ಮಾನಸಿ ಸುಧೀರ್ ಅವರ ದನಿಯಲ್ಲಿ ಪಂಜೆ ಮಂಜೆಮಂಗೇಶರಾಯರ ಮಕ್ಕಳ ಕಥೆಗಳು (ಆಡಿಯೋ  ಬುಕ್)

ಮಾನಸಿ ಸುಧೀರ್ ಅವರ ದನಿಯಲ್ಲಿ ಪಂಜೆ ಮಂಜೆಮಂಗೇಶರಾಯರ ಮಕ್ಕಳ ಕಥೆಗಳು (ಆಡಿಯೋ ಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

GET FREE SAMPLE


ಕಥಾ ನಿರೂಪಣೆ: ಮಾನಸಿ ಸುಧೀರ್

Manasi Sudhir - YouTube


ನಿರ್ಮಾಣ ಸಹಾಯ: ನಾವು ಸ್ಟುಡಿಯೋಸ್


ಹಕ್ಕುಗಳನ್ನು ನೀಡಿದವರು:  ಅಂಕಿತ ಪುಸ್ತಕ

ಆಡಿಯೋ ಪುಸ್ತಕದ ಅವಧಿ: 2 ಗಂಟೆ 48 ನಿಮಿಷ 

 

ಮಕ್ಕಳು ಟಿವಿ, ಮೊಬೈಲಿನ ಆಟಗಳಲ್ಲಿ ಕಳೆದು ಹೋಗುತ್ತಿದ್ದಾರಾ? ಅವರನ್ನು ಪುಸ್ತಕದೆಡೆಗೆ ಸೆಳೆಯಲು, ಓದಿನ ಮೂಲಕ ಅವರ ಕಲ್ಪನೆಯ ಶಕ್ತಿ ಹಿಗ್ಗಿಸಲು ಇರುವ ಸುಲಭದ ದಾರಿ ಮಕ್ಕಳಿಗೆ ಕತೆ ಹೇಳುವುದು. ಕೂಡು ಕುಟುಂಬಗಳಿಲ್ಲದ, ಅಜ್ಜ-ಅಜ್ಜಿಯರಿಂದ ದೂರವಿರುವ ಇಂದಿನ ಮಕ್ಕಳಿಗೆ ಕತೆ ಕೇಳಿಸುವುದು ಹೇಗೆ ಅನ್ನುವ ಚಿಂತೆ ನಿಮ್ಮದಾದರೆ ಇನ್ನು ಆ ಚಿಂತೆ ಬೇಡ. ಮೈಲ್ಯಾಂಗ್ ಕನ್ನಡದ ಮಕ್ಕಳಿಗಾಗಿ ಹಲವಾರು ಅದ್ಭುತವಾದ ಮಕ್ಕಳ ಕತೆಗಳ ಆಡಿಯೋಪುಸ್ತಕಗಳನ್ನು ಹೊರತರುತ್ತಿದೆ. ಇದಕ್ಕೆ ಹೊಚ್ಚ ಹೊಸ ಸೇರ್ಪಡೆ "ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು". ಸರಿ ಸುಮಾರು ನೂರು ವರ್ಷಗಳ ಹಿಂದೆ ಪ್ರಕಟವಾದ ಈ ಕತೆಗಳು ಐದು ತಲೆಮಾರಿಗೂ ಹೆಚ್ಚಿನ ಮಕ್ಕಳ ಮನಸ್ಸು ಗೆದ್ದು ಇಂದಿಗೂ ಮುದ್ರಣದಲ್ಲಿರುವುದು ಅದರ ಶಕ್ತಿಯನ್ನು ತೋರುತ್ತದೆ. ಆಡುಭಾಷೆಯ ಪದಗಳ ಬಳಕೆ, ಲಯ ಮತ್ತು ಪ್ರಾಸದ ರಚನೆ, ಸರಳ ವರ್ಣನೆಯ ಮೂಲಕ ಎಂತಹ ಮಕ್ಕಳಿಗೂ ಕೇಳಿದ ಕೂಡಲೆ ಹಿಡಿಸುವಂತಹ ಕತೆಗಳು ಇದರಲ್ಲಿವೆ. ಈ ಕತೆಗಳಿಗೆ ಜೀವ ತುಂಬುವಂತೆ ತಮ್ಮ ದನಿ ನೀಡಿದ್ದಾರೆ ಕಲಾವಿದೆ, ನೃತ್ಯಪಟು, ಗಾಯಕಿ ಮಾನಸಿ ಸುಧೀರ್. ಪ್ರತಿಯೊಂದು ಕತೆಗೂ ಪೂರಕವಾದ ಹಿನ್ನೆಲೆ ಸಂಗೀತ ನೀಡಿದ್ದಾರೆ ನಾವು ಸ್ಟುಡಿಯೋಸ್ ನ ಮುನ್ನಾ ಮತ್ತು ಅನುಷ್ ಶೆಟ್ಟಿಯವರು.

ಇನ್ನೇಕೆ ತಡ, ಮಕ್ಕಳ ಸಾಹಿತ್ಯದ ದಿಗ್ಗಜ ಪಂಜೆ ಮಂಗೇಶರಾಯರ ಈ ಅದ್ಭುತ ಕತೆಗಳನ್ನು ನಿಮ್ಮ ಮಕ್ಕಳಿಗೆ ಈಗಲೇ ಕೇಳಿಸಿ ಮತ್ತು ಅವರ ಕಲ್ಪನೆಯ ಲೋಕವನ್ನು ಇನ್ನಷ್ಟು ಹಿಗ್ಗಿಸಿ !