ಪ್ಯಾಪಿಲಾನ್‌-3

ಪ್ಯಾಪಿಲಾನ್‌-3

Regular price
$4.99
Sale price
$4.99
Regular price
Sold out
Unit price
per 
Shipping does not apply

ಹೆನ್ರಿ ಶರಾರೆ ಆಲಿಯಾಸ್ ಪ್ಯಾಪಿಲಾನ್ ನ ಸಾಹಸಗಾಥೆ. ಸುಳ್ಳು ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ತಳ್ಳಲ್ಪಟ್ಟು, ಭೀಕರ ಜೈಲುಗಳಲ್ಲಿ ದಶಕಗಳಷ್ಟು ಹೋರಾಟ ನಡೆಸಿದ ಪ್ಯಾಪಿ ಕೊನೆಗೊಮ್ಮೆ ಸ್ವತಂತ್ರನಾಗುತ್ತಾನೆ. ತನ್ನ ಮೇಲಾದ ದೌರ್ಜನ್ಯಕ್ಕೆ ಪ್ರತೀಕಾರ ತೋರುವ ಆತನ ಮನಸ್ಥಿತಿ ಕ್ರಮೇಣ ಬದಲಾಗಿ, ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿ ಬದಲಾಗುತ್ತಾನೆ. ಇದು ಒಟ್ಟು ಕತೆಯ ಒಟ್ಟು ರೂಪ, ಸ್ವಾರಸ್ಯವೆನಿಸುವುದು ಅದಲ್ಲ, ಆತನ ಕೆಚ್ಚೆದೆಯ ಹೋರಾಟ, ಹಲವಾರು ವರ್ಷಗಳ ಏಕಾಂತ ಶಿಕ್ಷೆ, ಬ್ಲಾಕ್ ಹೋಲ್ ನಂತಹ ನರಕದ ಶಿಕ್ಷೆ, ಹಲವಾರು ಪಲಾಯನದ ಪ್ರಯತ್ನ, ತಂತ್ರಗಾರಿಕೆ, ವೈಫಲ್ಯ, ಸಾವಿರಾರು ಮೈಲಿಗಳ ತೇಲುವ ತೆಪ್ಪದ ಯಾನ, ಹಲವು ಬಾರಿ ಪಲಾಯನಗೊಂಡಾಗಲೂ ಸಾಮಾನ್ಯ ಬದುಕನ್ನು ನಿರಾಕರಿಸಿ ಮತ್ತೆ ಸೆಣಸಾಟ, ಮತ್ತೆ ಕಾಣುವ ಜೈಲು, ಸೋಲು, ಭ್ರಷ್ಟ ವ್ಯವಸ್ಥೆ, ಯೋಚಿಸಲಾಗದ ರೀತಿಯಲ್ಲಿ ದೊರೆಯುವ ಸಹಾಯ ಹಸ್ತ, ಆತನ ಸ್ನೇಹ, ವೃತ್ತಿಪರತೆ, ಧೈರ್ಯ, ಕೊನೆಗೊಮ್ಮೆ ಜೀವನದಲ್ಲಿ ಒಂದೊಂದಾಗಿ ಹೆಚ್ಚಿನದನ್ನು ಗಳಿಸಿದ ಸಾಹಸದ ಕತೆ.


ಕಷ್ಟಗಳು ಪ್ಯಾಪಿಯನ್ನು ಅದೆಷ್ಟು ಬಂಡೆಯಾಗಿಸಿದ್ದವೆಂದರೆ ಭಾವನೆಗಳು, ನೋವು, ಸಾವು, ಹಸಿವು, ಶಿಕ್ಷೆ ಇದ್ಯಾವುದೂ ಗಣನೆಗೆ ಬರದಂತೆ. ಸರಣಿಯ ಮೂರು ಕೃತಿಗಳನ್ನು ಓದಿದಾಗ ಇಷ್ಟೊಂದು ಕಷ್ಟಗಳು ಒಬ್ಬನಿಗೇ ಬರುವುದುಂಟೇ ಎನ್ನುವ ಪ್ರಶ್ನೆ ಖಂಡಿತ ಬರುವುದು, ಅದೆಷ್ಟು ದೌರ್ಭಾಗ್ಯವಿರಬಹುದು ಎಂದನಿಸುತ್ತದೆ. ಹಾಗೆಂದು ಲೇಖಕರು ಎಂದಿಗೂ ಪ್ಯಾಪಿಯ ಮೇಲೆ ಕರುಣೆ ಬರುವಂತೆ ಚಿತ್ರಿಸಿಲ್ಲ, ಬದಲಾಗಿ ಪ್ರತೀ ಬಾರಿ ಏಟು ಬಿದ್ದಾಗಲೂ ಹೇಗೆ ಪ್ಯಾಪಿ ಮೈ ಕೊಡವಿ ನಿಂತ ಎನ್ನುವುದನ್ನು ನಿರೂಪಿಸಿದ್ದಾರೆ. ಕಷ್ಟಪಟ್ಟು ಬಂದ ಸ್ವಾತಂತ್ರ್ಯ, ಅದನ್ನು ಅನುಭವಿಸಲಾಗದ ಚಡಪಡಿಕೆ, ವ್ಯವಸ್ಥೆಯ ಮೇಲಿದ್ದ, ಸಿಟ್ಟು ಸೇಡು, ಪ್ರತೀ ಬಾರಿ ಸೋತಾಗಿನ ಹತಾಶೆ, ಎಲ್ಲದ್ದಕ್ಕೂ ಹೆಚ್ಚಾಗಿ ಇನ್ನು ಕಳೆದುಕೊಳ್ಳಲು ಏನೂ ಉಳಿದಿಲ್ಲ ಎನ್ನುವಂತಹ ಮನೋಧರ್ಮದ ಪ್ರಯತ್ನ. ಪ್ರತೀ ದಿನವೂ ಸಾವಿನೊಂದಿಗೆ ಸೆಣಸಾಡುವ ಬದುಕು. ಭೂಗತಲೋಕದ ಅಂಗಳದಲ್ಲೇ ಬೆಳೆದರೂ ಅಹಿಂಸೆ, ಶೋಷಿತರ ಪರವಾಗಿ ದನಿಯೆತ್ತುವ ನಡೆ, ವಿಚಿತ್ರವೆನ್ನಿಸುವ ನಡವಳಿಕೆಗಳು, ಹಲವೊಮ್ಮೆ ಎಲ್ಲವೂ ಸರಿಯಿದ್ದಾಗಲೂ ಮತ್ತೆ ಕಷ್ಟಗಳೆಡೆಗೆ ಮುಖ ಮಾಡುತ್ತಿದ್ದ ಪ್ಯಾಪಿಯನ್ನು ನೋಡಿದಾಗ ಕತೆಯಂತೂ ಜಿಗುಟೆನಿಸುವುದು. ಕತೆಯಾದರೆ ಸರಿ, ಆದರೆ ಇದು ಹೆನ್ರಿಯ ಜೀವನ, ನಾವು ನಿರೀಕ್ಷಿಸುವ ಸ್ಕ್ರಿಪ್ಟೆಡ್ ಕತೆಯಲ್ಲ.

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಲೊಂದಾಗು ಎನ್ನುವ ಗುಂಡಪ್ಪನವರ ಮಾತಿಗೆ ಅನ್ವರ್ಥವೆನ್ನುವಂತಹ ಪ್ಯಾಪಿಯ ಹೋರಾಟದ ಕತೆ, ಪ್ರದೀಪರ ಅನುವಾದ ಓದಿಸಿಕೊಂಡು ಹೋಗುತ್ತದೆ. ಇಷ್ಟು ಸಾಕು, ಮಿಕ್ಕಿದ್ದು ನೀವು ಓದಿ. 

 

ಕೃಪೆ 

Gowrav Shenoy - goodreads


ಪುಟಗಳು: 274

 

ಈ ಸರಣಿಯ ಮೂರನೆಯ ಪುಸ್ತಕ .

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !