1914 ರಲ್ಲಿ ಲೇಖಕ ವ್ಯಾಲೇಸ್ ಡಿ. ವ್ಯಾಟಲ್ಸ್ ರಚಿಸಿ ಪ್ರಕಟಿಸಿದ How to Promote yourself (ನಿಮಗೆ ನೀವೇ ದಾರಿದೀಪ) ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ.
ಈ ಪುಟ್ಟ ಪುಸ್ತಕದ ಕೆಲವು ಪುಟಗಳ ಬರಹ ಓದುಗರಲ್ಲಿ ಸಾಕಷ್ಟು ವಿವೇಕವನ್ನೂ, ಚೈತನ್ಯವನ್ನೂ ಹಾಗೂ ಹೊಸ ಹೊಳಹುಗಳನ್ನೂ ತುಂಬುತ್ತದೆ.
ನೀವು ಯಾವುದಾದರೊಂದು ನಿರ್ದಿಷ್ಟ ವ್ಯಾಪಾರದ ಮಾಲೀಕರಾಗಿದ್ದೀರಾ? ಅಥವಾ ನೀವು ಆಸ್ಥೆಯಿಂದ ಪ್ರೀತಿಸುವ ಉದ್ದಿಮೆಯನ್ನು ವೇಗವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೀರಾ? ನಿಮ್ಮ ಉದ್ದಿಮೆ ನಿಮಗೆ ಲಾಭದಾಯಕವೂ ಹಾಗೂ ಸಂತೋಷ ದಾಯಕವೂ ಆಗಿರಬೇಕು. ನಿಮ್ಮ ವ್ಯಾವಹಾರಿಕ ಬದುಕಿನ ಭಾಗವಾಗಿ ಏನು ಮಾಡಬೇಕು ಎಂಬುದಕ್ಕೆ ಈ ಪುಸ್ತಕ ನಿಮಗೆ ಮಾರ್ಗದರ್ಶನ ಮಾಡುತ್ತದೆ. ನಿಮ್ಮ ಪ್ರತೀ ವ್ಯವಹಾರದಲ್ಲಿಯೂ ಜೊತೆಯಾಗಿ ಧನಾತ್ಮಕ ಹಾಗೂ ಸ್ಫೂರ್ತಿದಾಯಕ ಚಿಂತನೆಯ ಅಡಿಪಾಯದಂತೆ ಇದು ನಿಮ್ಮೊಂದಿಗೆ ಸಖ್ಯ ಬೆಳೆಸುತ್ತದೆ.
ಈ ಪುಸ್ತಕ ಕೇವಲ ಉದ್ಯಮಿಗಳಿಗೆ ಮಾತ್ರವಲ್ಲ, ಉದ್ಯೋಗಿಗಳಿಗೆ ಮಾತ್ರವಲ್ಲ, ಬದುಕಿನಲ್ಲಿ ಏನಾದರೂ ಸಾಧಿಸಬೇಕೆನ್ನುವ ತುಡಿತ ಹೊಂದಿರುವ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವ ಅಪರೂಪದ ಪುಸ್ತಕ. ಇಲ್ಲಿನ ವಿಚಾರಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ತನ್ಮಯತೆಯಿಂದ ಮುಕ್ತ ಮನಸಿನಿಂದ ಓದಿದಾಗ ಮಾತ್ರ ಇದು ಪರಿಪೂರ್ಣವಾಗಿ ಅರ್ಥವಾಗುತ್ತದೆ.
ಪುಟಗಳು: 72
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !