ಮಲೆನಾಡಿನ ಚಿತ್ರಗಳು

ಮಲೆನಾಡಿನ ಚಿತ್ರಗಳು

Regular price
$3.49
Sale price
$3.49
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಕುವೆಂಪು ಅವರ ಬರಹಗಳಲ್ಲಿ ಮಲೆನಾಡಿನ ಚಿತ್ರಗಳೂ ಒಂದು. ಚಿತ್ರಗಳಿಲ್ಲದೆ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ, ಅಲ್ಲಿನ ಪ್ರಕೃತಿಯ ರಮ್ಯ ಮನೋಹರ ದೃಶ್ಯವನ್ನು ಸೆರೆಹಿಡಿಯುವಂತೆ ಮಾಡುವ, ವಿವರಿಸುವ ಅದ್ಭುತ ಶಕ್ತಿ ಕುವೆಂಪು ಅವರ ಬರಹಗಳದ್ದು. ಈ ಪುಸ್ತಕದಲ್ಲಿ ಮಲೆನಾಡಿನ ಮಡಿಲಲ್ಲಿ ಹಾಯಾಗಿದ್ದ ಕುಪ್ಪಳಿ ಮನೆ, ಕವಿಶೈಲ, ಕುಪ್ಪಳಿ ಮನೆಯ ದಕ್ಷಿಣ ಭಾಗದಲ್ಲಿ ಭೀಮಾಕಾರವಾದ ಪರ್ವತ ಶ್ರೇಣಿಗಳು, ಪಶ್ಚಿಮ ಭಾಗಗಳ ಬೆಟ್ಟಗಳು, ಪೂರ್ವಕ್ಕೆ ಹರಡಿಕೊಂಡ ಅಡಿಕೆ ತೋಟಗಳು ಮುಂತಾದವುಗಳ ವರ್ಣನೆ ಅತ್ಯದ್ಭುತವಾಗಿವೆ. ಯಾವುದೇ ಚಿತ್ರಗಳಿಲ್ಲದೆಯೂ ಅವುಗಳ ವರ್ಣನೆಯನ್ನು ಸೊಗಸಾಗಿ ಮೂಡಿಸಿ, ಓದುಗನ ಮನಪಟಲದಲ್ಲಿ ಅವರ ವರ್ಣನೆಗಳು ಹಾಗೆಯೇ ಚಿತ್ರಗಳಾಗುತ್ತಿರುವಂತೆ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ಪ್ರಕೃತಿ ಪ್ರೇಮಿಗಳಿಗಂತೂ ಈ ಪುಸ್ತಕ ಹಾಗೂ ಕುಪ್ಪಳಿ ನಿಸರ್ಗ ಸ್ವರ್ಗ ಎಂದೇ ಹೇಳಬಹುದು.

ಕುವೆಂಪು ಅವರು ಮಲೆನಾಡನ್ನು ಬಿಟ್ಟು ಬಂದು ಬಯಲುಸೀಮೆಯಲ್ಲಿದ್ದಾಗ ಅವರ ಮನಸ್ಸು- ತವರುನಾಡಿನ ಚೆಲುವು, ಗೆಲುವುಗಳನ್ನೂ, ದೃಶ್ಯಗಳನ್ನೂ, ವ್ಯಕ್ತಿಗಳನ್ನೂ , ಸನ್ನಿವೇಶಗಳನ್ನೂ ಆಗಾಗ ನೆನಪಿಸುತ್ತಿತ್ತಂತೆ. ಆಪ್ತ ಮಿತ್ರರ ಜತೆ ಅವುಗಳನ್ನು ಹಂಚಿಕೊಂಡು ಸುಖ ಪಡುತ್ತಿದ್ದರಂತೆ. ಈ ನೆನಪುಗಳ ವರ್ಣನೆಯ ಪರಿಣಾಮವೇ ಮಲೆನಾಡಿನ ಚಿತ್ರಗಳು.

- ಮಹೇಶ್ ಎಸ್ -ಬ್ಲಾಗ್ ವಿಮರ್ಶೆ https://kannadadeevige.blogspot.com/2018/04/malenadina-chtragalu-index.html

ಪುಟಗಳು: 108

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !