ಮಧುರವಾಗಲಿ ದಾಂಪತ್ಯ

ಮಧುರವಾಗಲಿ ದಾಂಪತ್ಯ

Regular price
$4.99
Sale price
$4.99
Regular price
Sold out
Unit price
per 
Shipping does not apply

ಯಾವ ರೀತಿಯ ಮದುವೆ ಎನ್ನುವುದಕ್ಕಿಂತ ಯಾವ ರೀತಿಯ ದಾಂಪತ್ಯ ಎನ್ನುವುದು ಮುಖ್ಯ. ಅದು ನಿರ್ಧಾರವಾಗುವುದು ನಮ್ಮ ಹುಟ್ಟುಗುಣಗಳ ಪ್ರಭಾವ, ಆಡುವ ಮಾತು ಮತ್ತು ಎಷ್ಟು ಹೊಂದಾಣಿಕೆಯ ಮನೋಭಾವದೊಳಗೆ! ಹುಟ್ಟುಗುಣಕ್ಕೆ ಪೂರಕವಾಗಿ ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳು ಹೊರಬರುವುದು ಮಾತಿನ ಮೂಲಕ! ಮನಸ್ಸು ಸುಸ್ಥಿತಿಯಲ್ಲಿರಬೇಕಾದರೆ ಇಷ್ಟವಾಗದ ವಿಚಾರ, ಅನಿಷ್ಟ ಕೆಲಸಗಳು, ಬೇಡದ ಘಟನೆಗಳು ನಡೆಯಬಾರದು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬೇಡದ ಮಾತನ್ನು ಆಡಲೇಬಾರದು! ಎಲ್ಲಾ ನಮ್ಮ ಕೈಯಲ್ಲೇ. ಮಾತು, ಮನಸ್ಸು ಮತ್ತು ದಾಂಪತ್ಯ ಈ ಮೂರರದು ಬಿಟ್ಟೂ ಬಿಡದ ಅವಿನಾಭಾವ ಸಂಬಂಧ!

ಹೆತ್ತವರು, ಅತ್ತೆ-ಮಾವ, ಮಕ್ಕಳು ಇತ್ಯಾದಿ ದಾಂಪತ್ಯದ ಸುತ್ತ ಮತ್ತೂ ಹಲವು ಸಂಬಂಧಗಳು ಬೆಸೆದಿರುತ್ತವೆ. ಎಲ್ಲರೊಡನೆಯೂ ಹೊಂದಿಕೊಂಡು ಎಲ್ಲರನ್ನೂ ಸುಖಿಯಾಗಿಸಬೇಕು. ಹಾಗಾದಾಗಲೇ ಬದುಕಿಗೊಂದು ಅರ್ಥ; ದಾಂಪತ್ಯಕ್ಕೆ ಬೆಲೆ.

ಎಷ್ಟೇ ಆಧುನಿಕತೆ ಬೆಳೆದರೂ ಮನುಷ್ಯರ ಗುಣಸ್ವಭಾವಗಳು ಬದಲಾಗದೆ ಅವಕ್ಕೆ ಪೂರಕವಾಗಿ ವರ್ತಿಸುತ್ತವಷ್ಟೇ ಹೊರತು ಅವು ಬದಲಾಗುವುದಿಲ್ಲ. ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬ ಹಿನ್ನೆಲೆಯಲ್ಲಿ ನಮ್ಮ-ನಿಮ್ಮ, ಆಚೀಚಿನ ಬದುಕು ನೋಡಿ, ಅನುಭವವನ್ನೂ ಸೇರಿಸಿ ಬರೆದ ಸುಖದಾಂಪತ್ಯಕ್ಕೆ ಅಗತ್ಯವಾದ ಕೆಲವು ವಿಚಾರಗಳು ಇಲ್ಲಿವೆ. ಬರೆಯಲು ಸಿಕ್ಕದೆ ಹೋಗಿರುವುದು ಅದೆಷ್ಟೋ. ಇದರಿಂದ ಒಂದಿಷ್ಟಾದರೂ ಪ್ರಯೋಜನವಾದರೆ ಅಷ್ಟು ಲಾಭ ಎಲ್ಲರಿಗೂ!

 -ಗಿರಿಮನೆ ಶ್ಯಾಮರಾವ್

ಪುಟಗಳು: 152