ಪೂರ್ವ ಆಫ್ರಿಕಾದ ತಾಂಜಾನಿಯಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತಾರೋಹಣದ ಚಾರಣ ವಿವರಗಳು ಈ ಕೃತಿಯಲ್ಲಿವೆ. ಲೇಖಕ ಪ್ರಶಾಂತ ಬೀಚಿ ಅವರು ಅಲ್ಲಿಯೇ ಸುಮಾರು ವರ್ಷಗಳ ಕಾಲ ನೆಲೆಸಿದ್ದರು. ಆದ್ದರಿಂದ ತಾಂಜಾನಿಯಾದ ಇತರ ಆಸಕ್ತಿಕರ ಸಂಗತಿಗಳ ಕುರಿತೂ ಇಲ್ಲಿ ಪ್ರಬಂಧವನ್ನು ಬರೆದಿದ್ದಾರೆ. ಈ ಕೃತಿ ನಿಮಗೆ ಪೂರ್ವ ಆಫ್ರಿಕಾದ ಕುರಿತ ವಿಶೇಷ ಪ್ರವಾಸ ಕಥನವನ್ನು ನೀಡುತ್ತದೆ.
೧೯೭೬ರಲ್ಲಿ ಜನನ. ಓದಿ ಬೆಳೆದದ್ದು ಬೀರೂರು, ಶಿವಮೊಗ್ಗ ಮತ್ತು ಬೆಂಗಳೂರಲ್ಲಿ. ಭಾರತದಲ್ಲಿ ಏಳು ವರ್ಷ ಕೆಲಸ ಮಾಡಿ ಈಗ ಪೂರ್ವ ಆಫ್ರಿಕಾದ ತಾನ್ಜಾನಿಯಾದಲ್ಲಿ ಮಡದಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸ. ಬೆನ್ಸನ್ ಇನ್‌ಫಾರ್ಮಟಿಕ್ಸ್‌ನಲ್ಲಿ ತಾಂತ್ರಿಕ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಪ್ರಮುಖ ನಿಯತಕಾಲಿಕಗಳಲ್ಲಿ ಮತ್ತು ದಟ್ಸ್ ಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಕತೆ, ಕವನ, ಲೇಖನಗಳು ಪ್ರಕಟವಾಗಿವೆ. ಪ್ರಶಾಂತ್ ಬೀರೂರು ಚಿಕ್ಕಣ್ಣ ದೇವರು ಎಂಬ ಹೆಸರೇ ಪ್ರಶಾಂತ್ ಬೀಚಿಯಾಗಿದೆ. ತಂದೆ, ತಾಯಿ ಮತ್ತು ಅಕ್ಕಂದಿರು ಕರ್ನಾಟಕದಲ್ಲಿ ವಾಸಿಸುತ್ತಾರೆ. ಲೇರಿಯೊಂಕ ಎಂಬ ಅನುವಾದಿತ ಕಾದಂಬರಿಗೆ ಬೇಂದ್ರೆ, ಪರಮೇಶ್ವರ ಭಟ್ಟ ಮತ್ತು ವಸುದೇವ ಭೂಪಾಲಂ ಪುಸ್ತಕ ಬಹುಮಾನಗಳು ದೊರೆತಿವೆ.
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !