
ಬರೆದವರು: ಗಾಯತ್ರಿ ಸುಂದರೇಶ್
ಓದಿದವರು: ಗಾಯತ್ರಿ ಸುಂದರೇಶ್
ಕತೆಯ ಪ್ರಕಾರ: ಸಾಮಾಜಿಕ
ಕಾಲೇಜು ಕಲಿಯುವಾಗ ಸಿಕ್ಕ ಸ್ನೇಹಿತ - ಸ್ನೇಹಿತನಲ್ಲ, ಅವನು ಧರ್ಮಧೀಕ್ಷೆ ಪಡೆದ ಸಂತ. ಅವನ ಪ್ರತಿ ಮಾತು ಮೌನ ನಡೆ ನುಡಿ ಎಲ್ಲವನ್ನೂ ತಪ್ಪಾಗಿ ಗ್ರಹಿಸಿದವಳ ಮನದೊಳಗಿನ ಬೇಲಿ ಎಷ್ಟು ವಿಚಿತ್ರವಾದದ್ದು.
ಪೀಠಾಧಿಪತಿಯಾಗುವ ಮುನ್ನ ಮರಿಸ್ವಾಮಿಯೊಬ್ಬರು ಕಾಲೇಜಿನಲ್ಲಿ ಓದುತ್ತಿದ್ದಾಗ ನಡೆದ ಘಟನೆ ಈ ಕತೆಯ ತಿರುಳು. ನಾಯಕಿಯ ಮನದೊಳಗಿನ ಬೇಲಿ ಹಾರಿತೇ ಅಥವಾ ಬೀಗಹಾಕಿ ತನ್ನ ಸಹಪಾಠಿಯನ್ನು ಸ್ವಾಮೀಜಿಯ ಸ್ಥಾನದಲ್ಲಿ ಕೂರಿಸಿತೇ ಎಂಬ ಸೂಕ್ಷ್ಮವಿಚಾರದ ವಿವರಣೆಯುಳ್ಳ ಕಥಾಹಂದರವೇ 'ಮನದೊಳಗಿನ ಬೇಲಿ'.
ಈ ಕಥೆಯು ಕೇವಲ ಕಲ್ಪನೆಯ ಕಥಾವಸ್ತುವಾಗಿದ್ದು ಯಾವುದೇ ಜಾತಿ,ಮತ,ಕೋಮು ಅಥವಾ ವ್ಯಕ್ತಿಗೆ ಸಂಬಂಧಿಸಿದ್ದಲ್ಲ.
ಮನದೊಳಗಿನ ಬೇಲಿ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.