ಮೂಲ-ಚೂಲ (ಇಬುಕ್)

ಮೂಲ-ಚೂಲ (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಏಕೀಕೃತ ಕರ್ನಾಟಕದ ಐವತ್ತು ವರ್ಷಗಳ ಸಂಭ್ರಮಾಚರಣೆಯ ಸ್ಮರಣೆಯ ಸಂದರ್ಭವಿದು.

ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಸೃಜನಶೀಲ ಮತ್ತು ಸೃಜನೇತರ ಪ್ರಕಾರಗಳ ಒಂದು ಮನನ ಈ 'ಸುವರ್ಣ ಸಾಹಿತ್ಯ ಗ್ರಂಥ ಪ್ರಕಟಣಾ ಮಾಲೆ'. ಆಧುನಿಕ ಕನ್ನಡ ಸಾಹಿತ್ಯದ ಬೇರೆ ಬೇರೆಯ ಕಾಲಘಟ್ಟಗಳಲ್ಲಿ ಪ್ರಕಟವಾದ ಮಹತ್ವದ ಕೃತಿಗಳ ಮಾದರಿಯ ರೂಪವಿದು. ಕನ್ನಡದ ಜ್ಞಾನಪೀಠ ಪುರಸ್ಕೃತರ ಕೃತಿಗಳಿಂದ ಹಿಡಿದು ಉತ್ತಮ ಕಾದಂಬರಿಗಳು, ನಾಟಕಗಳು, ಪ್ರವಾಸ ಕಥನಗಳು, ಜೀವನಚರಿತ್ರೆಗಳು, ವಿಮರ್ಶಾ ಲೇಖನಗಳು, ವೈಚಾರಿಕ ಲೇಖನಗಳು, ವೈಜ್ಞಾನಿಕ ಲೇಖನಗಳಲ್ಲದೆ ಪ್ರಾತಿನಿಧಿಕ ಬರಹಗಳ ಕಾವ್ಯ ಸಂಪುಟ, ಕಥಾ ಸಂಪುಟ, ವಿಮರ್ಶಾ ಸಂಪುಟ, ಪ್ರಬಂಧ ಸಂಪುಟ, ಜಾನಪದ ಸಂಪುಟ ಹಾಗೂ ನಾಟಕ ಸಂಪುಟಗಳೂ ಸೇರಿವೆ. ಜೊತೆಗೆ ಕನ್ನಡೇತರ ಭಾಷಿಕರಿಗೆ ಕನ್ನಡ ಕಲಾ ಪ್ರಕಾರಗಳನ್ನು ಪರಿಚಯಿಸುವ ಇಂಗ್ಲಿಷ್‌ ಕೃತಿಗಳು ಇವೆ. ಈ ಸುವರ್ಣ ಸಾಹಿತ್ಯ ಗ್ರಂಥ ಮಾಲೆಯಡಿ ಸುಲಭ ಬೆಲೆಯಲ್ಲಿ ಸಾಹಿತ್ಯಾಭಿಮಾನಿಗಳಿಗೆ ಅಕ್ಷರ ದಾಸೋಹ ಉಣಬಡಿಸುವ ಹೆಮ್ಮೆ ನಮ್ಮದು.

ಈ ಕೃತಿಗಳು ಸಮೃದ್ಧ ಕನ್ನಡ ಸಾಹಿತ್ಯದ ಕೆಲವು ಪ್ರಾತಿನಿಧಿಕ ಕೃತಿಗಳೇ ಹೊರತು ಇಂಥ ಇನ್ನೂ ನೂರಾರು ಕೃತಿಗಳು ಕನ್ನಡದಲ್ಲಿವೆ ಎಂಬುದನ್ನು ನಾವು ಮರೆತಿಲ್ಲ. ಪರಿಣತರು ಆಯ್ಕೆ ಮಾಡಿದ್ದ ಹಲವಾರು ಹಿರಿಯರ ಕೃತಿಗಳು ಅನುಮತಿ ಇತ್ಯಾದಿ ಬೇರೆ ಬೇರೆ ಕಾರಣಗಳಿಂದ ಈ ಮಾಲೆಗೆ ಸೇರಲಾಗಿಲ್ಲ ಎಂಬ ಕೊರಗು ಇಲ್ಲದಿಲ್ಲ. ಆದಾಗ್ಯೂ ಈ ಸುವರ್ಣ ಸಾಹಿತ್ಯ ಗ್ರಂಥ ಪ್ರಕಟಣಾ ಮಾಲೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಈ ವಿಶಿಷ್ಟ ಕೃತಿಗಳನ್ನು ಆಯ್ಕೆ ಮಾಡಿಕೊಟ್ಟ ಎಲ್ಲ ವಿದ್ವಾಂಸರಿಗೂ ಮತ್ತು ಪ್ರಕಟಣೆಗೆ ನೆರವಾದ ಎಲ್ಲರಿಗೂ ಕನ್ನಡ ಜನತೆಯ ಪರವಾಗಿ ನಾನು ಆಭಾರಿಯಾಗಿದ್ದೇನೆ.

ಈ ಕೃತಿಗಳನ್ನು ಕನ್ನಡಿಗರು ಸಹೃದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ.


ಎಚ್‌. ಡಿ. ಕುಮಾರಸ್ವಾಮಿ
ಮುಖ್ಯಮಂತ್ರಿಗಳು

 

ಪುಟಗಳು : 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !