ಮಾತಿಲ್ಲಾ ಮಾತಿಲ್ಲಾ (ಇಬುಕ್)

ಮಾತಿಲ್ಲಾ ಮಾತಿಲ್ಲಾ (ಇಬುಕ್)

Regular price
$1.49
Sale price
$1.49
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

ಚೊಕ್ಕಾಡಿಯ ಒಂದು ಸಣ್ಣ ಮನೆಯಲ್ಲಿ ಕುಳಿತು ಸಾಹಿತ್ಯ ಕೃಷಿ ಮಾಡುತ್ತಿದ್ದ ಕೊಳಂಬೆಯವರು ಮಕ್ಕಳಿಗಾಗಿಯೂ ಪದ್ಯ ಬರೆದಿದ್ದಾರೆ. ಅವರ ವಿದ್ವತ್ತು ಅಚ್ಚಗನ್ನಡ ಪ್ರಜ್ಞೆಯನ್ನು ಮೆಚ್ಚಿಕೊಳ್ಳುವ ಭರದಲ್ಲಿ ನಾವು ಅವರ ಶಿಶು ಗೀತೆಗಳನ್ನು ಮರೆತು ಬಿಡುತ್ತೇವೆ. "ಹೂವೀಡು" ಅವರೇ ಪ್ರಕಟಿಸಿದ ಶಿಶುಗೀತೆಗಳ ಸಂಕಲನ. ಒಳ್ಳೆಯ ಪದ್ಯಗಳಿದ್ದು ಪ್ರಚಾ ರವಿಲ್ಲದೆ ಅವು ಮೂಲೆ ಸೇರಿವೆ.

ಅವರು ಪ್ರಕಟಿಸದೇ ಬಿಟ್ಟ ಉತ್ತಮ ಕವನಗಳನ್ನು ಈ ಸಂಕಲನದಲ್ಲಿ ನಾವು ಕಾಣಬಹಂದು. ಇಲ್ಲಿನ ಪದ್ಯಗಳಲ್ಲಿ ಅವರು ಮಕ್ಕಳಿಗೆ ಜೀವ ದುಂಬುವ ಕೆಲಸವನ್ನು ಮಾಡುತ್ತಾರೆ. ಅವರಿಗೆ ಅವಶ್ಯಕವಾಗಿರುವ ಹಲವು ವಿಷಯಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಅಧ್ಯಾಪಕರಾಗಿದ್ದ ಕೊಳಂಬೆಯ ವರಿಗೆ ಮಕ್ಕಳ ಮನೋಧರ್ಮ ಹೇಗಿರುತ್ತದೆಂದು ಚೆನ್ನಾಗಿ ಗೊತ್ತಿತ್ತು. ಆನೆ, ಬೆಕ್ಕು, ಇಲಿ, ನಾಯಿ, ದನ, ನೊಣ, ಕಳ್ಳ, ನುಸಿ ಮೊದಲಾದ ಪ್ರಾಣಿ ಗಳೇ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಮಕ್ಕಳ ಮನಸ್ಸು ಇಂಥದ್ದನ್ನು ಸುಲಭವಾಗಿ ಸ್ವೀಕರಿಸುತ್ತದೆ. ಹಲವು ಕವನಗಳು ದೊಡ್ಡವರಿಗೂ ಆಪ್ತ ವಾಗುತ್ತವೆ.

ಸಣ್ಣ ಪುಟ್ಟ ಸಾಲುಗಳಿರುವ ಇಲ್ಲಿನ ಕವನಗಳನ್ನು ಮಕ್ಕಳಿಗೆ ಸುಲಭ ವಾಗಿ ಅರ್ಥ ಮಾಡಿಕೊಳ್ಳಬಹುದು, ದೀರ್ಘವಾದ ಸಾಲುಗಳೂ ಇಲ್ಲಿ ಇಲ್ಲವೆಂದಲ್ಲ. ಒಂದು ಪುಸ್ತಕದಲ್ಲಿ ಮಗುವಿಗೆ ಅರ್ಥವಾಗದ ನಾಲ್ಕು ಮಾತುಗಳು ಬರುವುದೂ ತಪ್ಪಲ್ಲ. ನಿಘಂಟನ್ನು ನೋಡಿಯೋ ಹಿರಿಯ ರನ್ನು ಕೇಳಿಯೋ, ಇಲ್ಲವೇ ಸಂದರ್ಭಕ್ಕೆ ತಕ್ಕಂತೆ ತಾನೇ ಆಲೋಚಿಸಿ ಮಗು ಕ್ಲಿಷ್ಟ ಪದಗಳ ಅರ್ಥವನ್ನು ತಿಳಿಯಬೇಕು. ಮಗುವಿಗೆ ಲವಲೇಶವೂ ಕಷ್ಟ ಕೊಡದ ಪುಸ್ತಕ ಮಾತ್ರ ಉತ್ತಮ ಶಿಶು ಸಾಹಿತ್ಯ ಎನ್ನುವಂತಿಲ್ಲ, ಎನ್ನಬಾ ರದು. ಏಕೆಂದರೆ ಹೊಸ ಪದಗಳು ಬಂದರೆ ಮಾತ್ರ ಮಗುವಿನ ಶಬ್ದ ಭಂ ಡಾರ ಬೆಳೆಯುತ್ತದೆ; ಅದರ ಜ್ಞಾನ ವೃದ್ಧಿಸುತ್ತದೆ. ಕೊಳಂಬೆಯವರ ಈ ಪುಸ್ತಕ ಇದನ್ನು ತಕ್ಕ ಮಟ್ಟಿಗೆ ನೆರವೇರಿಸಿಕೊಡುತ್ತದೆ. ಒಟ್ಟು ಸೌಂ ದರ್ಯವನ್ನು ಗಮನಿಸಬೇಕಾದರೆ ಉದ್ಯಾನದತ್ತ ದೃಷ್ಟಿ ಹಾಯಿಸಬೇಕೇ ವಿನಾ ಒಂದೊಂದು ಗಿಡವನ್ನು ಬಿಡಿ ಬಿಡಿಯಾಗಿ ಪರೀಕ್ಷಿಸಿ ನೋಡಬುರದು. ನೋಡಿದರೆ ಚೆಲುವು ದಕ್ಕದು.

ಕೊಳಂಬೆಯವರ ಶೈಲಿ ಕೂಡಾ ಸರಳವಾದುದು. ನೆನಪಿನಲ್ಲಿಟ್ಟು ಕೊಳ್ಳಲು ಇಂಥ ಶೈಲಿ ಅಗತ್ಯ.

“ಮಾತಿಲ್ಲಾ ಮಾತಿಲ್ಲಾ
ಹೊಳೆ ಹರಿಯದೆ ಬಿಟ್ಟಿಲ್ಲ”

ಅಂಥ ಸಾಲುಗಳು ಸಹಜ ಸ್ಫೂರ್ತವಾಗಿರುವುದನ್ನು ಗಮನಿಸಬೇಕು. ಹಾಗಂತ ಗಿಡ್ಡ ಸಾಲುಗಳೇ ಇಲ್ಲಿ ಇವೆಯೆಂದಲ್ಲ. ಮರ, ಜೇನುಗೂಡು ಅಂಥ ಕವನಗಳಲ್ಲಿ ಉದ್ದುದ್ದ ಸಾಲುಗಳಿವೆ. ಕನ್ನಡದಲ್ಲಿ ಇದೂ ಸ್ವಾಗ ತಾರ್ಹ. ಏಕೆಂದರೆ ಕನ್ನಡ ನಮ್ಮ ಮಕ್ಕಳ ಮಾತೃ ಭಾಷೆ. ಅವರಿಗೆ ಮಾತೃ ಭಾಷೆಯ ಪದಜ್ಞಾನ ಚೆನ್ನಾಗಿರುತ್ತದೆ. ಕನ್ನಡ ಬರವಣಿಗೆಯನ್ನು ಅವರು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಹಾಗಾಗಿ ಇಡೀ ಬರೆಹ ವನ್ನೇ ಸುಲಭೀಕರಿಸಬೇಕೆಂದರೆ ಅದು ತಪ್ಪಾಗುತ್ತದೆ. ಇದು ಕೊಳಂಬೆಯ ವರಿಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ಅವರ ಈ ಕವನಗಳು ತುಂಬಾ ಪ್ರಭಾವಶಾಲಿಯಾಗುತ್ತವೆ.

 

ಪುಟಗಳು: 32

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !