ನಕ್ಷತ್ರ ಕಡ್ಡಿ

ನಕ್ಷತ್ರ ಕಡ್ಡಿ

Regular price
$1.99
Sale price
$1.99
Regular price
Sold out
Unit price
per 
Shipping does not apply

ಈ ಸಂಕಲನದಲ್ಲಿನ ನೂರಾರು ಪುಟ್ಟ ಪುಟ್ಟ ಕಥೆಗಳು ಬದುಕಿನ ಬೇರೆ ಬೇರೆ ಘಟ್ಟಗಳಲ್ಲಿ ಬರೆದವುಗಳು. ಬಯಲಾಟದ ಕಲಾವಿದರು ಯಥೇಚ್ಛವಾಗಿ ಕಟ್ಟಿಕೊಟ್ಟ ಕಥೆ-ಉಪಕಥೆಗಳು, ಝೆನ್, ಸೂಫಿ ಸಾಹಿತ್ಯ, ಬದುಕಿನ ಅನುಭವಗಳು, ಉದ್ಯೋಗದ ಏಕತಾನತೆ ಈ ಕಿರುಗಥೆಗಳನ್ನು ಬರೆಯಲು ಪ್ರೇರಣೆ ನೀಡಿವೆ. ಕಥೆ, ಕಾದಂಬರಿಗಳ ತುಲನೆಯಲ್ಲಿ ನ್ಯಾನೊ ಕಥೆಗಳ ಕ್ಯಾನ್ವಾಸ್ ಚಿಕ್ಕದು ಎಂದೇ ಹೇಳಬೇಕು. ಅಂಗೈಯಗಲದ ಕರವಸ್ತ್ರವನ್ನು ಮುಷ್ಟಿಯೊಳಗೆ ತುರುಕಿ, ಅದೇ ಮುಷ್ಟಿಯೊಳಗಿಂದ ಬಣ್ಣಬಣ್ಣದ ಬಟ್ಟೆಗಳ ಗೊಂಚಲುಗಳನ್ನು ಒಂದರ ಹಿಂದೊಂದು ಹೊರಸೆಳೆಯುವ ಜಾದೂಗಾರನ ತಂತ್ರದಂತೆ ನ್ಯಾನೊ ಕಥೆಯೊಂದು ಓದುಗನ ಒಳಗಿಳಿದು ಬೆಳೆಯಬೇಕು. ಈ ಸಂಕಲನದ ಕಥೆಗಳು ನಿಮ್ಮೊಳಗೆ ಹೊಳೆದರೆ, ಬೆಳೆದರೆ ನಾನು ಧನ್ಯ. ಈ ಹೊಸ ಬರಹಗಾರನ ಮೊದಲ ಪುಸ್ತಕವನ್ನು ಕೈಗೆತ್ತಿಕೊಂಡು ಓದುತ್ತಿರುವ ನೀವು, ಪ್ರೀತಿಯಿಂದ ಪುಸ್ತಕದ ಮೈದಡವಿದರೆ ಮತ್ತಷ್ಟು ಬರೆಯಬಲ್ಲೆ.

- ಸವಿರಾಜ್ ಆನಂದೂರು

 

ಪುಟಗಳು: 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !