ಲೇರಿಯೊಂಕ

ಲೇರಿಯೊಂಕ

Regular price
$4.99
Sale price
$4.99
Regular price
Sold out
Unit price
per 
Shipping does not apply

ಪ್ರಕಾಶಕರು: ಛಂದ ಪುಸ್ತಕ

Publisher: Chanda pusthaka

 

ಈ ಕೃತಿಯ ಕುರಿತು ಹಿರಿಯ ವಿಮರ್ಶಕರಾದ ರಹಮತ್ ತರೀಕೆರೆ ಈ ರೀತಿ ಅಭಿಪ್ರಾಯ ಪಡುತ್ತಾರೆ.

ದನಗಾಹಿ ಬುಡಕಟ್ಟಿನ ಒಬ್ಬ ಮುಗ್ಧ ಹುಡುಗ, ತನ್ನ ಹಾಡಿಯನ್ನು ಬಿಟ್ಟು ಶಾಲೆಗೆಂದು ನಗರಕ್ಕೆ ಹೋಗುವ ಮೂಲಕ ಶುರುವಾಗಿ, ಆತ ಆಧುನಿಕ ಶಿಕ್ಷಣ ಪಡೆದು ತರುಣನಾಗಿ ಮರಳಿ ಬರುವವರೆಗಿನ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ. ಇಡೀ ಕಥೆ ಒಂದು ದೀರ್ಘ ಪಯಣದ ವಿನ್ಯಾಸದಲ್ಲಿದೆ. ಈ ಮಹಾಪಯಣ ಕಥಾನಾಯಕನದು ಮಾತ್ರವಲ್ಲ, ಕಳೆದ ಶತಮಾನದಲ್ಲಿ ಆಫ್ರಿಕನ್ ಸಮುದಾಯಗಳು ಮಾಡಿದ್ದೂ ಕೂಡ. ಆದ್ದರಿಂದಲೇ ಕಾದಂಬರಿಯು ನಾಯಕನ ಆತ್ಮಚರಿತ್ರೆಯ ವಿನ್ಯಾಸ ದಲ್ಲಿದ್ದರೂ, ಅದು ಮಾಸಯಿ ಸಮುದಾಯ ಮತ್ತು ಕೀನ್ಯಾ ದೇಶಗಳ ಸ್ಥಿತ್ಯಂತರದ ಚರಿತ್ರೆಯೂ ಆಗಿದೆ. ರೋಚಕವೂ, ಮಾನವೀಯವೂ ವಿನೋದಪೂರ್ಣವೂ, ಕರುಣಾಜನಕವೂ ಆದ ಘಟನಾವಳಿಗಳಿಂದ ಕೂಡಿರುವ ಇಲ್ಲಿನ ಕಥನ ಅಪೂರ್ವವಾಗಿದೆ, ಕಾವ್ಯಮಯವಾಗಿದೆ.

ಇದನ್ನು ಓದುವಾಗ ಕುವೆಂಪು ಕಾದಂಬರಿಗಳು ನೆನಪಾಗುತ್ತವೆ; ಆಫ್ರಿಕನ್ ಲೇಖಕರಾದ ಶೋಯಿಂಕಾ, ಅಚಿಬೆ, ಗೂಗಿ ಅವರ ಕೃತಿಗಳು ನೆನಪಾಗುತ್ತವೆ. ಇವೆಲ್ಲವೂ ದೇಶೀ ಸಮಾಜಗಳು ಯುರೋಪಿಯನ್ ಆಧುನಿಕತೆಯ ಜತೆ ಮುಖಾಮುಖಿ ಮಾಡುವಾಗ ಹುಟ್ಟಿದ ಸಮಸ್ತ ತಲ್ಲಣಗಳನ್ನು ಒಳಗೊಂಡಿವೆ. ಪಶ್ಚಿಮದ ಜತೆ ಸೆಣಸಾಟ ಮಾಡಿದ ಎಲ್ಲ ನಾಡುಗಳ ರುದ್ರಾನುಭವವಿದು. ಅತಿಕ್ರಮಣದ ಜತೆ ಬಂದ ಶಿಕ್ಷಣ- ವೈಚಾರಿಕತೆಗಳನ್ನು ತ್ಯಜಿಸುವಂತಿಲ್ಲ; ಅವುಗಳ ಜತೆಗೇ ಇರುವ ರಾಜಕೀಯ ದಮನವನ್ನು ಸಹಿಸುವಂತಿಲ್ಲ; ಸ್ಥಳೀಯ ಬುಡಕಟ್ಟು ಸಂಸ್ಕೃತಿಗಳ ಚಹರೆಯನ್ನು ತ್ಯಜಿಸುವಂತಿಲ್ಲ; ಅವುಗಳ ಜಡತೆಯನ್ನು ಇಟ್ಟುಕೊಳ್ಳುವಂತಿಲ್ಲ. ಇದೊಂದು ದ್ವಂದ್ವಾತ್ಮಕ ಸೆಣಸಾಟ. ಈ ಸೆಣಸಾಟವು ಒಂದು ಕೈಯಲ್ಲಿ ಪುಸ್ತಕವನ್ನೂ ಮತ್ತೊಂದು ಕೈಯಲ್ಲಿ ಭರ್ಜಿಯನ್ನೂ ಹಿಡಿಯುವ ಲೇರಿಯೊಂಕನ ಚಿತ್ರದಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ.

ಪ್ರಶಾಂತ್ ಬೀಚಿ ಈ ಕಾದಂಬರಿಯನ್ನು ಅತ್ಯಂತ ಆಪ್ತವಾಗಿ ಕನ್ನಡಕ್ಕೆ ತಂದಿದ್ದಾರೆ.

 

ಪುಟಗಳು: 250

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !