ನಾಪತ್ತೆಯಾದ ಗ್ರಾಮಾಫೋನು ಮತ್ತು ಇತರ ಪ್ರಬಂಧಗಳು (ಇಬುಕ್)

ನಾಪತ್ತೆಯಾದ ಗ್ರಾಮಾಫೋನು ಮತ್ತು ಇತರ ಪ್ರಬಂಧಗಳು (ಇಬುಕ್)

Regular price
$13.99
Sale price
$13.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

ನಮ್ಮ ಹಿಂದಿನ ತಲೆಮಾರಿನ ಹಲವಾರು ಹಿರಿಯ ಲೇಖಕರ ಬರಹಗಳನ್ನು ಓದಿದಾಗಲೆಲ್ಲ ಅವರ ಓದಿನ ವಿಸ್ತಾರ, ಸಾಹಿತ್ಯಾಸಕ್ತಿಯ ತೀವ್ರತೆ ಮತ್ತು ಅದರ ಹಿಂದಿನ ಪರಿಶ್ರಮ ಕಣ್ಣಿಗೆ ಕಟ್ಟಿದಂತಾಗಿ ಅವರು ಕನ್ನಡದ ಮನಸ್ಸನ್ನು ತನ್ಮೂಲಕ ಶ್ರೀಮಂತಗೊಳಿಸಿದ ರೀತಿಗೆ ಮತ್ತು ಅವರು ಈ ಸಂತೋಷವನ್ನು ತಮ್ಮೊಳಗೆ ಮಾತ್ರ ಉಳಿಸಿಕೊಳ್ಳದೇ ಹಂಚಿಕೊಂಡ ಬಗೆಗೆ ಕೃತಜ್ಞತಾ ಭಾವವೊಂದು ಮೂಡುತ್ತದೆ. ದಿವಾಕರರ ಈ ಲೇಖನಗಳನ್ನು ಓದುತ್ತಿದ್ದ ಹಾಗೆ ನಮ್ಮ ಕಾಲದ ಈ ಕನ್ನಡ ಮನಸ್ಸಿನ ಬಗ್ಗೆ ನನ್ನಲ್ಲಿ ಕೃತಜ್ಞತೆ ಹುಟ್ಟಿತು.

...ಎಲ್ಲ ಶ್ರೇಷ್ಠ ಸಾಹಿತ್ಯದ ಮೂಲದಲ್ಲಿರುವುದು ಕೂಡ ಸಂಬಂಧಗಳನ್ನು ಕಾಣಬಲ್ಲ ಈ ವಿಶೇಷವಾದ ದೃಷ್ಟಿಯೇ. ಅಂದರೆ, ವಿಭಿನ್ನ ಗ್ರಹಿಕೆಗಳನ್ನು ಒಟ್ಟುಗೂಡಿಸಿ ತೋರಿಸುವ ಮೂಲಕ ನಾವು ಜಗತ್ತನ್ನು ಎಂದೂ ನೋಡಿರದ ರೀತಿಯಲ್ಲಿ ಕಾಣಿಸುವ ಪ್ರತಿಭೆ. ಇಲ್ಲಿಯ ಯಾವ ಲೇಖನವನ್ನು ನೋಡಿದರೂ ಇದು ಎದ್ದು ಕಾಣುತ್ತದೆ…

ಸಾಹಿತ್ಯ ಜಗತ್ತಿನ ವಿಸ್ತಾರ, ಈ ಸಂಪತ್ತು, ಈ ಸಂತೋಷ ಏನು ಅನ್ನುವುದನ್ನು ಅರಿಯಲು ಈ ಪುಸ್ತಕ ಕೈದೀವಿಗೆಯಂತೆ ಇದೆ.

- ವಿವೇಕ ಶಾನಭಾಗ

(ಮುನ್ನುಡಿಯಿಂದ)


ಪುಟಗಳು: 390

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !