ಮಣ್ಣಿನ ಮಕ್ಕಳು (ಇಬುಕ್)

ಮಣ್ಣಿನ ಮಕ್ಕಳು (ಇಬುಕ್)

Regular price
$0.49
Sale price
$0.49
Regular price
Sold out
Unit price
per 
Shipping does not apply

GET FREE SAMPLE

 

ಮೊಗಸಾಲೆ ಅವರ ಕಾದಂಬರಿ ‘ಮಣ್ಣಿನ ಮಕ್ಕಳು’. ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡ ಒಂದು ಶೂದ್ರ ಕುಟುಂಬ, ಮನೆಯ ಹಿರಿಮಗನ ಅವಿವೇಕದಿಂದಾಗಿ ಎಲ್ಲವನ್ನೂ ಕಳೆದುಕೊಂಡದ್ದನ್ನು ಚಿತ್ರಿಸುತ್ತದೆ. ಹತ್ತೊಂಬತ್ತು ವರ್ಷದ ಹುಡುಗನೊಬ್ಬ ಇಂಥ ರೊಮ್ಯಾಂಟಿಕ್ ಅಲ್ಲದ ವಾಸ್ತವ ಬದುಕನ್ನು ಚಿತ್ರಿಸುವ ದುರಂತದ ವಸ್ತುವನ್ನು ಆಯ್ದುಕೊಂಡದ್ದೇ ಅವರ ಸಂಯಮಶೀಲತೆಯನ್ನೂ, ಕೆಳವರ್ಗದವರ ಬದುಕನ್ನೂ ಕಣ್ಣುಬಿಟ್ಟು ವಿವರವಾಗಿ ನಿರುಕಿಸುವ ಒಬ್ಬ ವೀಕ್ಷಕ / ಚಿಂತಕ ಅದಾಗಲೇ ಅವರಲ್ಲಿ ಬೆಳೆದು ನಿಂತಿದ್ದನ್ನೂ ಸೂಚಿಸುತ್ತದೆ

ಮಣ್ಣಿನ ಮಕ್ಕಳು - ಡಾ. ಮೊಗಸಾಲೆಯವರ ಮೊದಲ ಕೃತಿ. ಈ ಕಾದಂಬರಿಗೆ ಹಲವು ಆಯಾಮಗಳಿವೆ. ಹಲವು ಬಗೆಯ ಸಂಬಂಧಗಳು, ಅವು ಮಾರ್ಪಡುವ ರೀತಿ, ಬದಲಾವಣೆಯ ಗಾಳಿ ತರುವ ಪರಿಣಾಮಗಳು - ಇವೆಲ್ಲ ಈ ಆಯಾಮಗಳಲ್ಲಿ ಸೇರಿವೆ. ಹಾಗೆ ನೋಡಿದರೆ ಕಾಲವು ಜನಜೀವನದಲ್ಲಿ, ಸಂಬಂಧಗಳಲ್ಲಿ, ಮನೋಭಾವಗಳಲ್ಲಿ ತರುವ ಬದಲಾವಣೆಗಳನ್ನು ಡಾ. ಮೊಗಸಾಲೆ ತಮ್ಮ ಎಲ್ಲ ಕತೆ, ಕಾದಂಬರಿಗಳಲ್ಲಿ ಚಿತ್ರಿಸುತ್ತಲೇ ಬಂದಿದ್ದಾರೆ. ಅವರ ‘ಸೀತಾಪುರದ ಕಥೆಗಳು’ ಹಾಗೂ ‘ಸೀತಾಪುರದಲ್ಲಿ ಗಾಂಧೀಜಿ’ ಕಥಾಸಂಕಲನದಲ್ಲಿ ಹಾಗೂ ‘ಉಲ್ಲಂಘನೆ’, ‘ನನ್ನದಲ್ಲದ್ದು’, ಮತ್ತು ‘ಮಣ್ಣಿನ ಮಕ್ಕಳು’ ಕಾದಂಬರಿಗಳಲ್ಲಿ ಕಾಲ ತರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಮತ್ತು ವಿವರವಾಗಿಯೇ ಚಿತ್ರಿಸಲಾಗಿದೆ. ಇದು ಆ ಎಲ್ಲ ಕೃತಿಗಳಲ್ಲಿ ಕಥೆಯ ಅನಿವಾರ್ಯ ಭಾಗವಾಗಿಯೇ ಬಂದಿದೆ. ಕಾದಂಬರಿಕಾರರಾಗಿ ಡಾ. ಮೊಗಸಾಲೆಯವರ ಯಶಸ್ಸಿನ ಸೂತ್ರ ಇದು. ಅವರಿಗೇ ಗೊತ್ತಿಲ್ಲದಂತೆ, ಪ್ರಜ್ಞಾವಂತ ಲೇಖಕನೊಬ್ಬನ ಸಹಜ ಕರ್ತವ್ಯವಾಗಿ ಭಾವಿಸಿ ಲೋಕವ್ಯವಹಾರವನ್ನು ಪರಿಭಾವಿಸಿ ಲೇಖಿಸಿರುವುದರ ಪರಿಣಾಮವಾಗಿ ರೂಪುಗೊಂಡಿರುವ ಸೂತ್ರ.

 

ಪುಟಗಳು: 130

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !