ಮದರ್‌ ತೆರೆಸಾ (ವಿಶ್ವಮಾನ್ಯರು) (ಇಬುಕ್)

ಮದರ್‌ ತೆರೆಸಾ (ವಿಶ್ವಮಾನ್ಯರು) (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕಿ: 
ಡಾ|| ಗೀತಾ ಶಣೈ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತರಾಗಿ ಇರುತ್ತಾರೆ ಎನ್ನುವ ಹಾಗಿಲ್ಲ. ಕೆಲವರು ಹುಟ್ಟಿನಿಂದ ಅಂಗವಿಕಲರು ಅಥವಾ ರೋಗಗ್ರಸ್ತರಾಗಿ ಇರಬಹುದು. ಇನ್ನು ಕೆಲವರಿಗೆ ಬೆಳೆದು ದೊಡ್ದವರಾದ ಬಳಿಕ ಅಪಘಾತ ಸಂಭವಿಸಿ ದೈಹಿಕ ನ್ಯೂನತೆ ಬರಬಹುದು ಅಥವಾ ಅವರು ವಾಸಿಯಾಗದ ಕಾಯಿಲೆ ಬಂದು ಬಳಲುತ್ತಿರಬಹುದು. ಇಂತಹ ವ್ಯಕ್ತಿಗಳು ಸ್ವತಂತ್ರವಾಗಿ ಬದುಕು ಸಾಗಿಸಲು ಅಸಮರ್ಥರಾಗಿ ಇರುತ್ತಾರೆ ಎನ್ನುವ ಕಾರಣಕ್ಕಾಗಿ ಇವರಿಗೆ ಹತ್ತಿರದ ಬಂಧುಗಳು, ಸೇವಾ ಮನೋಭಾವದ ಜನರು ನೆರವಾಗುತ್ತಾರೆ. ಆದರೆ ಬೀದಿ ಪಾಲಾಗಿರುವ ವೃದ್ಧರ, ಅಂಟುಜಾಡ್ಯವಿರುವ ರೋಗಿಗಳ ಆರೈಕೆ ಮಾಡಲು, ಅವರ ಹತ್ತಿರ ಸುಳಿಯಲು ಯಾರೂ ಸಿದ್ಧರಿರುವುದಿಲ್ಲ. ಇವರಿಗೆ ಪ್ರೀತಿ, ಅನುಕಂಪ, ಸಹನೆ, ಕಾಳಜಿ ತೋರಿಸುವವರು ಯಾರೂ ಇಲ್ಲ. ಈ ಕಟು ಸತ್ಯವನ್ನು ತಿಳಿದುಕೊಂಡು ಈ ಜನರ ಸೇವೆಗಾಗಿ ಕಂಕಣಬದ್ಧರಾಗಿ ನಿಂತವರು ಮದರ್ ತೆರೆಸಾ. ಬಡವರಿಗೆ, ರೋಗಿಗಳಿಗೆ, ಅನಾಥರಿಗೆ ನೀಡುವ ಶುಶ್ರೂಷೆಯಲ್ಲಿ ಔಷಧಿ, ಉಪಚಾರಗಳಿದ್ದರೆ ಮಾತ್ರ ಸಾಲುವುದಿಲ್ಲ, ಅವರ ಕುರಿತು ನಿಜವಾದ ಕಾಳಜಿ, ಸಾಂತ್ವನಗಲು ಇರಬೇಕು, ಸಾವಿನಲ್ಲಿಯೂ ಮನುಷ್ಯ ತನ್ನ ಘನತೆಯನ್ನು ಹೊಂದಿರಬೇಕು ಎನ್ನುವುದನ್ನು ಜಗತ್ತಿಗೆ ತೋರಿಸಿದ ವಿಶ್ವಮಾನವರಲ್ಲಿ ಒಬ್ಬರು ಮದರ್ ತೆರೆಸಾ. ಈ ಘನ ವ್ಯಕ್ತಿತ್ವಕ್ಕೆ ಜಗತ್ತಿನ ಅತ್ಯುನ್ನತ ನೊಬೆಲ್ ಶಾಂತಿ ಬಹುಮಾನದ ಮನ್ನಣೆ ಸಂದಿದೆ.

ಪುಟಗಳು: 48 

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !