ಕುಪ್ಪಳಿ ಡೈರಿ

ಕುಪ್ಪಳಿ ಡೈರಿ

Regular price
$7.99
Sale price
$7.99
Regular price
Sold out
Unit price
per 
Shipping does not apply

ಪ್ರಕಾಶಕರು: ಬಹುರೂಪಿ ಪ್ರಕಾಶನ

Publisher: Bahuroopi Prakashana


ಹಿ ಚಿ ಬೋರಲಿಂಗಯ್ಯನವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಅನೇಕ ಹುದ್ದೆಗಳನ್ನು ನಿರ್ವಹಿಸಿ ಕುಲಪತಿ ಸ್ಥಾನದ ಎತ್ತರ ತಲುಪಿದವರು. ಹಾಗೆಂದು ಕೊಂಡಿದ್ದಾರೆ ಎಲ್ಲರೂ.. ಆದರೆ ನನಗೋ ಅವರ ಬರಹಗಳು ಅದಕ್ಕಿಂತಲೂ ಮಿಗಿಲು. ಆ ಕಾರಣಕ್ಕಾಗಿಯೇ ಅವರ ‘ಕಾಡು ಕಾಂಕ್ರೀಟ್ ಮತ್ತು ಜಾನದ’ ‘ದೇಸಿ ಸಂಸ್ಕೃತಿ ಸಂಕಥನ’ ‘ವಿಸ್ಮೃತಿ ಸಂಸ್ಕೃತಿ’ಯಿಂದ ಆರಂಭಿಸಿ ಇವರು ಸಂಗ್ರಹಿಸಿ ವಿಶ್ಲೇಷಣೆ ಮಾಡಿದ ಮಲೆ ಮಹಾದೇಶ್ವರ ಕಾವ್ಯ, ರೂಪಿಸಿದ ಜಾನಪದ ಕಲೆಗಳ ಕೋಶ ಎಲ್ಲವನ್ನೂ ತಪ್ಪದೆ ಹಿಂಬಾಲಿಸಿದೆ.

ಆ ಕಾರಣದಿಂದಾಗಿಯೇ ‘ಅವಧಿ’ಗೆ ಒಂದು ಅಂಕಣ ಬರೆಯುವಂತೆ ಅವರನ್ನು ಒತ್ತಾಯಿಸಿದೆ. ಆಗ ನಾವಿಬ್ಬರೂ ಕುಳಿತು ಯೋಚಿಸಿದ್ದು ಅವರ ಕುಪ್ಪಳಿ ಅನುಭವವನ್ನು ದಾಖಲಿಸುವ ಕುರಿತು. ‘ಹೋಗುವೆನು ನಾ ಹೋಗುವೆನು ನಾ..’ ಎಂದು ಕುವೆಂಪು ಅವರು ಹಂಬಲಿಸಿದ ಆ ಕುಪ್ಪಳಿಯಲ್ಲಿ ಬೋರಲಿಂಗಯ್ಯನವರು ಕನ್ನಡ ವಿಶ್ವವಿದ್ಯಾಲಯದ ಹಿರಿಮೆಯನ್ನು ಹರಡಿದವರು.

ದಶಕಗಳಿಂದ ಅವರನ್ನು ಬಲ್ಲ ನನಗೆ ಕುಪ್ಪಳಿಯಲ್ಲಿ ಅವರು ವಿಶ್ವವಿದ್ಯಾಲಯವನ್ನೇ ಬೇಲಿ ಮಾಡಿಕೊಂಡು ಕೂರುವುದಿಲ್ಲ ಎಂದು ಚೆನ್ನಾಗಿ ಗೊತ್ತಿತ್ತು. ಅಂದು ಕೊಂಡಂತೆಯೇ ಅವರು ಅಲ್ಲಿಯ ಮಳೆಯನ್ನೂ, ಕಾಡನ್ನೂ, ಅದರ ವಾಸನೆಯನ್ನೂ, ಆರ್ಭಟವನ್ನೂ ಇನ್ನಿಲ್ಲದಂತೆ ಅನುಭವಿಸಿದ್ದಾರೆ. ಹೊಳೆಯಲ್ಲಿ ಇಳಿದು ಮೀನನ್ನು ಹಿಡಿದಿದ್ದಾರೆ, ಕಾಡು ಹೊಕ್ಕು ಅಣಬೆ ಎಣಿಸಿದ್ದಾರೆ, ಹಕ್ಕಿಗಳ ಬೆನ್ನು ಬಿದ್ದಿದ್ದಾರೆ.. ಅಷ್ಟೇ ಅಲ್ಲ ಅವರು ನಿಜ ಅರ್ಥದಲ್ಲಿ ಕುಪ್ಪಳಿಯ ನಿಸರ್ಗದಲ್ಲಿ ತಮ್ಮನ್ನು ಕಳೆದುಕೊಂಡಿದ್ದಾರೆ.

ಅವರ ದಿನನಿತ್ಯದ ಈ ಅನುಭವವೇ ಈಗ ‘ಕುಪ್ಪಳಿ ಡೈರಿ’ಯಾಗಿ ಹೊರಬರುತ್ತಿದೆ. ಕುವೆಂಪು, ತೇಜಸ್ವಿ ಅವರ ಕೃತಿಗಳ ಆವರಣವನ್ನು ಇನ್ನಷ್ಟು ಎದೆಗಿಳಿಸಿಕೊಳ್ಳಲು ಈ ಕೃತಿ ಒಂದು ಮೆಟ್ಟಿಲು...

- ಜಿ ಎನ್ ಮೋಹನ್

ಕನ್ನಡ ವಿಶ್ವವಿದ್ಯಾಲಯದ ನನ್ನ ೨೬ ವರ್ಷಗಳ ಸೇವೆಯಲ್ಲಿ ಸುಮಾರು ೨೬ ತಿಂಗಳನ್ನು ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರದಲ್ಲಿ ಕಳೆದೆ. ೨೦೦೯ರಿಂದ ೨೦೧೧ರವರೆಗಿನ ಅಲ್ಲಿ ನನಗಾದ ಪ್ರವಾಸಿ ಸ್ವರೂಪದ ಅನುಭವ ಕಥನವೇ ಈ ಕೃತಿ.

ಇದಕ್ಕೆ ‘ಕುಪ್ಪಳಿ ಡೈರಿ’ ಎಂದು ಹೆಸರಿಟ್ಟಿದ್ದೇನಾದರೂ ಪ್ರತಿದಿನದ ಚರ್ವಿತ ಚರ್ವಣ ವಿವರ ಇಲ್ಲಿಲ್ಲ. ಕುವೆಂಪು ಮತ್ತು ತೇಜಸ್ವಿಯವರ ಬರಹಗಳ ಹಿನ್ನೆಲೆಯಲ್ಲಿ ಕುಪ್ಪಳಿ ಪರಿಸರದಲ್ಲಿ ನಾನು ಅನುಭವಿಸಿದ ಆಪ್ತ ಚಿತ್ರಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದೇನೆ.

ಅಲ್ಲಿ ನನಗಾದ ವಿಶಿಷ್ಟ ಅನುಭವಗಳನ್ನು ಮಾತ್ರ ಬಹು ಎಚ್ಚರಿಕೆಯಿಂದಲೇ ಇಲ್ಲಿ ಆಯ್ದು ಕೊಟ್ಟಿದ್ದೇನೆ. ಏಕೆಂದರೆ ಕುವೆಂಪು ಮತ್ತು ತೇಜಸ್ವಿಯವರಂಥ ಮಹಾನ್ ಪ್ರತಿಭಾವಂತರು ಕಾಣ್ಕೆಯಾಗಿ ಕೊಟ್ಟ ಮಲೆನಾಡಿನ ಚಿತ್ರಗಳ ಮುಂದೆ ನನ್ನ ಬರಹ ಬಹುಶಃ ಅವರಿಬ್ಬರ ಒಂದು ಛಾಯೆ ಅಷ್ಟೆ. ಆದರೂ ಬಯಲು ಸೀಮೆಯವನಾದ ನನ್ನ ಅಂತರಾಳದ ಅನುಭವಗಳು ವಿಭಿನ್ನವಾಗಿಯೇ ಇವೆ ಎಂಬುದು ನನ್ನ ನಂಬಿಕೆ.

- ಹಿ.ಚಿ. ಬೋರಲಿಂಗಯ್ಯ

 

ಪುಟಗಳು: 192


ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !