ನಾವು ಕಟ್ಟಿದ ಸ್ವರ್ಗ

ನಾವು ಕಟ್ಟಿದ ಸ್ವರ್ಗ

Regular price
$5.49
Sale price
$5.49
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

 

ನಾನು ಇತ್ತೀಚ್ಚಿಗೆ ಓದಿದ ಪುಸ್ತಕ ಕಡಲ ತೀರದ ಬಾರ್ಗವ ಎಂದು ಪ್ರಸಿದ್ದರಾದ ಡಾ. ಶಿವರಾಮ ಕಾರಂತರ ” ನಾವು ಕಟ್ಡಿದ ಸ್ವರ್ಗ” ಎಂಬ ಅದ್ಬತ ಕಾದಂಬರಿ. ಅದನ್ನು ಓದಿದಾಗ, ಈಗಿನ ರಾಜಕೀಯಕ್ಕೂ ಅಂದಿನ ರಾಜಕೀಯಕ್ಕೂ ವ್ಯತ್ಯಾಸವೇನು ಕಾಣುವುದಿಲ್ಲ, ವ್ಯಕ್ತಿಗಳು ಬೇರೆ, ಕಾಲ ಬೇರೆ,ಆದರೆ ತಂತ್ರ-ಕುತಂತ್ರ ಕುಟಿಯೊಕ್ತಿ, ಒಡೆದು ಆಳುವ, ಜಾತಿ ರಾಜಕಾರಣ, ಸ್ವಾರ್ಥ ಎಲ್ಲಾ ಈಗಲೂ ಹಾಗೆ ಇದೆ.
ಅವರು ಆ ಪುಸ್ತಕದ ಮುನ್ನುಡಿಯಲ್ಲಿ ಅಂದಿನ ರಾಜಕೀಯ, ರಾಜಕಾರಣಿಗಳ ಬಗ್ಗೆ, ಮನನೊಂದು ಈ ರೀತಿ ಬರೆದಿದ್ದಾರೆ. ” ಸಾಹಿತಿ ಯಾದ ನನಗೆ ದೇಶದ ಯಾವತ್ತೂ ಜೀವನದ ಶಾಂತಿ ಸಮಾಧಾನ ಗಳನ್ನು ಈ ಚಿಂತೆ ನಿತ್ಯವು ಕೆಡಿಸುತ್ತಾ ಬಂದಿದೆ, ಮುಂದನ ತಿಂಗಳುಗಳಲ್ಲಿ –ದೇಶ ನಿಷ್ಠೆಯನ್ನು ಸ್ವಾರ್ಥಕ್ಕೆ ಬಲಿಕೊಡುವ ಜನಗಳಿಂದ ಎಂಥಾ ವಿಷಮಯ ವಾತಾವರಣ ಉಂಟಾಗಿದೆ ಎಂಬ ನೋವಿಗೆ ಸಾಕ್ಷಿಯಾಗಿದ್ದೇನೆ, ಅಂಥ ಮಾನಸಿಕ ಒತ್ತಡ ನನ್ಮನು ಕಾಡಿದ್ದರಿಂದ,ಆ ಹೊರೆಯನ್ನು ಇಳಿಸಲು ಈ ವ್ಯಂಗ್ಯ ಕಾದಂಬರಿ ಬರೆದಿದ್ದೇನೆ.”
ಈ ಕಾದಂಬರಿಯ ಮುಖ್ಯ ಪಾತ್ರದಾರಿ,ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿ ಈಗ ಸಾಕಷ್ಟು ಆಸ್ತಿ ಪಾಸ್ತಿ ಮಾಡಿಕೊಂಡಿರುವ ರಾಜಕಾರಿಣಿ ದೇವೇಂದ್ರಪ್ಪನವರು ಪ್ರಸ್ತುತ ರಾಜಕಾರಣದ ಬಗ್ಗೆ ಬೇಸತ್ತು ಮಾಡಿದ ಬಾಷಣದಲ್ಲಿ ಅಂದಿನ( ಇಂದಿನ) ರಾಜಕಾರಣಿಗಳ ಬಗ್ಗೆ ಒಂದಿಷ್ಟು ವಿಷಯ ತಿಳಿಸುತ್ತಾರೆ.
ಮೊದಲಿಗೇ ನಾವು ಬೆಳೆಸಿದ ರಾಜಕೀಯದಲ್ಲಿ — ಯೋಗ್ಯತೆ, ಪ್ರಾಮಾಣಿಕತೆ,ದೂರದೃಷ್ಟಿ, ಇರುವವರನ್ನು ಹುಡುಕಲು ಹೋಗಲೇ ಇಲ್ಲಾ. ಕೇವಲ ಗೆದ್ದು ಬರುವ ಒಂದು ದೃಷ್ಟಿ ನಮ್ಮದು. ಯಾರನ್ನು ಹಾಕಿದರೆ ಗೆದ್ದು ಬರುತ್ತಾರೆ. ಎಂಬ ಯೋಚನೆ ಮಾಡಿದೆವು. ನಡೆಸಿದೆವು ರಾಜ್ಯಭಾರ. ನಾವು ಆರಿಸಿದವರಿಗೆ ಯಾವುದೇ ಯೋಗ್ಯತೆ ತಮಗೆಲ್ಲಾ ಗೊತ್ತಿದೆ-ಸ್ಥಾನ ಮಹಿಮೆಯಿಂದ — ಎಂಬ ಆತ್ಮವಿಶ್ವಾಸವಿತ್ತು.ಈಗಲೂ ಇದೆ.
ಅಧಿಕಾರ ಸಿಗದವರು, ಇದಿರು ಪಕ್ಷದವರು,ಸ್ವಪಕ್ಷದ ಅಸಂತುಷ್ಟರು ಆಳುವವರ ಹುಳಕು ಹುಡುಕುತ್ತಲೇ ಕುಳಿತರು. ಅವರನ್ನು ಸುಮ್ಮನಿರಿಸಲಿಕ್ಕೂ,ತಮ್ಮ ಮೇಲಿನ ಬೆಂಬಲ ಬಲಪಡಿಸಲಿಕ್ಕೂ,ಅಡ್ಡ ದಾರಿಗಳನ್ನು ಕಳಿತೆವು. ಸಂಭಾವಿತನಕ್ಕೆ ರಾಜಕೀಯ ದಲ್ಲಿ ಸ್ಥಾನವೇ ಇಲ್ಲಾಎಂಬುದನ್ನು ಖಾತ್ರಿ ಪಡಿಸಿದೆವು. ಸ್ವತಃ ಬ್ರಹ್ಮ ನೇ ಬಂದು ಇಲ್ಲಿ ರಾಜ್ಯ ವಾಳಿದರೂ,ಅವನಿಗೂ ಮಸಿ ಬಳೆಯಲು ಹೇಸದ ಜನ ನಮ್ಮವರು.
ನಮ್ಮ ದೇಶದಲ್ಲಿ ಸಂಭಾವಿತತನ,ಪ್ರಾಮಾಣಿಕತನ ಎಂಬ ಎರಡು ವಸ್ತು ಹುಡಿಕಿದರೆ ಸಿಗುವಂತಿಲ್ಲ. ಪಕ್ಷ ನಡೆಸುವ ರೀತಿಯಲ್ಲಿ ವ್ಯಕ್ತಿ ನಿಷ್ಟೆಯಾಗಲಿ, ಪಕ್ಷನಿಷ್ಟೆಯಾಗಲಿ ಏನೇನು ಉಳಿದಿಲ್ಲ. ಉಳಿದಿರುವುದು ಆತ್ಮನಿಷ್ಟೆ. ಅದು ಸಹ ಬಹಳ ಕಿಮತ್ತಿನ ಪದಾರ್ಥವಲ್ಲ. ನಮ್ಮಲ್ಲಿ ದುಡ್ಡು ಕೊಳ್ಳಲಾರಾದ, ಅಧಿಕಾರ ಆಮಿಷ ಕೊಳ್ಳಲಾರದ ಯಾವ ಆಸಾಮಿಯೂ ಇಲ್ಲ.ನನ್ನೊರಟು ಮಾತಿನಿಂದ ಹೇಳಬಹುದಾದರೆ— ನಮ್ಮ ನಮ್ಮ ಅಪ್ಪ,ಅಮ್ಮಂದಿರನ್ನೂ ನಾವು ಮಾರುವುದಕ್ಕೆ ಸಿದ್ದರಿದ್ದೇವೆ, ಅಂಥವರು ತಮ್ಮನ್ನು ಮಾರಿಕೊಂಡರೆ ಆಶ್ಚರ್ಯ ಪಡಬಾರದು.
ನೀವು ಮಂತ್ರಿ ಪಧವಿಯನ್ನು ಬಿಟ್ಟಿದ್ಯಾಕೆ? ಎಂಬ ಪ್ರಶ್ನೆಗೆ,,
ಜನ ಬೈಯುವುದಂತೂ ಬೈಯುತ್ತಾರೆ. ನಮ್ಮ ಅಡ್ಡದಾರಿ ಅವರಿಗೆ ಗೊತ್ತಿರುತ್ತದೆ. ಜನ ಬೈಯುವುದು ದಾರಿ ಚೊಕ್ಕ ವಾಗಬೇಕೆಂದಲ್ಲ, ತಮಗೂ ಆ ದುಡ್ಡು ಮಾಡುವ ಸಂದರ್ಭ ಸಿಗಲಿಲ್ಲ ಅಂತ. ಆದರೂ ಬೈಗಳು ಬೈಗಲೇ. ನನಗೆ ಅಧಿಕಾರ ವಹಿಸಿಕೊಂಡು ಅಸೆಂಬ್ಲಿ ಯಲ್ಲಿ ಕುಳಿತು ಬೀದಿಯ ಬೈಗಳನ್ನು ಕೇಳಬೇಕಾಗಿಲ್ಲ ಅನಿಸಿತು. ಅಲ್ಲಿರಲಿಕ್ಕೆ ತೊಗಲು ತುಂಬಾ ದಪ್ಪವಾಗಿರಬೇಕು. ನನಗೆ ಅದಿಲ್ಲ ಅದಕ್ಕೆ ಮಂತ್ರಿ ಪಧವಿಗೆ ರಾಜಿನಾಮೆ ಕೊಟ್ಟೆ ಎಂದು ಹೇಳುತ್ತಾರೆ
” ಈ ದೇಶದಲ್ಲಿ ಇನ್ನೊಂದು ವ್ಯವಹಾರ ಬಲವಾಗಿ ಬೆಳೆದು ಬಂದಿದೆ. ಅದಕ್ಕಾಗಿ ಬೆವರು ಸುರಿಸಬೇಕಾಗಿಲ್ಲ. ಬಂಡವಾಳ ತೊಡಗಿಸಬೇಕಿಲ್ಲ; ಲಾಭ ನಷ್ಟಗಳ ಹೊಣೆಯನ್ನು ಹೊರಬೇಕಾಗಿಯೂ ಇಲ್ಲ. ಅಂಥ ವೃತ್ತಿಯನ್ನು ನೀವೂ ಕೈ ಗೊಳ್ಳಬೇಕು. ಶ್ರೀಮಂತರಾಗುತ್ತೀರಿ.ಆ ವೃತ್ತಿಯ ಹೆಸರು “ರಾಜಕೀಯ”. ಭಾರತದ ಉದ್ದಾರಕ್ಕಾಗಿ ರಾಜಕೀಯ ನಡೆಸುತ್ತಾ ವಿವಿಧ ರೀತಿಗಳಿಂದ ಲಂಚ ತೆಗೆದುಕೊಂಡು ಬೀಗುವ ಈ ಮಹಾ ಉದ್ಯಮಕ್ಕೆ ” ದೇಶ ಸೇವೆ” ಎನ್ನುತ್ತಾರೆ. ದುಡಿಮೆ,ಬಂಡವಾಳ,ಶ್ರಮ,ಸಾಲ,ಸೋಲ ಬೇರೆಯವರದ್ದು. ಲಾಭಾಂಶದಲ್ಲಿ ಸಿಂಹಪಾಲು ನಿಮ್ಮದು. ಅದು ಸಾದ್ಯವಾಗಲು ರಾಜ್ಯದ ಆಡಳಿತವನ್ನು ನಿಮ್ಮ ಮುಷ್ಟಿ ಯಲ್ಲಿ ಇರಿಸಿ ಕೊಳ್ಳ ಬಲ್ಲಂತ ಚಮಕೃತಿಯನ್ನು ನೀವು ಕಲಿಯಬೇಕು.ನಿಮ್ಮ ಲಾಭಕ್ಕೆ ಅಡ್ಡ ಬಂದವನ್ನು, ದೇಶದ್ರೋಹಿ ಎಂದು ಸಾರಿ ಏನು ಬೇಕಾದರು ಮಾಡಬಹುದು. ದೇಶ ಸೇವೆಯ ಮಂತ್ರ ದಷ್ಟು ಲಾಭದಾಯಕ ವಾದ ಮಂತ್ರ ಇನ್ನೊಂದಿಲ್ಲ. ಈ ಮಂತ್ರಕ್ಕೆ ತಕ್ಕ ತಂತ್ರಗಳನ್ನು ಅನುಭವದಿಂದ ಅಳವಡಿಸಿಕೊಳ್ಳಬೇಕು.
ಇದಕ್ಕೆಲ್ಲ ನೀವು ಜನತೆಯ ಪ್ರತಿನಿಧಿಗಳಾಗುವುದು ಅನಿವಾರ್ಯ. ಆದರೆ ಕೇವಲ ಅಷ್ಟರಿಂದಲೇ ನಿಮ್ಮ ಕೆಲಸ ಸಾಲದು. ನಿಮಗಿಂತಲೂ ಕಡಿಮೆ ಬುದ್ದಿಯವರು ಮಂತ್ತಿ ಆದಾಗ ನೀವು ಸುಮ್ಮನಿರಬಾರದು,ಅವರನ್ನು ಓಡಿಸುವ ಉಪಾಯ ಹೂಡಿ,ನೀವು ಅವರ ಸ್ಥಾನ ಅಲಂಕರಿಸಬೇಕು. ಆಗ ದೇಶದ ಬಡತನ ನಿವಾರಿಸುವುದು ಸುಲಭ.ಬಡತನದ ನಿವಾರಣೆಗೆ ದಿನದ ಇಪ್ಪತ್ನಾಲ್ಕು ತಾಸುಗಳಲ್ಲೂ ಭಾಷಣ ಮಾಡುವುದಕ್ಕೆ ಕಲಿಯಬೇಕು.
ಗಾಂಧೀಜಿಯವರು ಬಾರತ ದೇಶದಲ್ಲಿ ರಾಮರಾಜ್ಯವನ್ನು ಕಟ್ಟಬೇಕೆಂಬ ಹಂಬಲ ತೊಟ್ಟರು. ಅವರ ಕೆಳಗೆ ನಾಲ್ಕುದಿನ ಕುಣಿದ ನಾನೂ ಅಂಥ ಹಂಬಲವನ್ನು ತೊಟ್ಟದುಂಟು. ಈಗ ಎಣಿಕೆ ಹಾಕುವಾಗ ನನ್ನ ಕಾಲಕ್ಕೆ ಮಾತ್ರವಲ್ಲ ನನ್ನ ಮೊಮ್ಮಕ್ಕಳ ಕಾಲಕ್ಕೂ ಆ ರಾಮರಾಜ್ಯವೆಂಬುದು ಬರಲಾರದು ಅನ್ನಿಸುತ್ತೆ, ನಾವು ತಂದದು ಹರಾಮ ರಾಜ್ಯ.
ಹಾಗಾಗಲು ಕಾರಣ ನಾನು ಮತ್ತು ನೀವು. ನಾವು ದೇಶದ ಅಯೊಗ್ಯರನ್ನು ಹುಡುಕಿ ಹುಡುಕಿ ಅವರ ಕೈಗೆ ಐದು ವರ್ಷಕ್ಕೊಮ್ಮೆ ನಮ್ಮ ಜುಟ್ಟುಗಳನ್ನು ಕೊಟ್ಟು” ಕುಣಿಸಿ ನಮ್ಮನ್ನು” ಎಂದು ಹೇಳುತ್ತಾ ಬಂದಿದ್ದೆ ತಪ್ಪು. ಅದು ತಪ್ಪೆಂದು ನನಗೆ ಕಾಣಿಸಿದರೂ ನಿಮಗೆ ಕಾಣಿಸದಿರಬಹುದು.ಕಾರಣ ನಿಮ್ಮಲ್ಲಿ ಹೆಚ್ಚಿನವರು ನಮ್ಮ ಮಂತ್ರಿಗಳಹಾಗೆಯೇ ತಂತಮ್ಮ ಕಿಸೆಗೆ ಏನು ಬಿದ್ದೀತು ಎಂದು ಕಾಣಬಲ್ಲರೇ ಹೊರತು ನಮ್ಮ ಆಚೀಚಿನ ಜನರು ಸಹ ನಮ್ಮಂತೆ ಬದುಕಬೇಕು ಎಂದು ಎಂದು ಯೋಚಿಸಿದವರಲ್ಲ. ನಮ್ಮ ಹಕ್ಕುಗಳ ಮುಂದೆ ಅನ್ಯರಿಗೆ ಯಾವ ಹಕ್ಕೂ ಇಲ್ಲ. ಅವರಿಗೆ ಸಲ್ಲುವ ಯಾವ ಯಾವ ನ್ಯಾಯವೂ ನಮಗೆ ಬೇಕಿಲ್ಲ………
ಈ ಕಾದಂಬರಿ 1979 ರಲ್ಲಿ ಕಾರಂತರು ಬರೆದಿದ್ದು , ಅವರು ಬರೆದ 40 ವರ್ಷದ ನಂತರವೂ ಪರಿಸ್ಥಿತಿಯಲ್ಲಿ ಏನಾದರೂ ಬದಲಾಗಿದೆಯಾ?

-ಶ್ರೀಧರ ಅನಂತಸ್ವಾಮಿ ರಾವ್

 

ಕೃಪೆ 

https://pustakapremi.wordpress.com

 

ಪುಟಗಳು: 283

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !