ನೀವೇ ಜೀನಿಯಸ್ (ಇಬುಕ್)

ನೀವೇ ಜೀನಿಯಸ್ (ಇಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

GET FREE SAMPLE

ನಾನು ಒಬ್ಬ ಸಾಧಾರಣ ಶಿಕ್ಷಕನಾಗಿ ನನ್ನ ಜೀವನ ಪ್ರಾರಂಭಿಸಿದೆ. ದಿ.ಎಚ್.ನರಸಿಂಹಯ್ಯ ಅವರಿಂದ ಸ್ಫೂರ್ತಿ ಪಡೆದು ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯಗಳನ್ನು ಅನಾವರಣಗೊಳಿಸಲು ಪ್ರಾರಂಭಿಸಿದೆ. ಇಂದಿಗೂ ನಾನು ಶಿಕ್ಷಕ ವೃತ್ತಿಯಲ್ಲಿದ್ದು ಪ್ರವೃತ್ತಿಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದರೂ ನನ್ನ ವ್ಯಾಪ್ತಿ ನನಗೆ ಅರಿವೇ ಇಲ್ಲದಂತೆ ವಿಸ್ತರಿಸಿದೆ.

ಇಂದಿನ ಮಕ್ಕಳು ಎಷ್ಟೋ ಜಾಣರು. ಅವರ ಕಲಿಕೆಗೆ ಇರುವ ಅವಕಾಶಗಳು ಅಪಾರ. ಪುಟ್ಟ ಪುಟ್ಟ ಮಕ್ಕಳೂ ಇಂದು ಇಂಟರ್‌ನೆಟ್‌ನಿಂದ ಮಾಹಿತಿ ಹೆಕ್ಕಿ ತೆಗೆಯುವ ಜಾಣ್ಮೆ ಹೊಂದಿದ್ದಾರೆ. ಹುಟ್ಟಿದ ಮಗು ಸೆಲ್ ಪೋನ್ ನಿಂದ ಮಾತನಾಡುತ್ತಾ ಆನಂದ ಪಡುತ್ತದೆ.ವಿಜ್ಞಾನ ಮುಂದುವರಿದಂತೆ ಕಲಿಕೆ ಇಂದು ಸಂಕಷ್ಟವಲ್ಲ. ಕಲಿಯುವ ಆಸಕ್ತಿ ಇರುವ ಎಲ್ಲರಿಗೂ ಕಲಿಯಲು ಹಲವು ಬಗೆಯ ಸಾಧನಗಳಿವೆ.

ಇಂದಿನ ಮಕ್ಕಳು ಪ್ರತಿಯೊಬ್ಬರೂ ಸ್ವಭಾವತಃ ಹೆಚ್ಚು ಚುರುಕಾಗಿಯೂ ಇದ್ದಾರೆ. ಅವರಲ್ಲಿ ಸ್ಮರಣ ಶಕ್ತಿ ಬಹಳ ಕೆಲವೇ ವರ್ಷಗಳಲ್ಲಿ ಕಾಗದ ಮರೆಯಾಗಿ ಲ್ಯಾಪ್ ಟಾಪ್,ಟ್ಯಾಬ್‌ಲೆಟ್‌ಗಳು ಸುಲಭವಾಗಿ ದೊರೆಯುತ್ತವೆ ಇದರಿಂದ ಗ್ರಹಣ ಶಕ್ತಿ ಹೆಚ್ಚಾಗುತ್ತದೆ. ಇದನ್ನು ಗುರುತಿಸುವ ಪ್ರಯತ್ನವಷ್ಟೇ ಈ ಪುಸ್ತಕ.

ಇಂದು ಕಲಿಯಲು ತಂತ್ರಜ್ಞಾನದ ನೆರವಿದೆ. ಆದರೆ ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಅಲ್ಲದೆ ಕ್ಷುಲ್ಲಕ ಕಾರಣಗಳಿಗಾಗಿ ವಿವೇಚನೆಯನ್ನು ಕಳೆದುಕೊಂಡು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಇದಕ್ಕೆ ಉತ್ತಮ ಉದಾಹರಣೆ.

ಈ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ವಿಧಾನವನ್ನು ಚರ್ಚಿಸಲಾಗಿದೆ. ಎರಡನೇ ಭಾಗದಲ್ಲಿ ಕಲಿಕೆ ಕುರಿತಾಗಿಯೇ ಗಮನ ನೀಡಲಾಗಿದೆ.

ಮಾನಸಿಕ ಸದೃಢತೆ ಸಾಧಿಸದ ಪ್ರತಿಯೊಬ್ಬ ವ್ಯಕ್ತಿಗೂ ಭಯ ಆತಂಕ ಸೋಮಾರಿತನ ಅಸೂಯೆ ಖಿನ್ನತೆ ಎಂಬ ದೌರ್ಬಲ್ಯಗಳು ಸದಾ ಸವಾರಿ ಮಾಡುತ್ತಿರುತ್ತವೆ. ದೌರ್ಬಲ್ಯಗಳು ಸವಾರಿ ಮಾಡಲು ಪ್ರಾರಂಭಿಸಿದ ನಂತರ ಅವುಗಳನ್ನು ನಾವು ದೆವ್ವ, ಭೂತ, ಮಾಟ, ಮಂತ್ರ ಇತ್ಯಾದಿ ಹೆಸರುಗಳಲ್ಲಿ ಕರೆಯುತ್ತೇವೆ. ತಂತ್ರಜ್ಞಾನದಿಂದ ಮಕ್ಕಳು ಎಷ್ಟೋ ಕಲಿಯುತ್ತಿದ್ದರೂ ಅಂಕಗಳಿಕೆಯಲ್ಲಿ ರ‍್ಯಾಂಕ್ ಪಡೆಯುತ್ತಿದ್ದರೂ ಮಾನಸಿಕವಾಗಿ ಹೊಸ ಹೊಸ ಸವಾಲುಗಳು ಎದುರಾಗುತ್ತಿರುವುದನ್ನು ನಮ್ಮ ಪೋಷಕರು ಕಾಣುತ್ತಿದ್ದಾರೆ. ಸಂವಹನ ಕ್ಷೇತ್ರದ ವಿಸ್ತಾರದಿಂದ ಜ್ಞಾನವೂ ವಿಸ್ತಾರವಾಗುತ್ತಿದೆ. ಆದರೆ ಇವುಗಳು ಮಕ್ಕಳ ಮಾನಸಿಕ ಸಮಸ್ಯೆಗಳಿಗೆ ಹೊಸ ಸವಾಲುಗಳನ್ನು ತಂದೊಡ್ಡುತ್ತಿವೆ.

ಹೈಸ್ಕೂಲು, ಕಾಲೇಜು ಮಕ್ಕಳು ಇಂದು ಮೊಬೈಲ್, ಎಸ್ಎಂಎಸ್, ವಾಟ್ಸ್ ಅಪ್,ಟ್ವಿಟರ್, ಚಾಟಿಂಗ್ ಬಿಟ್ಟು ಇರಲಾಗದ ಸ್ಥಿತಿ ತಲುಪಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಿಂದ ಎದುರಾಗುತ್ತಿರುವ ಬಿಕ್ಕಟ್ಟುಗಳು ಹಿಂದೆಂದೂ ಕಾಣದಂತಹವು. ಬಹಳಷ್ಟನ್ನು ಯಾವ ರೀತಿ ಪರಿಹರಿಸಬೇಕು ಎನ್ನುವುದೇ ಗೊತ್ತಾಗದ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ‘ಇಂಟೆಗ್ರಿಟಿ’ ಕಾಪಾಡಿಕೊಳ್ಳುವುದು ಸವಾಲು. ಈ ನಿಟ್ಟಿನಲ್ಲಿ ಈ ಪುಸ್ತಕ ಒಂದು ಸಣ್ಣ ಪ್ರಯತ್ನ ಎಂದು ನಾನು ನಂಬಿದ್ದೇನೆ ಅಲ್ಲದೆ ಇದನ್ನೂ ಮೀರಿ ತಮ್ಮ ಬಳಿ ಪ್ರಾಕ್ಟಿಕಲ್ಲಾಗಿ ಅನುಭವಿಸಿದ ಘಟನೆಗಳು ಇರಬಹುದು ನನ್ನೊಂದಿಗೆ ಹಂಚಿಕೊಳ್ಳುತ್ತೀರಾ ಎಂದು ನಂಬಿದ್ದೇನೆ.

ನಿಮ್ಮ ಅನುಭವ ಹಂಚಿಕೊಳ್ಳುವ ಆ ಕ್ಷಣಕ್ಕಾಗಿ
ಮಾತಿಗಿಳಿಯುವ ಹಂಬಲದೊಂದಿಗೆ,

- ಹುಲಿಕಲ್‌ ನಟರಾಜ್‌

 

ಪುಟಗಳು : 175

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !