
ಬರೆದವರು: ಗಾಯತ್ರಿ ಸುಂದರೇಶ್
ಓದಿದವರು: ಗಾಯತ್ರಿ ಸುಂದರೇಶ್
ಕತೆಯ ಪ್ರಕಾರ: ಸಾಮಾಜಿಕ
ಎಲ್ಲರನ್ನೂ ಕಳೆದುಕೊಳ್ಳುವ ವ್ಯಕ್ತಿಗೆ ಬದುಕುವ ಆಸೆಯಾದರೂ ಎಲ್ಲಿದ್ದೀತು? ಒಬ್ಬರಲ್ಲ ಇಬ್ಬರಲ್ಲ ನಾಲ್ವರನ್ನು ಕಳೆದುಕೊಂಡವನ ಅಂತರಂಗದ ಮಾತು.
ಡಿವಿಜಿಯವರ 'ಮಂಕುತಿಮ್ಮನ ಕಗ್ಗ'ದ ಎಳೆಯನ್ನು ಇಟ್ಟುಕೊಂಡು ಹೆಣೆದಿರುವ ಕಥೆ 'ಮರಣ ಮೃದಂಗ' ಪ್ರತಿ ಮನುಷ್ಯನ ಜೀವಿತದಲ್ಲೂ ಒಂದಲ್ಲ ಒಂದು ಕಹಿ ಘಟನೆಗಳು ಸಂಭವಿಸಿಯೇ ಇರುತ್ತವೆ. ಅವನ್ನೆಲ್ಲ ಮರೆತು ಮುನ್ನಡೆಯುವಾಗಲೇ ಲೋಕದಲ್ಲಿ ನಡೆಯುವ ಬೇರೆ ಬೇರೆ ಘಟನೆಗಳು ಹೇಗೆ ಮತ್ತೆ ಹಳೆಯದನ್ನೆಲ್ಲ ನೆನಪಿಸುತ್ತವೆ ಎಂಬುದೇ ಈ ಕಥೆಯ ಸಾರಾಂಶ.
ಈ ಕಥೆಯು ಶ್ರೀಮತಿ ಗಾಯತ್ರಿ ಸುಂದರೇಶ್ ರವರ 'ಪಾರಿಜಾತ' ಕಥಾಸಂಕಲನದಿಂದ ಆಯ್ದು ಕೊಳ್ಳಲಾಗಿದೆ. ಮಂಕುತಿಮ್ಮನ ಕಗ್ಗಕ್ಕೊಂದು ಕಥೆ ಎಂಬ ಸ್ಪರ್ಧೆ ಯಲ್ಲಿ ಈ ಕಥೆಗೆ ಬಹುಮಾನ ಸಂದಿದೆ. ಎಲ್ಲಾ ಕಾಲಕ್ಕೂ ಸಲ್ಲುವ ಈ ಕಥೆಯ ಬಗ್ಗೆ ನಿಮ್ಮ ಅಭಿಪ್ರಾಯಳಿಗೆ ಮುಕ್ತ ಸ್ವಾಗತವಿದೆ.
ಮರಣ ಮೃದಂಗ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.