ನಾನು ಕಂಡ ಕಾರಂತರು (ಇಬುಕ್)

ನಾನು ಕಂಡ ಕಾರಂತರು (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಶಿವರಾಮ ಕಾಥಂತರ 85ನೆಯ ಹುಟ್ಟು ಹಬ್ಬದ ಸವಿನೆನಪಿಗಾಗಿ, ಅವರ ಕುರಿತು ನಾನು “ತರಂಗ” ವಾರ ಪತ್ರಿಕೆಯಲ್ಲಿ ಬರೆದ ವ್ಯಕ್ತಿ ಚಿತ್ರಣವನ್ನು ಓದಿ, ತಮ್ಮ ಮೆಚ್ಚುಗೆ ಸೂಸಿ ಕರ್ನಾಟಕದ ಹತ್ತಾರು ಊರುಗಳಿಂದ, ದೂರದ ಮುಂಬಯಿ, ದಿಲ್ಲಿಯಿಂದ,ಹೊ ನಾಡಿನಿಂದಲೂ ಕನ್ನಡಿಗರ ಪತ್ರಗಳ ಮಹಾಪೂರವೇ ಹರಿದು ಬಂದಾಗ “ನಾನೂ ಲೇಖಕಿಯಾದೆ” ಎನ್ನುವ ನೆನಪನ್ನು ಹುಟ್ಟಿಸಿದ್ದುಂಟು; ಜತೆಯಲ್ಲಿ ಕರ್ತವ್ಯ ಪ್ರಜ್ಞೆಯನ್ನೂ ಹುಟ್ಟಿಸಿತು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾರಂತರಷ್ಟು ದುಡಿದವರಿಲ್ಲ. ಬೌದ್ಧಿಕ ಕ್ಷೇತ್ರದಲ್ಲಿ ಅವರು ತುಳಿದಷ್ಟು ದಾರಿಯನ್ನು ತುಳಿದವರಿಲ್ಲ. ಒಂದು ದಶಕಕ್ಕೂ ಮಿಕ್ಕಿದ ಈ ಅವಧಿಯಲ್ಲಿ ಅವರನ್ನು ತೀರ ನಿಕಟವಾಗಿ ಕಂಡಿದ್ದ ನನಗೆ, ನನ್ನ ಅನುಭವಗಳನ್ನು ಬರೆಯದೆ ಹೋದರೆ ಕರ್ತವ್ಯಲೋಪವಾದೀತೆಂಬ ಅಂಜಿಕೆ. ಅದರ ಫಲಕೃತಿಯೇ ಈ ಕೃತಿ.

ಕಾರಂತರನ್ನು ಕುರಿತ ನನ್ನ ಮೊತ್ತಮೊದಲ ಲೇಖನವನ್ನು 'ತರಂಗ' ವಾರ ಪತ್ರಿಕೆಯಲ್ಲಿ ಪ್ರಕಟಿಸುವಲ್ಲಿ ಸಂಪಾದಕ ಮಾನ್ಯ ಸಂತೋಷಕುಮಾರ ಗುಲ್ವಾಡಿಯವರು ತೋರಿಸಿದ ಉತ್ಸಾಹ ನೆನೆಯು ವಂಥದ್ದು. ತರಂಗದಲ್ಲಿ ನನ್ನ ಲೇಖನ ಪ್ರಕಟವಾಗಿ ಇಷ್ಟು ದೀರ್ಘಕಾಲ ಸಂದರೂ, ಇನ್ನೂ ಅಲ್ಲಿ, ಇಲ್ಲಿ ಸಂಚರಿಸುವಾಗಲೆಲ್ಲ ನನ್ನನ್ನು ಗುರುತಿಸಿ “ನಿಮ್ಮ ಲೇಖನ ಸೊಗಸಾಗಿತ್ತು” ಎಂದು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದ ಕನ್ನಡಿಗರ ಪ್ರೀತಿಯನ್ನು ಮರೆಯಲಾರೆ. ತನ್ನ ಬಿಡುವಿಲ್ಲದ ಕೆಲಸಗಳ ನಡುವೆಯೂ, ಬಿಡುವು ಮಾಡಿಕೊಂಡು ನನ್ನ ಬರಹದ ಪ್ರತಿಯನ್ನು ತೆಗೆದುಕೊಟ್ಟ ನನ್ನ ತಂಗಿ ಮಮತೆಯ ಸಹಕಾರವನ್ನು ಮರೆಯಲಾರೆ. ಇಷ್ಟು ವರ್ಷಗಳಿಂದ ಕಾರಂತರ ಕೆಲಸದಲ್ಲಿ ನಾನು ನೆರವಾಗಲು, ತಮಗಾದ ಅನಾನುಕೂಲತೆಗಳನ್ನು ಮರೆತು, ಸಂತೋಷದಿಂದ ಪ್ರೋತ್ಸಾಹಕೊಟ್ಟ ನನ್ನ ತಂದೆ, ತಾಯಿ, ಸಹೋದರ ಸಹೋದರಿಯರನ್ನು ಮರೆತರೆ ಲೋಪವಾದೀತು.

ಈ ಬರಹದ ಪ್ರಕಟಣೆಯ ಮತ್ತು ಪ್ರಕಾಶನದ ಹೊಣೆಯನ್ನು ಸಂತೋಷದಿಂದ ವಹಿಸಿಕೊಂಡ ಅಕ್ಷರ ಪ್ರಕಾಶನಕ್ಕೆ ಕೃತಜ್ಞತೆ ಸಲ್ಲಿಸಲು ಶಬ್ದಗಳೇ ಸಾಲವು. ಇದನ್ನು ಅಂದವಾಗಿ ಮುದ್ರಿಸಿಕೊಟ್ಟ ಪ್ರಗತಿ ಮುದ್ರಣಾಲಯದ ಮಾಲೀಕರಿಗೂ ಕೃತಜ್ಞತೆಗಳು. ಇದರ ಹಸ್ತಪ್ರತಿ ಯನ್ನೋದಿ, ಟೀಕೆಗಳನ್ನು ಸಹ ಸಹೃದಯತೆಯಿಂದ ಸ್ವೀಕರಿಸಿ, ಪ್ರಕಟಿಸಲು ಅನುಮತಿಯಿತ್ತ ಡಾ|| ಶಿವರಾಮ ಕಾರಂತರಿಗೂ ನಮನಗಳು.

ಕಾರಂತರ ಪರಮ ಸ್ನೇಹಿತರಾದ ಚಿತ್ರಕಾರ ಶ್ರೀ ಕೆ.ಕೆ. ಹೆಬ್ಬಾರರು ಈ ಪುಟ್ಟ ಬರಹಕ್ಕೆ ಹೊದಿಕೆ ಚಿತ್ರವನ್ನು ಬರೆದುಕೊಟ್ಟು ನನ್ನನ್ನು ಹರಸಿದ್ದಾರೆ. ಅವರಿಗೆ ನಾನು ಚಿರಋಣಿ.

ಇತಿ,
ಬಿ. ಮಾಲಿನಿ ಮಲ್ಯ
ಸಾಲಿಗ್ರಾಮ
ತಾ. 19-7-87

 

ಪುಟಗಳು: 201

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !