ಮೊಗಸಾಲೆ ಕಾದಂಬರಿ ಸಂಪುಟ - 3 (ಇಬುಕ್)

ಮೊಗಸಾಲೆ ಕಾದಂಬರಿ ಸಂಪುಟ - 3 (ಇಬುಕ್)

Regular price
$1.99
Sale price
$1.99
Regular price
Sold out
Unit price
per 
Shipping does not apply

GET FREE SAMPLE

 

ಡಾ.ನಾ. ಮೊಗಸಾಲೆಯವರ ಕಾದಂಬರಿಗಳ ಈ ಮೂರನೇ ಸಂಪುಟದಲ್ಲಿ ನಾಲ್ಕು ಕಾದಂಬರಿಗಳಿವೆ (ಪ್ರಕೃತಿ, ನೆಲಮುಗಿಲುಗಳ ನಡುವೆ, ದಿಗಂತ ಮತ್ತು ದೃಷ್ಟಿ) ಇವು ಸರಾಸರಿ ಕೇವಲ ೯೦ ಪುಟಗಳ ಕೃತಿಗಳು. ಹಾಗೆ ನೋಡಿದರೆ ಈ ಲೇಖಕರ ಈಚಿನ ಎರಡು ಬೃಹತ್ ಕಾದಂಬರಿಗಳನ್ನು (ಉಲ್ಲಂಘನೆ : ೨೦೦೮, ೫೮೦ ಪುಟಗಳು ಮತ್ತು ಮುಖಾಂತರ: ೨೦೧೫, ೬೩೦ ಪುಟಗಳು) ಬಿಟ್ಟರೆ, ಅವಕ್ಕಿಂತ ಹಿಂದಿನ ಕಾದಂಬರಿಗಳ ಪೈಕಿ ಉಳಿದ ಯಾವುದೂ ಬಹುಶಃ ೧೩೦ ಪುಟಗಳನ್ನು ಮೀರುವುದಿಲ್ಲ. ಇದು ಡಾ.ನಾ. ಮೊಗಸಾಲೆಯವರ ಬರಹದ ಸಂಗ್ರಹಗುಣಕ್ಕೊಂದು ಉದಾಹರಣೆ. ಅವರು ಎಲ್ಲಿಯೂ ಸಿದ್ಧಾಂತಗಳ ವಿವೇಚನೆಗೆ ಎಳಸುವುದು ಕಡಿಮೆ (ಕಾರಂತರಿಗೆ ಅದೇ ಮುಖ್ಯ). ಘಟನಾವಳಿಗಳು, ಪಾತ್ರಗಳ ವರ್ತನೆಯ ಮೂಲಕವೇ ಜೀವನಸಿದ್ಧಾಂತ ಓದುಗರಿಗೆ ರವಾನೆಯಾಗುವಂತಿರುವುದು ಮೊಗಸಾಲೆಯವರ ಕಾದಂಬರಿಗಳ ಧೋರಣೆ (ಈ ಲೇಖಕರ ‘ಕಾದಂಬರಿ ಸಂಪುಟ-೨ಕ್ಕೆ ನಾನು ಬರೆದಿರುವ ಪ್ರಸ್ತಾವನೆಯ ಆರಂಭದಲ್ಲಿ ಇದನ್ನು ಇನ್ನಷ್ಟು ವಿಸ್ತಾರವಾಗಿ ವಿವರಿಸಿದ್ದೇನೆ). ಪ್ರಸ್ತುತ ಸಂಪುಟದಲ್ಲಿರುವ ಕಾದಂಬರಿಗಳಲ್ಲೂ ಅದೇ ಧೋರಣೆ ಎದ್ದು ಕಾಣುತ್ತದೆ. 

 

ಪುಟಗಳು: 346

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !