ಪಂಡಿತ

ಪಂಡಿತ

Regular price
$2.99
Sale price
$2.99
Regular price
Sold out
Unit price
per 
Shipping does not apply

ಮಾನವ ಕುಲದ ಪ್ರತಿ ಸದಸ್ಯನಿಗೆ ಪ್ರತ್ಯೇಕವಾಗಿ ಬುದ್ಧಿವಂತಿಕೆಯನ್ನು ಕಲಿಸಲು ದೇವರಿಂದ ಸಾಧ್ಯವಿಲ್ಲ. ಆದ್ದರಿಂದಲೇ ಆತ ಪುಸ್ತಕಗಳನ್ನು ಸೃಷ್ಟಿಸಿದನು. ಕೋಟಿಗಟ್ಟಲೆ ಮೈಲುಗಳ ಪ್ರಯಾಣ ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಈ ಹೊತ್ತಗೆಯನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ತಾವೆಲ್ಲಾ ಆ ಹೆಜ್ಜೆಯನ್ನು ಇಟ್ಟಿದ್ದಿರಿ ಎನ್ನುವುದು ಸಂತೋಷದ ಸಂಗತಿ. ನೀವು ಈ ಪುಸ್ತಕವನ್ನು ಓದುವ ನಿರ್ಧಾರ ಕೈಗೊಂಡಿದ್ದೀರಿ ಅಂದರೆ ಬದುಕಿನಲ್ಲಿ ಅದ್ಭುತವಾದ ಸಂತೃಪ್ತಿಯನ್ನು ಪಡೆಯುವುದು ನಿಮ್ಮೆಲ್ಲರ ಸದುದ್ದೇಶ ಎಂಬುದು ಖಚಿತ.

ಈ ಗ್ರಂಥವು ಚೆಲುವಾದ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ, ಬೆಳೆಸಿಕೊಳ್ಳುವ, ಉಳಿಸಿಕೊಳ್ಳುವ ಪರಿಯನ್ನು ಉಪದೇಶಿಸುತ್ತದೆ. ಬಾಳಿನ ಬವಣೆಗಳನ್ನು ಎದುರಿಸುವ ಶಕ್ತಿಮಂತ್ರ ಇದರಲ್ಲಿದೆ. ಬದುಕೆಂಬ ಸಮರದಲ್ಲಿ ಗೆದ್ದು ಪಂಡಿತರಾಗುವುದು ಈ ಪುಸ್ತಕದ ಅಧ್ಯಯನದಿಂದ ಸುಲಭಸಾಧ್ಯ. ಪುಸ್ತಕದ ಪ್ರಸ್ತುತ ಶೀರ್ಷಿಕೆಯೂ ಅದಕ್ಕೆ ಪೂರಕವಾಗಿದೆ, ಪ್ರೇರಕವಾಗಿದೆ. ಈ ಎಲ್ಲಾ ಭರವಸೆಗಳ ಹಿನ್ನೆಲೆಯಲ್ಲಿ ‘ಪಂಡಿತ’ ಪುಸ್ತಕದ ಓದುವಿಕೆಯಿಂದ ಓದುಗರ ಬಾಳ್ವೆಯಲ್ಲಿ ಸಕಾರಾತ್ಮಕ ಪರಿವರ್ತನೆಗಳು ಸಂಭವಿಸಬಹುದು ಎಂದು ನಂಬಿದ್ದೇನೆ.

-ಶಿವಾನಂದ ಪಂಡಿತ

 

ಪುಟಗಳು63

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !