ಮೊಗಸಾಲೆ ಕಾದಂಬರಿ ಸಂಪುಟ - 1 (ಇಬುಕ್)

ಮೊಗಸಾಲೆ ಕಾದಂಬರಿ ಸಂಪುಟ - 1 (ಇಬುಕ್)

Regular price
$1.99
Sale price
$1.99
Regular price
Sold out
Unit price
per 
Shipping does not apply

GET FREE SAMPLE

 

ಇದು ನನ್ನ ಕಾದಂಬರಿಗಳ ಮೊದಲ ಸಂಪುಟ. ಇದರಲ್ಲಿ ನಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗ (೧೯೬೧-೬೫) ಬರೆದ ‘ಮಣ್ಣಿನ ಮಕ್ಕಳು’ ಮತ್ತು ‘ಅನಂತ’ ಕಾದಂಬರಿಗಳ ಜೊತೆ, ಕಾಂತಾವರಕ್ಕೆ ನಾನು ಬಂದು ನೆಲೆ ನಿಂತ ಮೇಲೆ ಬರೆದ ಮೊದಲ ಕಾದಂಬರಿ ‘ಕನಸಿನ ಬಳ್ಳಿ’ (೧೯೬೭) ಎಂಬ ಮೂರು ಕಾದಂಬರಿಗಳು ಸೇರ್ಪಡೆಗೊಂಡಿವೆ. ‘ಮಣ್ಣಿನ ಮಕ್ಕಳು’ ಕಾದಂಬರಿಯನ್ನು ಮಂಗಳೂರಿನ ವಿವೇಕ ಸಾಹಿತ್ಯ ಮಾಲೆಯ ಶ್ರೀ ರಾ.ಮೊ. ವಿಶ್ವಾಮಿತ್ರ ಅವರು ೧೯೬೫ರಲ್ಲಿ, ‘ಅನಂತ’ ಕಾದಂಬರಿಯನ್ನು ಬೆಂಗಳೂರಿನ ‘ಪುರೋಗಾಮಿ ಸಾಹಿತ್ಯ ಸಂಘ’ದ ಶ್ರೀ ಮಾವಿನಕೆರೆ ರಂಗನಾಥನ್ ಅವರು ೧೯೬೯ರಲ್ಲಿ ಮತ್ತು ‘ಕನಸಿನ ಬಳ್ಳಿ’ಯನ್ನು ಧಾರವಾಡದ ಸಮಾಜ ಪುಸ್ತಕಾಲಯದ ಮನೋಹರ ಘಾಣೇಕರ್ ಅವರು ೧೯೭೧ರಲ್ಲಿ ಪ್ರಥಮವಾಗಿ ಪ್ರಕಟಿಸಿ ನನಗೆ ನೆರವಾದರು. ಅವರನ್ನೆಲ್ಲ ನಾನು ಈ ತಂಪುಹೊತ್ತಿನಲ್ಲಿ ನೆನೆಯಬೇಕು.

  

ಪುಟಗಳು: 304

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !