ಶಕೀಲಾ

ಶಕೀಲಾ

Regular price
$9.99
Sale price
$9.99
Regular price
Sold out
Unit price
per 
Shipping does not apply

ಹೆಣ್ಣಿನ ಶೋಷಣೆಯ ತಮ್ಮ ಅನುಭವವನ್ನು ಶಕೀಲಾ ಇಲ್ಲಿ ದಾಖಲಿಸಿದ್ದಾರೆ. ಹೆಣ್ಣಿನ ಶೋಷಣೆಗೆ ಗಂಡು ಮಾತ್ರ ಕಾರಣವಲ್ಲ, ಹೆಣ್ಣು ಕೂಡ ಎಂಬುದನ್ನು ಅವರಿಲ್ಲಿ ಒಡೆದು ಹೇಳಿದ್ದಾರೆ.

‘‘ನನ್ನ ಬೆತ್ತಲೆ ದೇಹವನ್ನು ನೋಡಲು ಹಾತೊರೆಯುವ ಪ್ರೇಕ್ಷಕ, ನನ್ನ ಬೆತ್ತಲೆ ಮನಸ್ಸನ್ನೂ ಅರಿಯಬೇಕು’’ ಎಂದು ಶಕೀಲಾ ಪ್ರೇಕ್ಷಕರಲ್ಲಿ ಈ ಮೂಲಕ ಕೇಳಿಕೊಳ್ಳುತ್ತಿದ್ದಾರೆ.

ಒಂದು ದಿನ ಅಮ್ಮ ಬೆಳಿಗ್ಗೆಯೇ ಸ್ನಾನ ಮಾಡಲು ಹೇಳಿದರು. ಅದಕ್ಕೆ ನಾನು ಅಷ್ಟೊಂದು ಲಕ್ಷ್ಯ ಕೊಡಲಿಲ್ಲ. ಪುನಃ ಬಂದು ಹೇಳಿದರು. ಕಾಟ ತಡೆಯಲಾರದೆ ನಾನು ಮಿಂದು ಬಂದೆ. ಈಗ ಇಲ್ಲಿಗೊಬ್ಬರು ಬರುತ್ತಾರೆ. ಅವರ ಜೊತೆ ನೀನು ಒಂದು ಕಡೆಗೆ ಹೋಗಬೇಕು. ಅಲ್ಲಿ ಒಬ್ಬ ಒಳ್ಳೆಯ ಮನುಷ್ಯ ನಿನ್ನನ್ನು ಕಾಯುತ್ತಿರುತ್ತಾರೆ. ಮಧ್ಯಾಹ್ನ ಆಗುವಷ್ಟರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮನೆಗೆ ಬಂದರು. ಆತ ನನ್ನನ್ನು ಮೇಲಿನಿಂದ ಕೆಳಗಿನವರೆಗೆ ಅಳೆದು ತೂಗಿ ನೋಡಿದ. ಆತನ ತುಟಿಗಳು ಕಪ್ಪಗೆ ಸಣ್ಣಗಿದ್ದವು. ಆತನ ಕಣ್ಣುಗಳನ್ನು ನೋಡಲು ಅಂಜಿದೆ. ಆತ ನನ್ನನ್ನು ನೋಡಿ ನಕ್ಕರು. ಹಲ್ಲುಗಳಲ್ಲಿ ಬಹುತೇಕ ಎಲ್ಲವೂ ಸವೆದು ಅರ್ಧವಾಗಿದ್ದವು.

"ನೀನು ಬಹಳ ಸುಂದರಿ.... ತೆಳ್ಳಗಿನ ಸುಂದರಿ. ನಿನ್ನ ದೇಹಕ್ಕಿಂತಲೂ ನಿನ್ನ ಮುಖ ಎಷ್ಟು ಚೆನ್ನಾಗಿದೆ’’ ಆತನ ಮಧುರವಾದ ನುಡಿಗಳನ್ನು ಕೇಳಿ ನನಗೇನೂ ಅನ್ನಿಸಲಿಲ್ಲ. ಅವರು ನನ್ನ ಎರಡು ಕೈಗಳನ್ನು ಸೇರಿಸಿ ಹಿಡಿದರು. ಅದರ ನಂತರ ಮಂಚದತ್ತ ಕೊಂಡೊಯ್ದು ಕೂರಿಸಿದರು. ನನ್ನ ಹಣೆಯನ್ನು ಸವರುತ್ತಾ ಮೂಗ ತುದಿಯನ್ನು ನೋವಾಗದಂತೆ ಹಿಂಡುತ್ತಾ ಆಟವಾಡಿದರು. ಅವರಿಗೆ ನಲ್ವತ್ತು ವರ್ಷಕ್ಕಿಂತಲೂ ಹೆಚ್ಚಿಗೆ ವಯಸ್ಸಿತ್ತು.

ಹೀಗೆ ಶಕೀಲಾ ತಮ್ಮ ಜೀವನದ ಅನೇಕ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪುಟಗಳು : 232