ಲಿಪಿಯ ಪತ್ರಗಳು

ಲಿಪಿಯ ಪತ್ರಗಳು

Regular price
$7.99
Sale price
$7.99
Regular price
Sold out
Unit price
per 
Shipping does not apply

ಪ್ರಕಾಶಕರು: ಸಾವಣ್ಣ

Publisher: Sawanna

ಜಯನಗರದ ಹುಡುಗಿಯಾಗಿ ಸ್ವಚ್ಚಂದವಾಗಿ ಹಾರಾಡಿಕೊಂಡಿದ್ದ ನನಗೆ ಮೂರು ವರ್ಷಗಳ ಹಿಂದೆ ಮದುವೆಯಾಯಿತು. ಮದುವೆಯಾದ ಮೇಲೆ ಜವಾಬ್ದಾರಿ ಜಾಸ್ತಿ ಎಂದು ಅಮ್ಮ ಹೇಳಿದ್ದರೂ ನನಗೆ ಅದ್ಯಾವುದು ಅಷ್ಟಾಗಿ ತಟ್ಟಲ್ಲಿಲ್ಲ. ಮಾಡಿದ್ದು ತಿಂದು ಸುಮ್ಮನೆ ನನ್ನ ಕೆಲಸ ನೋಡಿಕೊಂಡು ಹೋಗುವ ಜಾಯಮಾನದವಳಾದ ನನಗೆ ಅತ್ತೆ ಮನೆಯಲ್ಲಿ ಒಂದು ಕಾರ್ಯಕ್ರಮ, ಅಮ್ಮನ ಮನೆಯಲ್ಲಿ ನಡೆಯುವ ಕಾರ್ಯಕ್ರಮ ಒಂದೇ ದಿವಸ ಬಂದು ಎಲ್ಲಿಗೆ ಹೋಗಲಿ ಎಂಬ ದ್ವಂದ್ವ ಶುರುವಾದಾಗಲೇ ಈ ಐಡಿಯಾ ಹೊಳೆದಿದ್ದು. ನನ್ನ ಮನಸ್ಸು ಬೇರೇನೋ ಮಾಡು ಅಂದರೂ ನನ್ನ ಬುದ್ಧಿ ಬೇರೇನೋ ಮಾಡಿರುತ್ತದೆ. ಅಥವಾ ಬುದ್ಧಿ ಅಂದುಕೊಂಡಿದ್ದನ್ನು ಮನಸ್ಸು ವಿಪರೀತ ಯೋಚನೆ ಮಾಡಿ ಡ್ರಾಮಾ ಮಾಡಿಸಿ ಇನ್ನೇನೋ ಮಾಡಿರಿಸುತ್ತದೆ. ಇದು ದಿನ ನಿತ್ಯದ ದ್ವಂದ್ವ. ಇದು ಬರಿ ಹೆಣ್ಣುಮಕ್ಕಳಿಗೆ ಆಗುವಂಥದ್ದಾ ಎಂಬ ಪ್ರಶ್ನೆಗೆ ನಾನು ಉತ್ತರಿಸಲಾರೆ ಯಾಕೆಂದರೆ ಅಪ್ಪ, ಅಮ್ಮನನ್ನ ಹಚ್ಚಿಕೊಂಡು ಮದುವೆಯಾಗಿ ಬೇರೆ ಮನೆಗೆ ಹೋಗಿರುವ ಗಂಡು/ಹೆಣ್ಣು ಇಬ್ಬರಲ್ಲೂ ಈ ಕನ್ಫ್ಯೂಷನ್‌ ಕಾಡಿರುತ್ತದೆ.

ಪತ್ರ ಬರೆಯೋದು ನನಗೆ ತಾತ ಹೇಳಿಕೊಟ್ಟ ವಿದ್ಯೆ. ಸೋದರತ್ತೆ ಒಬ್ಬರು ಬೇರೆ ಊರಲ್ಲಿದ್ದಾಗ ಇನ್ಲ್ಯಾಂಡ್‌ ಲೆಟರಿನಲ್ಲಿ ಮನೆಯ ಎಲ್ಲಾ ವಿಚಾರಗಳನ್ನೂ ಬರೆಯಬೇಕಾಗುತ್ತಿತ್ತು. ಮೊಮ್ಮಗಳಿಗೆ ಕನ್ನಡ ಬರೆಯೋದು ಅಭ್ಯಾಸವಾಗಲಿ ಎಂದು ಹಾಳೆ ಮಡಿಕೆಯ ಜಾಗದಲ್ಲಿ ಸ್ವಲ್ಪ ಸ್ವಲ್ಪವೇ ಕನ್ನಡದಲ್ಲಿ ಬರೆಯಲು ತಾತ ಅವಕಾಶ ಮಾಡಿಕೊಡುತ್ತಿದ್ದರು. ಕೆಲವೊಮ್ಮೆ ತಪ್ಪುಗಳಾಗುತ್ತಿತ್ತು. ಆದರೆ ತಾತ ಕೈಹಿಡಿದು ಬರೆಸುತ್ತಿದ್ದರು. ಈ ಪುಸ್ತಕವನ್ನೂ ಅವರೇ ಬರೆಸಿದ್ದಾರೆ ಎಂಬ ನಂಬಿಕೆ ನನಗೆ.

ಲಿಪಿ ಮತ್ತು ಲಿಖಿತಾ ಅವಳಿ ಜವಳಿ, ಒಂದು ನಾಣ್ಯದ ಎರಡು ಮುಖಗಳು. ಎಲ್ಲಾ ಮನುಷ್ಯರಿಗೂ ಆ ಎರಡು ಮುಖಗಳು ಇರುತ್ತವೆ. ಒಂದು ಬಹಳ ಭಾವುಕವಾದದ್ದು ಮತ್ತೊಂದು ಬಹಳ ಪ್ರಾಕ್ಟಿಕಲ್‌ ಆದದ್ದು. ಒಂದೊಂದು ಸಂದರ್ಭದಲ್ಲಿ ಒಂದೊಂದು ಮುಖ ಅನಾವರಣ ಆಗುತ್ತದೆ. ಇಲ್ಲಿ ಎರಡು ಹೆಣ್ಣುಮಕ್ಕಳು ಒಟ್ಟಿಗೆ ಹುಟ್ಟಿದರೂ ಅವರ ಗುಣ ಸ್ವಭಾವವೇ ಬೇರೆ, ಅವರು ಎಲ್ಲಾ ವಿಷಯಗಳನ್ನು ನೋಡುವ ಕೋನವೇ ಬೇರೆ. ಬಾಲ್ಯದಲ್ಲಿ ಆದ ಆನುಭವಗಳು ಒಬ್ಬಳನ್ನು ಮೆತ್ತಗೆ ಮಾಡಿಸಿತು, ಇನ್ನೊಬ್ಬಳನ್ನ ಗಟ್ಟಿಮಾಡಿಸಿತು, ಟೀನೇಜಿನಲ್ಲಿ ನೋಡಿದ ವಿಷಯಗಳು, ಅನುಭವಿಸಿದ ಕಿರುಕುಳಗಳನ್ನು ವಿಶ್ಲೇಷಣೆ ಮಾಡುವ ರೀತಿಯೇ ಬೇರೆ, ಅಥವಾ ಲವ್‌, ಮದುವೆ, ಸೆಕ್ಸ್‌ ಮತ್ತು ಒಂಟಿತನವನ್ನು ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ. ಭಾವುಕರಾಗಿ ಯೋಚಿಸಿದಾಗ ಬರುವ ಅಭಿಪ್ರಾಯಗಳು ಮತ್ತು ವ್ಯಾವಹಾರಿಕವಾಗಿ ಯೋಚಿಸಿದಾಗ ಬರುವ ಅಬಿಪ್ರಾಯಗಳು ಬೇರೆಯೇ. ಕೆಲವರಿಗೆ ಅದು ಸರಿ, ಕೆಲವರಿಗೆ ಇದು ಸರಿ.

ಲಿಪಿ ಮಕ್ಕಳ ಬಗ್ಗೆ, ಪೀರಿಯಡ್ಸ್‌ ಬಗ್ಗೆ, ಲಿಖಿತಾ ಸಂಪ್ರದಾಯ, ದೇವರ ಬಗ್ಗೆ ಬಹಳ ಪ್ಯಾಷನೇಟಾಗಿ ಬರೆಯುತ್ತಾರೆ. ಇವಷ್ಟಕ್ಕೂ ಆಲ್ಟರ್‌ನೇಟ್‌ ಆಯಾಮ ಇದ್ದೇ ಇರುತ್ತದೆ. ಅವರಿಬ್ಬರು ಅನುಭವಿಸಿದ ಡ್ರೆಸ್‌ ಕೋಡಿನ ಹಿಂಸೆಯಾಗಲಿ ಪ್ರಯಾಣ ಮಾಡುವಾಗ, ತಿನ್ನುವಾಗ, ಅವರ ಹವ್ಯಾಸಗಳು, ವೃದ್ಧಾಪ್ಯ ಮತ್ತು ಸಾವಿನ ಬಗ್ಗೆಯೂ ವಿಸ್ತಾರವಾಗಿ ಬರೆದು ತಮ್ಮ ಅಭಿಪ್ರಾಯ ಮತ್ತು ತಮ್ಮದೇ ವಾದವನ್ನು ಮಂಡಿಸುತ್ತಾರೆ. ನಾನು ಅರಿತಂತೆ ಎಲ್ಲಾ ಹೆಣ್ಣುಮಕ್ಕಳಲ್ಲೂ ಲಿಪಿ ಮತ್ತು ಲಿಖಿತಾ ಇರುತ್ತಾರೆ. ಒಬ್ಬರಿಗೊಬ್ಬರು ಮಾತಾಡಿದರೆ ಮಾತ್ರ ಜೀವನ ಸುಗಮ ಎಂಬುದು ನನ್ನ ನಂಬಿಕೆ.

 

-ಮೇಘನಾ ಸುಧೀಂದ್ರ

 

ಪುಟಗಳು : 156

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !