ಮಾಯಾಲೋಕ - 1

ಮಾಯಾಲೋಕ - 1

Regular price
$9.99
Sale price
$9.99
Regular price
Sold out
Unit price
per 
Shipping does not apply

GET FREE SAMPLE

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 ”ಮಾಯಾಲೋಕ “… ಭೂಮಿಯೇ ಒಂದು ಸುಂದರವಾದ ಮಾಯಾಲೋಕ… ಇಲ್ಲಿ ತೇಜಸ್ವಿಯವರು ಅವರು ವಾಸಿಸುತ್ತಿದ್ದ ಪರಿಸರದ ದಿನನಿತ್ಯದ ಸನ್ನಿವೇಶಗೆಳನ್ನೇ ಮಾಯಲೋಕವಾಗಿ ಸೃಷ್ಟಿಸಿದ್ದಾರೆ… ಅಲ್ಲಿನ ಜನರ ಮುಗ್ದತೆಯನ್ನು ಅದ್ಬುತವಾಗಿ ಚಿತ್ರಿಸಿದ್ದಾರೆ… ಅವರ ಈ ಶೈಲಿಗೆ ನಾವೆಲ್ಲರೂ ಮಾರುಹೋಗಿದ್ದೇವೆ… ಸಾಧಾರಣ ಹಳ್ಳಿ ಈಗ ಪ್ರವಾಸಿತಾಣವಾಗಿದೆ ಎಂದರೆ ಅದಕ್ಕೆ ಕಾರಣ ನಮ್ಮ ತೇಜಸ್ವಿ….


ಮೂಡಿಗೆರೆಯಲ್ಲಿ ವಾಸಿಸುತ್ತಿದ್ದ ತೇಜಸ್ವಿಯವರು ತೋಟ, ಕೃಷಿ, ಜೇನು ಸಾಕಣೆ, ಮೀನಿಗೆ ಗಾಳ ಹಾಕುವುದು, ಪೋಟೋಗ್ರಫೀ, ಪಕ್ಷಿ ವಿಕ್ಷಣೆ… ಇವೇ ಅವರ ಪ್ರಾಮುಖ್ಯ ಕೆಲಸಗಳು… ಆ ಹಳ್ಳಿಯಲ್ಲಿ ಹುಂಡು ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು.. ಅವು ಹೊಲಗದ್ದೆಯ ಬೆಳೆಗಳಿಗೆ ದಾಳಿ ಮಾಡುತ್ತಿವೆಯೆಂದು ಊರಿನ ಗೌಡರು, ಅಣ್ಣಪ್ಪಣ್ಣ, ಭಿಲ್ಲವರು ಸೇರಿ ಹಕ್ಕಿಪಿಕ್ಕೆಯವರಿಗೆ ಹೇಳಿ ಎಲ್ಲಾ ಕೋಳಿಗಳನ್ನು ಹಿಡಿಸಿಬಿಡುತ್ತಾರೆ.. ಇದರಿಂದ ಕೋಪಗೊಂಡ ತೇಜಸ್ವಿರವರು ಹಕ್ಕಿಪಿಕ್ಕೆಯವರ ಮೇಲೆ ಫಾರೆಸ್ಟ್ ಗಾರ್ಡ್ ಗೆ ಕಂಪ್ಲೇಟ್ ಮಾಡಿ, ಹಕ್ಕಿಪಿಕ್ಕೆಯವರನ್ನು ಊರು ಬಿಟ್ಟು ಓಡಿಸಲೆಂದು ಅವರ ಜೋಪಡಿಗಳ ಬಳಿ ಬಂದಾಗ, ಅಲ್ಲಿಯ ವಾತಾವರಣದ ಬಗ್ಗೆ ನೀಡಿರುವ ವಿವರ ಹಾಗೆಯೇ ಕಣ್ಣಮುಂದೆ ಬರುತ್ತದೆ.. ಅವರ ಸ್ಥಿತಿ ನೋಡಿ ತೇಜಸ್ವಿಯವರಿಗೆ ಬೇಜಾರಾಗಿ ಕಂಪ್ಲೇಟ್ ವಾಪಸ್ ಪಡೆಯುತ್ತಾರೆ…


ಅಣ್ಣಪ್ಪಣ್ಣನು ಮತ್ತು ಬಂಡಾರಿ ಬಾಬು ಇಬ್ಬರೂ ಸೇರಿ ರಸ್ತೆಯ ಬದಿಯ ತೋಟದಲ್ಲಿ ಮೆಣಸಿನ ಕಾಯಿಯ ಸಸಿಗಳನ್ನು ನೆಡುತ್ತಾರೆ… ಬಿಸಿಲಿನ ತಾಪದಿಂದಾಗಿ ಪಕ್ಕದಲ್ಲಿದ್ದ ಹಳ್ಳದಿಂದ ನೀರು ತಂದು ಸಿಂಪಡಿಸಲು ಸಾಧ್ಯವಿಲ್ಲದ ಕಾರಣ ತಿಮ್ಮಬೋಯಿಯ ಮೂಲಕ ಹಳ್ಳಕ್ಕೆ ಮಣ್ಣು ಹೊಡೆಸಿ ಸಸಿಗಳಿಗೆ ನೀರು ತಿರುಗಿಸಿ ಕೊಂಡ ಕಾರಣದಿಂದ ತೇಜಸ್ವಿರವರ ಬಳಿ ಬೈಸಿಕೊಂಡು ಪೇಚಿಗೆ ಸಿಲುಕುತ್ತಾರೆ…


ತಿಮ್ಮಬೋಯಿಯು ಮಣ್ಣು ಕೆಲಸದ ಒಡ್ಡ… ಇವನು ಮತ್ತು ಈತನ ಪರಿವಾರ ಟೆಲಿಪೋನಿನ ಲೈನಿಗೊಸ್ಕರ ನೆಲ ಹಗಿಯುತ್ತಿದ್ದಾಗ ಚಿನ್ನದ ವರಹಗಳಿದ್ದ ಕುಡಿಕೆ ಸಿಕ್ಕಿತೆಂದು ಪೋಲೀಸ್ ವಿಚಾರಿಸಿ ಆತನನ್ನು ಲಾಕಪ್ಪಿಗೆ ಹಾಕಿ, ಚೆನ್ನಾಗಿ ಥಳಿಸಿದ್ದಾರೆ.. ಪಾಪ ತಿಮ್ಮನಿಗೆ ಕುಡಿಕೆ ಸಿಕ್ಕಿದ್ದೇನೊ ನಿಜ, ಆದರೆ ಅದು ಚಿನ್ನದ ವರಹಗಳಿದ್ದ ಕುಡಿಕೆಯಲ್ಲ. ಬರೀ ಬೂದಿ, ಇದ್ದಿಲು, ಹೆಂಚಿನ ಚೂರುಗಳಿದ್ದ ಕುಡಿಕೆ… ಇದನ್ನು ನಂಬುವವರಾರು… ಬಡಪಾಯಿ ತಿಮ್ಮ ಪೋಲೀಸರ ದೌರ್ಜನ್ಯಕ್ಕೆ ಒಳಗಾದ…


ಕರಾಟೆ ಮಂಜಣ್ಣ: ಈತ ಸೋಮಾರಿಯೂ ಅಲ್ಲ, ದಡ್ಡನೂ ಅಲ್ಲ.. ಯಾವುದಾದರೂ ಕೆಲಸ ಹಿಡಿದನೆಂದರೆ ಅನ್ನ, ನೀರು ಸಹ ಮುಟ್ಟದೇ ಮಾಡಿ ಮುಗಿಸುತ್ತಿದ್ದ… ಆದರೆ ವಿದ್ಯೆಯಲ್ಲಿ ಸೋತು ನಿಂತ… ನಂತರ ಪಾನ್ ಬೀಡ ಅಂಗಡಿ ಇಟ್ಟು, ಜೊತೆಗೆ ಕರಾಟೆ ಕಲಿತ.. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಪದಕದಾರಿಯಾದ.. ಆದರೂ ಮಂಜಣ್ಣನ ಕರಾಟೆ ಪ್ರದರ್ಶನ ಯಾರಿಗೂ ಲಭ್ಯವಾಗಿರಲಿಲ್ಲ… ಅವನು ಸೌಮ್ಯ ಸ್ವಭಾವದ ಶಾಂತ ಹುಡುಗ.. ಕರಾಟೆ ತರಬೇತಿಯಲ್ಲಿ ಯಾವತ್ತೂ ಮನಃಸ್ಥಿಮಿತವನ್ನು ಕಳೆದು ಕೊಳ್ಳಬಾರದೆಂದು ಹೇಳಿಕೊಡುತ್ತಾರೆ.. (ನನ್ನ ಮಗನ ಮಾಸ್ಟರೂ ಈ ಮಾತನ್ನು ಹೇಳಿದಾಗ ನನಗೆ ಈ ಮಂಜಣ್ಣನೇ ನೆನಪಾಗಿದ್ದು).
ಒಮ್ಮೆ ಅವನ ಕರಾಟೆ ಪ್ರದರ್ಶನವು ನಡೆಯಿತು.. ಜಗ್ಗುವಿನ ತಂಗಿಯರಿಬ್ಬರೂ ಮತ್ತು ಚಂದ್ರೇಗೌಡರ ಮಗಳು ಮೂವರು ದಿನಾ ಕಾಲೇಜಿಗೆ ಹೋಗಿ ಬರುವಾಗ ಬೀದಿ ಪೋಲಿಗಳಾದ 4 ಜನ ಹುಡುಗರು ಇವರನ್ನು ಚುಡಾಯಿಸುತ್ತಾ ಇರುತ್ತಾರೆ… ಇವರ ಕಾಟದಿಂದಾಗಿ ಜಗ್ಗುವಿಗೆ ವಿಷಯ ತಿಳಿಸಿದಾಗ ಅವನು ಈ ಪೋಲಿಗಳನ್ನು ಯಾಕೆ ಹೀಗೆ ಮಾಡುತ್ತೀರಾ ಎಂದ ಮಾತ್ರಕ್ಕೆ ಅವನಿಗೆ ಹೊಡೆದು ಗಾಯಗೊಳಿಸುತ್ತಾರೆ… ಇದನ್ನು ಗಮನಿಸಿದ ಮಂಜ, ಆ ನಾಲ್ಕು ಜನ ಕಿಡಿಗೇಡಿಗಳಿಗೆ ಎಡಗಾಲಿನಿಂದ ಒಂದು ಹೊಡೆತ ಒದ್ದ… ಅಷ್ಟೇ ಅವರು ಅಲ್ಲೇ ತಿರುಗಿ ಗುಂಡಿಗೆ ಬೀಳುತ್ತಾರೆ…


ಇನ್ನೂ ತುಂಬಾ ವಿಷಯಗಳು, ಹಾಸ್ಯ ಸನ್ನಿವೇಶಗಳು ತುಂಬಿವೆ… ಹಾಗೇ ಹೇಳುತ್ತಾ ಹೋಗಬೇಕೂಂತಲೂ ಅನಿಸುತ್ತೆ… ಮಾಯಲೋಕವನ್ನೇ ಓದಿ… ಆನಂದಿಸಿ….
ಅದ್ಬುತವಾದ ಲೋಕ ಮಾಯಾಲೋಕ….


- ದೇವಿಶ್ರೀ ಪ್ರಸಾದ್ ಪುಸ್ತಕ ಪ್ರೇಮಿ ಬ್ಲಾಗ್ ವಿಮರ್ಶೆ 

 

ಪುಟಗಳು: 250

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !