ಮದನಿಕೆ, ದಿ ಲಾಸ್ಟ್‌ ಸೀನ್

ಮದನಿಕೆ, ದಿ ಲಾಸ್ಟ್‌ ಸೀನ್

Regular price
$4.99
Sale price
$4.99
Regular price
Sold out
Unit price
per 
Shipping does not apply

 

ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ ಇವರ “ಮದನಿಕೆ, ದಿ ಲಾಸ್ಟ್‌ ಸೀನ್” ಕಾದಂಬರಿಯು ಕಳೆದ ಕೆಲವು ದಶಕಗಳಿಂದ ಜಗತ್ತಿನಾದ್ಯಂತ ಕಾದಂಬರಿ ಲೋಕದಲ್ಲಿ ವಿಕಾಶಗೊಳ್ಳುತ್ತಿರುವ ಒಂದು ಹೊಸನಾಂದಿಗೆ ಸಾಕ್ಷಿಯಾಗಿದೆ, ಎನ್ನಬಹುದು. ಚರಿತ್ರೆಯನ್ನು ವರ್ತಮಾನದೊಂದಿಗೆ ಬೆರೆಸಿ ಓದುಗರಿಗೆ ಸುಂದರ ಕಥಾಹಂದರವನ್ನು ಕಟ್ಟಿಕೊಡುವ ಈ ಹೊಸಮಾದರಿಯು ಪ್ರಪಂಚದಾದ್ಯಂತ ಹಲವಾರು ಭಾಷೆಗಳಲ್ಲಿ ಬೇರೂರಿವೆ. ಮೊದಲ ಪುಟದಿಂದ ಹಿಡಿದಿಡುವ ಈ ಕಥಾಹಂದರ ಓದುಗರ ಮೆಚ್ಚುಗೆಯನ್ನು ಪಡೆಯುವುದರಲ್ಲಿ ಅನುಮಾನವಿಲ್ಲ. (ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ)

- ಕೆ.ಎನ್.ಗಣೇಶಯ್ಯ - ಖ್ಯಾತ ಕಾದಂಬರಿಕಾರರು ಹಾಗೂ ಕೃಷಿ ವಿಜ್ಞಾನಿನೀವು ಬರೆದ ಮದನಿಕೆ, ದಿ ಲಾಸ್ಟ್ ಸೀನ್ ಕಾದಂಬರಿ ಓದಿದೆ. ಮೆಚ್ಚುಗೆಯಾಯಿತು. ಈ ಶೈಲಿಯ ಕತೆಗಳು ನನಗಿಷ್ಟ. ಚರಿತ್ರೆಯ ಒಂದು ಪುಟವನ್ನು ವರ್ತಮಾನಕ್ಕೆ ಬೆಸೆಯುವ ಕತೆಗಳಲ್ಲಿ ಒಂಥರ ಮಜವಿರುತ್ತದೆ. ನಮ್ಮ ಕಲ್ಪನೆಯನ್ನು ಅಂಥ ಕತೆಗಳು ಹೆಚ್ಚು ವಿಸ್ತರಿಸುತ್ತವೆ. ಡಾನ್ ಬ್ರೌನ್ ಬರೆಯುವ ಕತೆಗಳ ಐತಿಹಾಸಿಕ ಹಿನ್ನೆಲೆ ನಮಗೆ ಗೊತ್ತಿರುವುದಿಲ್ಲ. ನಮ್ಮದು ಗೊತ್ತಿರುತ್ತದೆ. ಅಂಥ ವಿವರಗಳನ್ನು ಇಟ್ಟುಕೊಂಡು ಕತೆ ಕಟ್ಟುವ ನಿಮ್ಮ ಕೌಶಲ ಇಷ್ಟವಾಯಿತು.‌ ನಿಮ್ಮ ಕಥಾರಚನೆ ಯಶಸ್ವಿಯಾಗಿ ಮುಂದುವರಿಯಲಿ.

- ಜೋಗಿ (ಗಿರೀಶ್‌ ರಾವ್, ಹತ್ವಾರ್‌)- ಖ್ಯಾತ ಬರಹಗಾರರು ಹಾಗೂ ಸಂಪಾದಕರು

ವಿಷ್ಣುವರ್ಧನ-ಶಾಂತಲಾ-ಬೇಲೂರು-ಶಿವಗಂಗೆ ಹೀಗೆ ಇತಿಹಾಸದ ಈ ನಾಲ್ಕು ವಿಷಯಗಳನ್ನು ವರ್ತಮಾನದ ಕಥೆಯಲ್ಲಿ ಸುಂದರವಾಗಿ ಹಣೆದು ಮೊದಲ ಪುಟದಿಂದ ಕೊನೆಯ ಪುಟದ ವರೆಗೆ ತಿರುವುತ್ತಾ, ತಿರುವುತ್ತಾ ಒಂದೇ ಗುಕ್ಕಿನಲ್ಲಿ ನನ್ನನ್ನು ಓದಿಸಿದ ಕೆಲವೇ ಪುಸ್ತಕಗಳಲ್ಲಿ ಇದು ಒಂದು. ಕಥೆಯಲ್ಲಿ ಚರಿತ್ರೆಗೆ ಸಾಮ್ಯವಾಗಿ ಕಥಾನಾಯಕಿಯ ಜೀವನದ ಘಟನೆಗಳು, ಹಳ್ಳಿಗಳ ಚಿತ್ರಣ, ಅಲ್ಲಲ್ಲಿ ತಿಳಿ ಹಾಸ್ಯ, ಕೆಲವು ಕಡೆ ರಾಜಕೀಯ ಟೀಕೆಗಳು ಎಲ್ಲವೂ ಇವೆ. ಇತಿಹಾಸದ ಜೊತೆಗೆ ಮನರಂಜನೆ ಇಷ್ಟಪಡುವವರಿಗೆ ಮೆಚ್ಚುಗೆಯಾಗಬಹುದು.

- ವಿಠಲ್ ಶೆಣೈ – ಕಾದಂಬರಿಕಾರರು‌ ಹಾಗೂ ಸಾಫ್ಟ್‌ವೇರ್‌ ಉದ್ಯೋಗಿ

 

ಇವರ ಅದ್ಭುತ ಕಾದಂಬರಿ ಮದನಿಕೆಯ ಲೋಕಾರ್ಪಣೆಯಾದಂತೇ ಕೊಂಡು ಸಂಜೆ-ರಾತ್ರಿಯೇ ಕುಳಿತು ಓದಲಾರಂಬಿಸಿದರೆ ಅದು ಮುಗಿಸುವವರೆಗೆ ಬಿಡಲೇ ಇಲ್ಲ. ಸ್ವಾರಸ್ಯಕರ ವಿಷಯದ ಮೇಲೆ ಹೆಣೆದಿರುವಂತ ಕಾದಂಬರಿ ಓದುಗರನ್ನು ಓದಿಸಿಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.

-ವಿದ್ಯಾಧರ್‌ ದುರ್ಗೇಕರ್‌ - ಕಾದಂಬರಿಕಾರ ಹಾಗೂ ಬರಹಗಾರರು

 

 

ಪುಟಗಳು: 220

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !