಈ ಲೇಖನ. ಹಾಸ್ಯ ಮಿಶ್ರಿತವಾಗಿ ನಮ್ಮಲ್ಲಿನ ಒಂದು ದುರಭ್ಯಾಸವನ್ನು ಅಣಕ ಮಾಡಿ ತೋರಿಸಿದ್ದೀರಿ. ಹೌದು ನಮಗೆ ನಮ್ಮ  ಭಾಷೆ ನೆಟ್ಟಗೆ ಮಾತಾಡೋಕೆ ಬರದಿದ್ರೂ ಬೇರೆ ಭಾಷಿಕರೊಂದಿಗೆ  ಅವರ ಭಾಷೆಯಲ್ಲೇ ಮಾತಾಡಿ ಅವರ ಎದುರು ಹೀರೋ ಎನ್ನಿಸಿಕೊಳ್ಳುವ ಖಯಾಲಿ. ಒಳ್ಳೆಯ ಲೇಖನಕ್ಕೆ ವಂದನೆಗಳು ಗುರುಪ್ರಸಾದ

- ಬಾಲಸುಬ್ರಮಣ್ಯಂ ಕೆ. ಎಸ್., ಬೆಂಗಳೂರು