ಪಾಕಕ್ರಾಂತಿ ಮತ್ತು ಇತರ ಕತೆಗಳು (ಆಡಿಯೋ  ಬುಕ್)

ಪಾಕಕ್ರಾಂತಿ ಮತ್ತು ಇತರ ಕತೆಗಳು (ಆಡಿಯೋ ಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಓದಿದವರು: 

ಅನಿಕೇತ್ ಶ್ರೀವತ್ಸ

ಬೆಂಗಳೂರು

ಆಡಿಯೋ ಪುಸ್ತಕದ ಅವಧಿ : 3 ಗಂಟೆ 33 ನಿಮಿಷ

 

ತೇಜಸ್ವಿ ಅವರ ಹೆಂಡತಿ ಊರಿನಲ್ಲಿರುವುದಿಲ್ಲ. ಅಡುಗೆ ಮಾಡುವ ಅಥವಾ ಮಾಡಲೇ ಬೇಕಾದ ಅನಿವಾರ್ಯತೆ ತೇಜಸ್ವಿಯವರದು. ಪಾಕಶಾಸ್ತ್ರದಲ್ಲಿ ಅವರಿಗೆ ಅವರದೇ ಆದ ಕೆಲವು ಕಲ್ಪನೆಗಳಿರುತ್ತವೆ. ಅದನ್ನು ಕಾರ್ಯರೂಪಕ್ಕೆ ತರಲು ಅವರು ಮುಂದಾದಾಗ ಹೇಗೆಲ್ಲಾ ಪೇಚಿಗೆ ಸಿಲುಕುತ್ತಾರೆ, ತಮ್ಮದೇ ವಿಭಿನ್ನ ಶೈಲಿಯನ್ನು ಅನುಸರಿಸುವಾಗ ಎದುರಾದ ಅಸಂಬದ್ಧಗಳೇನು, ಅದರಿಂದ ಪಾರಾಗಲು ಬಳಸಿದ ತಂತ್ರಗಳು..ಪಾಕಶಾಸ್ತ್ರದಲ್ಲಿ ಕ್ರಾಂತಿ ಮಾಡಲು ಹೊರಟ ತೇಜಸ್ವಿಯವರ ಪೀಕಲಾಟವೇ ಈ ಕತೆಯ ಜೀವಾಳ. ಕಣ್ಣಿನ ಸಮಸ್ಯೆಯಿರುವವರು, ಹೊಟ್ಟೆಯ ಸಮಸ್ಯೆಯಿರುವವರು ಈ ಕತೆಯನ್ನು ಓದದೇ ಇದ್ದರೆ ಒಳಿತು. ಕಾರಣ ಇದನ್ನು ಓದುವಾಗ ಅಡೆತಡೆಯಿಲ್ಲದೆ ನಗೆಯುಕ್ಕಿ ಬಂದು ಕಣ್ಣೀರು ಬಂದರೆ, ಹೊಟ್ಟೆ ಕಿವುಚಿದಂತಾದರೆ ಅದಕ್ಕೆ ತೇಜಸ್ವಿ ಕಾರಣರಲ್ಲ!

ಇದರ ಹೊರತು ಕೆಲವು ಕತೆಗಳಿವೆ. ಎಲ್ಲಾ ಕತೆಗಳು ಒಂದೊಂದು ಕಾಲಘಟ್ಟದಲ್ಲಿ ಬರೆದಂತವು. ತೇಜಸ್ವಿ ಕಥೆ ಎಂದರೇ ಕೇಳಬೇಕಾ? ಮಾಯಾ ಮೋಡಿಕಾರನಂತೆ ಕಥೆ ಹೇಳುತ್ತಾ ಹೋಗುವ ಬಗೆ ಎಂಥವರನ್ನೂ ದಂಗುಬಡಿಸುತ್ತದೆ. ಅವರೊಬ್ಬ ನಿಜವಾದ ಜಾದುಗಾರ. ಆದರೂ ತೇಜಸ್ವಿ ಎನ್ನುವ ಒಂಟಿಸಲಗ ಇಲ್ಲಿ ಬರೆದ ಕೆಲವು ಕತೆಗಳು ಮುಂಜಾನೆಯ ಸಕ್ಕರೆಯ ನಿದಿರೆಯಂತೆ ಯಾಕಾದರೂ ಇಷ್ಟು ಬೇಗ ಮುಗಿಯಿತೋ ಎನಿಸುವಂತೆ ಭಾಸವಾದರೆ, ಇನ್ನು ಕೆಲವು ಕತೆಗಳು ಇದು ತೇಜಸ್ವಿ ಬರೆದ ಕಥೆಗಳೇನಾ ಎನ್ನುವಂತಿವೆ.

 

ಕೃಪೆ - ಪುಸ್ತಕಪ್ರೇಮಿ

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.